ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜ್ ವಿದ್ಯಾರ್ಥಿಗಳಿಗೆ ಅತಿದೊಡ್ಡ ಜೈವಿಕ ತಂತ್ರಜ್ಞಾನ ರಸಪ್ರಶ್ನೆ

|
Google Oneindia Kannada News

ಬೆಂಗಳೂರು, ಅ 22: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐ.ಟಿ. ಬಿ.ಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ತನ್ನ ಹೆಮ್ಮೆಯ ಸಮಾವೇಶವಾದ 23ನೇ ಆವೃತ್ತಿಯ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ' ಯನ್ನು (ಬಿಟಿಎಸ್) 2020ರ ನವೆಂಬರ್ 19ರಿಂದ 21ರವರೆಗೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಈ ಬಾರಿಯ ಶೃಂಗಸಭೆಯ ಮುಖ್ಯ ಆಶಯವು 'ಭವಿಷ್ಯ ಈಗಲೇ' (Next is Now) ಎಂದು ನಿರ್ಧರಿಸಲಾಗಿದೆ. ಈ ಡಿಜಿಟಲ್ ಸಮಾವೇಶವು ವಿವಿಧ ಕ್ಷೇತ್ರಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನದ ಇತ್ತೀಚಿನ ಸಂಶೋಧನೆಗಳು ಮತ್ತು ಸಂವಾದಗಳ ಬಗ್ಗೆ ಬೆಳಕು ಚೆಲ್ಲಲಿದೆ. 'ಬಿಟಿಎಸ್'ನಲ್ಲಿ ನಡೆಯಲಿರುವ ಜೈವಿಕ ರಸಪ್ರಶ್ನೆ (BioQuiz) ಸ್ಪರ್ಧೆಯು, ಶೃಂಗಸಭೆಯ ಪ್ರಮುಖ ಘಟನೆಯಾಗಿರಲಿದೆ.

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುವ ದೇಶದ ಏಕೈಕ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಇದಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಸದ್ಯದ ವಿದ್ಯಮಾನ ಮತ್ತು ಆಗುಹೋಗುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮತ್ತು ಜೈವಿಕ ತಂತ್ರಜ್ಞಾನ ವಿಷಯದ ಬಗ್ಗೆ ಆಳವಾದ ಜ್ಞಾನ ಸಂಪಾದಿಸುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದು ಈ ರಸಪ್ರಶ್ನೆ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.

India’s Largest State Level Biotech Quiz announced

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಕರ್ನಾಟಕದ ಪ್ರತಿಭೆಗಳ ಅನಾವರಣಕ್ಕೆ ಜೈವಿಕ ರಸಪ್ರಶ್ನೆ ಕಾರ್ಯಕ್ರಮವು ವೇದಿಕೆ ಕಲ್ಪಿಸಿಕೊಡಲಿದೆ. ರಾಜ್ಯದಲ್ಲಿನ ಎಲ್ಲ ಕಾಲೇಜುಗಳ ಪದವಿಪೂರ್ವ ವಿದ್ಯಾರ್ಥಿಗಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ತಮ್ಮದೇ ಸಾಧನಗಳಲ್ಲಿ ಆನ್‍ಲೈನ್ ಕ್ವಿಜ್‍ನಲ್ಲಿ ಭಾಗವಹಿಸಲು ಲಿಂಕ್ ಕೊನೆಯಲ್ಲಿ ಕೊಡಲಾಗಿದೆ. ಅಂತರ್ಜಾಲ ತಾಣದಲ್ಲಿ ತಮ್ಮ ಹೆಸರನ್ನು ದಾಖಲಿಸಬಹುದು. ನೋಂದಣಿಯು 2020ರ ಅಕ್ಟೋಬರ್ 28ರಿಂದ ಆರಂಭಗೊಳ್ಳಲಿದೆ.

ರಸಪ್ರಶ್ನೆ ಕಾರ್ಯಕ್ರಮವು ಆನ್‍ಲೈನ್‍ನಲ್ಲಿ 3 ಸುತ್ತುಗಳನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳನ್ನು 6 ವಲಯಗಳನ್ನಾಗಿ ವಿಂಗಡಿಸಲಾಗುವುದು. ಈ 6 ವಲಯಗಳ ಸುತ್ತಿನ ಸ್ಪರ್ಧೆಯ ವಿಜೇತರು, ಪ್ರಶಸ್ತಿ ಪಡೆಯಲು ಅಂತಿಮ ಸುತ್ತಿನ ವರ್ಚುವಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ.

Recommended Video

ಗಾಂಜಾ ಕೆಟ್ಟದಾ ಈ ಸ್ಟೋರಿ ನೋಡಿ | Unknown facts about Cannabis | Oneindia Kannada

* ಮೊದಲ ಸುತ್ತು: ಪ್ರಾಥಮಿಕ ಹಂತದ ಆನ್‍ಲೈನ್ ಪರೀಕ್ಷೆ (2020ರ ನವೆಂಬರ್ 1)
* ಎರಡನೆ ಸುತ್ತು: ಮೊದಲ ಸುತ್ತಿನಲ್ಲಿ ಅರ್ಹರಾದವರಿಗೆ ವಲಯ ಹಂತದ ಅಂತಿಮ ಸ್ಪರ್ಧೆ ( 2020ರ ನವೆಂಬರ್ 6, 7 ಮತ್ತು 8)
* ಮೂರನೇ ಸುತ್ತು: 6 ವಲಯಗಳಿಂದ ವಿಜೇತರಾದ 6 ವಿದ್ಯಾರ್ಥಿಗಳಿಗಾಗಿ ಅಂತಿಮ ಸ್ಪರ್ಧೆ (2020, ನವೆಂಬರ್ 10)

English summary
Government of Karnataka announces India’s Largest State Level 12th edition of Biotech Quiz as a part of 23rd edition of the flagship event Bengaluru Tech Summit 2020 from November 19th to 21st, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X