• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಗಳ ಜಾಗ ತುಂಬಲಿರುವ ಸಿದ್ದಲಿಂಗ ಸ್ವಾಮಿ ಅವರ ವ್ಯಕ್ತಿ ಚಿತ್ರ

|
   Siddaganga Swamiji : ಸಿದ್ದಗಂಗಾ ಮಠದ ಹೊಸ ಪೀಠಾಧಿಪತಿಗಳಾದ ಸಿದ್ದಲಿಂಗ ಸ್ವಾಮಿಗಳ ಪರಿಚಯ | Oneindia Kannada

   ತುಮಕೂರು, ಜನವರಿ 23: ನೂರಾರು ವರ್ಷಗಳ ಇತಿಹಾಸವಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಕಲಿಯುತ್ತಿರುವ, ಕೋಟ್ಯಂತರ ಮಂದಿ ಭಕ್ತಾದಿಗಳ ಹೊಂದಿರುವ ಸಿದ್ದಗಂಗಾ ಮಠ, ಶ್ರೀಗಳು ಇಲ್ಲದೆ ಅನಾಥವಾಗಿದೆ.

   ಹಲವು ದಶಕಗಳಿಂದ ಮಠವನ್ನು, ಈಗಿರುವ ಉಚ್ರಾಯ ಸ್ಥಿತಿಗೆ ತಲುಪಸಿದ ಶಿವಕುಮಾರ ಸ್ವಾಮೀಜಿ ಅವರು ಕಾಲವಾಗಿದ್ದಾರೆ. ಈಗ ಎಲ್ಲರ ಕಣ್ಣುಗಳು ಕಿರಿಯ ಶ್ರೀಗಳಾಗಿದ್ದ ಸಿದ್ದಲಿಂಗ ಸ್ವಾಮೀಜಿ ಅವರ ಮೇಲೆ ನೆಟ್ಟಿವೆ. ಕೆಲವರು ಭರವಸೆಯ ಕಣ್ಣಿಂದ ನೋಡಿದರೆ ಇನ್ನು ಕೆಲವರು ಇವರ ಕೈಲಿ ಮಠ ನಡೆಸಲು ಸಾಧ್ಯವಾ ಎಂಬ ಅನುಮಾನದ ಕಣ್ಣುಗಳಿಂದಲೂ ನೋಡುತ್ತಿದ್ದಾರೆ.

   ಗದ್ದುಗೆಯಲ್ಲಿ ಐಕ್ಯರಾದ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು

   ಸಿದ್ದಲಿಂಗ ಸ್ವಾಮಿಗಳು 2011 ರಲ್ಲಿಯೇ ಶಿವಕುಮಾರ ಸ್ವಾಮೀಜಿಗಳಿಂದ ಮಠದ ಅಧ್ಯಕ್ಷ ಪಟ್ಟಪಡೆದು ಆಗಿನಿಂದಲೂ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಸಿದ್ದಗಂಗಾ ಮಠವನ್ನು ನಡೆಸುತ್ತಾ ಬರುತ್ತಿದ್ದಾರೆ. ಶ್ರೀಗಳ ನೆರಳಾಗಿಯೇ ಇದ್ದು ಹಲವು ವರ್ಷಗಳ ಕಾಲ ಅವರ ಕಾರ್ಯ ವೈಖರಿ, ಅವರ ಜನಾನುರಾಗಿತನವನ್ನು ಗಮನಿಸಿದ್ದಾರೆ. ಮೇಲಾಗಿ ಸಿದ್ದಲಿಂಗ ಸ್ವಾಮಿಗಳು ಶಿವಕುಮಾರಸ್ವಾಮಿ ಅವರು ಮೆಚ್ಚಿ ಆರಿಸಿದ ಉತ್ತರಾಧಿಕಾರಿ ಹಾಗಾಗಿ ಅವರ ಸಾಮರ್ಥ್ಯದ ಮೇಲೆ ಅನುಮಾನಪಡುವ ಕಾರಣಗಳಿಲ್ಲ.

   ವರ್ಷಗಳ ಹಿಂದೆಯೇ ಅಧಿಕಾರ ಹಸ್ತಾಂತರ

   ವರ್ಷಗಳ ಹಿಂದೆಯೇ ಅಧಿಕಾರ ಹಸ್ತಾಂತರ

   ಸಿದ್ದಗಂಗಾ ಮಠಕ್ಕೆ ಇಂದಿನಿಂದ ಸಿದ್ದಲಿಂಗ ಸ್ವಾಮಿಗಳು ಪೀಠಾಧಿಪತಿಗಳಾಗಿರುತ್ತಾರೆ. ಕೆಲವು ವರ್ಷಗಳ ಹಿಂದೆಯೇ ಸಿದ್ದಲಿಂಗ ಸ್ವಾಮಿಗಳನ್ನು ಶ್ರೀ ಮಠದ ಪೀಠಾಧಿಪತಿ ಮಾಡಲಾಗಿತ್ತು. ಆದರೂ ಸಹ ಸಿದ್ದಲಿಂಗಯ್ಯ ಅವರು ಪೀಠಾಧಿಪತಿ ಎಂದು ಅಹಂ ಅನ್ನು ತೋರದೆ ವಿನಯದಿಂದ ಶಿವಕುಮಾರಸ್ವಾಮೀಜಿ ಅವರ ನೆರಳಿನಲ್ಲೇ ಇದ್ದು ಕಾರ್ಯನಿರ್ವಹಿಸಿದರು.

   ಕುಂಚಗಲ್‌ನಲ್ಲಿ ಜನಿಸಿರುವ ಸಿದ್ದಲಿಂಗ ಸ್ವಾಮಿ

   ಕುಂಚಗಲ್‌ನಲ್ಲಿ ಜನಿಸಿರುವ ಸಿದ್ದಲಿಂಗ ಸ್ವಾಮಿ

   ಸಿದ್ದಲಿಂಗ ಸ್ವಾಮಿಗಳು 1963 ರಲ್ಲಿ ಜುಲೈ 23 ರಂದು ಮಾಗಡಿಯ ಕಂಚುಗಲ್‌ನಲ್ಲಿ ಸದಾಶಿವಯ್ಯ ಮತ್ತು ಶಿವರುದ್ರಮ್ಮ ಅವರ ಪುತ್ರನಾಗಿ ಜನಿಸಿದ್ದರು. ಸಿದ್ದಲಿಂಗ ಸ್ವಾಮಿಗಳು ಪೂರ್ವಾಶ್ರಮದ ಹೆಸರು ವಿಶ್ವನಾಥ. ಕುಂಚಗಲ್ ಮಠದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಸಿದ್ದಲಿಂಗ ಸ್ವಾಮಿಗಳು, ಸಿದ್ದಗಂಗಾ ಮಠಕ್ಕೆ ಪಿಯುಸಿ ಕಲಿಯಲು ಬಂದರು. ಆದರೆ ಅಂದು ಇದೇ ಮಠಕ್ಕೆ ಪೀಠಾಧಿಪತಿ ಆಗುವೆನೆಂಬ ಕಲ್ಪನೆಯೂ ಸಿದ್ದಲಿಂಗ ಸ್ವಾಮಿಗಳಿಗೆ ಇರಲಿಲ್ಲ.

   ಶಿವಣ್ಣ ಡಾ.ಶಿವಕುಮಾರಸ್ವಾಮಿಯಾಗಿ ಬೆಳೆದಿದ್ದರ ಹಿಂದಿನ ರೋಚಕ ಕಥೆ

   ಸಿದ್ದಗಂಗಾ ಮಠದಲ್ಲೇ ಕಲಿತಿರುವ ಸಿದ್ದಲಿಂಗ ಸ್ವಾಮಿ

   ಸಿದ್ದಗಂಗಾ ಮಠದಲ್ಲೇ ಕಲಿತಿರುವ ಸಿದ್ದಲಿಂಗ ಸ್ವಾಮಿ

   ಸಿದ್ದಗಂಗಾ ಹಳೆ ಮಠದಲ್ಲಿ ಸಂಸ್ಕೃತ ಮತ್ತು ವೇದಗಳನ್ನು ಅಭ್ಯಾಸ ಮಾಡಿದ ಸಿದ್ದಲಿಂಗ ಸ್ವಾಮಿಗಳು ಅಧ್ಯಾತ್ಮದ ಮೇಲೆ ಆಸಕ್ತಿ ಬೆಳೆಸಿಕೊಂಡರು ಅದೇ ಸಮಯದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಒಡನಾಟವೂ ದೊರಕಿತ್ತು. ಅವರ ಬಳಿ ಚರ್ಚೆಗಳು, ಅವರ ಸೇವೆಯಲ್ಲಿ ನಿರತರಾಗಿದ್ದ ಸಿದ್ದಲಿಂಗ ಸ್ವಾಮಿಗಳಲ್ಲಿನ ಸೇವಾಭಾವ, ತ್ಯಾಗ ಭಾವ ಗುರುತಿಸಿದ ಶಿವಕುಮಾರ ಸ್ವಾಮೀಜಿ ಅವರು ಸಿದ್ದಲಿಂಗ ಸ್ವಾಮಿ ಅವರನ್ನು 1988 ರಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದರು.

   2011 ರಲ್ಲಿ ಮಠದ ಅಧಿಕಾರ ಹಸ್ತಾಂತರ

   2011 ರಲ್ಲಿ ಮಠದ ಅಧಿಕಾರ ಹಸ್ತಾಂತರ

   ಆ ನಂತರ 2011, ಆಗಸ್ಟ್‌ 04 ರಂದು ಸಿದ್ದಗಂಗಾ ಮಠದ ಅಧಿಕಾರವನ್ನು ಕಾನೂನು ಬದ್ಧವಾಗಿ ಸಿದ್ದಲಿಂಗ ಸ್ವಾಮಿ ಅವರಿಗೆ ನೀಡಲಾಯಿತು. ಈ ಕಾರ್ಯವನ್ನು ಶಿವಕುಮಾರ ಸ್ವಾಮಿಗಳವರೇ ನೆರವೇರಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಸ್ಥಳದಲ್ಲಿ ಹಾಜರಿದ್ದರು. ಆಗಲೇ ಅಧಿಕಾರ ಸಿಕ್ಕಿದ್ದರೂ ಸಹ ಶಿವಕುಮಾರ ಸ್ವಾಮಿ ಅವರ ಹಿಂದೆ ನಿಂತೇ ಅವರು ಮಠವನ್ನು ನಿಭಾಯಿಸಿದರೆ ವಿನಃ ಮಠದ ಮೇಲೆ ಅಧಿಕಾರ ಹೊಂದಿದವರಾಗಿ ಆಳ್ವಿಕೆ ಮಾಡಲಿಲ್ಲ.

   ರೇಲಾ ಆಸ್ಪತ್ರೆ ವೈದ್ಯರಿಗೆ ದೇವರನ್ನು ತೋರಿಸುವೆ ಎಂದಿದ್ದ ಸಿದ್ದಗಂಗಾ ಶ್ರೀಗಳು

   ಸರ್ವಸ್ವನ್ನೂ ತ್ಯಾಗ ಮಾಡಿ ಕಟ್ಟಿದ ಮಠ

   ಸರ್ವಸ್ವನ್ನೂ ತ್ಯಾಗ ಮಾಡಿ ಕಟ್ಟಿದ ಮಠ

   ಸಿದ್ದಗಂಗಾ ಶ್ರೀಗಳಿಗಿದ್ದ ಅಪಾರವಾದ ಧಾರ್ಮಿಕ ಪ್ರಭೆ ಸಿದ್ದಲಿಂಗ ಸ್ವಾಮಿಗಳಿಗೆ ಬರಲಾರದೇನೋ. ಶಿವಕುಮಾರ ಸ್ವಾಮೀಜಿ ಅವರು ಸರ್ವಸ್ವನ್ನೂ ತ್ಯಜಿಸಿ ಕಟ್ಟಿದ ಬೃಹತ್ ಸೇವಾ ಮಂದಿರ ಸಿದ್ದಗಂಗಾ ಮಠದ ಪೂರ್ಣ ಜವಾಬ್ದಾರಿ ಸಿದ್ದಲಿಂಗ ಸ್ವಾಮಿಗಳ ಹೆಗಲಮೇಲೆ ಇದೆ. ವಿಶ್ವಮಟ್ಟದಲ್ಲಿ ಹೆಸರುಗಳಿಸಿರುವ ಮಠವನ್ನು ಅದೇ ವೈಭವದಲ್ಲಿ, ಭಕ್ತಿ-ಭಾವ ಕೇಂದ್ರವಾಗಿ, ಸೇವಾ ಸಾಗರವಾಗಿ ಮುಂದುವರೆಸಿಕೊಂಡು ಹೋಗಬೇಕಿದೆ. ಶಿವಕುಮಾರ ಸ್ವಾಮಿ ಅವರೇ ಇಷ್ಟಪಟ್ಟು ಆರಿಸಿದ ಸಿದ್ದಲಿಂಗ ಸ್ವಾಮಿಗಳಿಗೆ ಆ ಶಕ್ತಿ, ಆ ಸಂಕಲ್ಪ ಇದೆ ಎಂದೇ ರಾಜ್ಯವು ನಂಬಿದೆ.

   ಮಾಗಡಿಯ ಹೆಮ್ಮೆಯ ಪುತ್ರ ಸಿದ್ದಲಿಂಗ ಶ್ರೀಗಳು

   English summary
   Here is the information about Siddaganga Mutt new seer Siddalinga swamy. He was appointed as Mutt's administrator by Shivakumara Swamy 8 years back.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X