ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವೀಯತೆ ಮೆರೆದ ರೈಲ್ವೆ ಇಲಾಖೆ: ರಾತ್ರೋ ರಾತ್ರಿ ಸ್ಯಾನಿಟರಿ ಪ್ಯಾಡ್ ರವಾನೆ

|
Google Oneindia Kannada News

ಬೆಂಗಳೂರು, ಜನವರಿ 17: ಸಂಕಷ್ಟದಲ್ಲಿರುವ ಪ್ರಯಾಣಿಕರ ಟ್ವೀಟ್‌ಗೆ ರೈಲ್ವೆ ಇಲಾಖೆ ಕೂಡಲೇ ಸ್ಪಂದಿಸಿ ಅವರ ನೆರವಿಗೆ ಧಾವಿಸುವ ಅನೇಕ ನಿದರ್ಶನಗಳನ್ನು ನೋಡಿದ್ದೇವೆ. ರೈಲ್ವೆ ಇಲಾಖೆಯ ಮತ್ತೊಂದು ಮಾನವೀಯ ಮುಖ ಪ್ರಕಟವಾಗಿದೆ.

ಈ ಘಟನೆ ನಡೆದಿರುವುದು ನಮ್ಮ ರಾಜ್ಯದಲ್ಲಿಯೇ.

ಮೈಸೂರಿಗರಿಗೆ ಸಿಹಿ ಸುದ್ದಿ : ಬೆಂಗಳೂರಿಗೆ ಮತ್ತೆರಡು ರೈಲು ಸಂಚಾರ ಮೈಸೂರಿಗರಿಗೆ ಸಿಹಿ ಸುದ್ದಿ : ಬೆಂಗಳೂರಿಗೆ ಮತ್ತೆರಡು ರೈಲು ಸಂಚಾರ

ವಿಶಾಲ್ ಖಾನಾಪುರೆ ಎಂಬುವವರು ತಮ್ಮ ಸ್ನೇಹಿತೆಯೊಂದಿಗೆ ಬೆಂಗಳೂರಿನಿಂದ ಹೊಸಪೇಟೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಸ್ನೇಹಿತೆ ಋತುಸ್ರಾವಕ್ಕೆ ಒಳಗಾದರು. ಅವರ ಬಳಿ ಸ್ಯಾನಿಟರಿ ಪ್ಯಾಡ್ ಇರಲಿಲ್ಲ.

IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ? IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?

ವಿಶಾಲ್ ಅವರು ಕೂಡಲೇ ಸ್ಯಾನಿಟರಿ ನ್ಯಾಪ್‌ಕಿನ್ ಮತ್ತು ಪೆಫ್ಟಾಲ್ ಸ್ಪಾಸ್ (ಪೈನ್ ಕಿಲ್ಲರ್) ಅಗತ್ಯವಿದೆ ಎಂದು ಭಾರತೀಯ ರೈಲ್ವೆಯ ಅಧಿಕಾರಿಗಳಿಗೆ ಟ್ವೀಟ್ ಮಾಡಿದರು.

ಐಆರ್‌ಸಿಟಿಸಿ ಮತ್ತು ಇಂಡಿಯನ್ ರೈಲ್ವೆ ಸೇವಾಕ್ಕೆ ಕೆಲವು ಬಾರಿ ಕರೆ ಮತ್ತು ಟ್ವೀಟ್ ಮಾಡಿದ ಬಳಿಕ ಅವರಿಗೆ ತಕ್ಷಣವೇ ಪ್ರತಿಕ್ರಿಯೆ ಬಂದಿತು.

Indian Railways sends sanitary pad to woman in bengaluru-hospet train

ಅವರು ರೈಲು ಹತ್ತಿದ 140 ಕಿ.ಮೀ. ದೂರದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಮತ್ತು ಔಷಧವನ್ನು ಒದಗಿಸಲಾಯಿತು.

'ರಾತ್ರಿ 11.06ಗೆ ಅಧಿಕಾರಿಯೊಬ್ಬರು ನನ್ನ ಸ್ನೇಹಿತೆಯನ್ನು ಸಂಪರ್ಕಿಸಿ ಅವರ ಅಗತ್ಯವನ್ನು ಖಚಿತಪಡಿಸಿಕೊಂಡರು. ಅವರ ಪಿಎನ್‌ಆರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಪಡೆದುಕೊಂಡರು. ರಾತ್ರಿ 2 ಗಂಟೆಗೆ ರೈಲು ಅರಸೀಕೆರೆ ನಿಲ್ದಾಣ ತಲುಪಿತು. ಮೈಸೂರು ವಿಭಾಗದ ಅಧಿಕಾರಿಗಳು ಆಕೆಗೆ ಬೇಕಾದ ಎಲ್ಲ ಸಾಮಗ್ರಿಗಳೊಂದಿಗೆ ಸಿದ್ಧರಿದ್ದರು. ಇಷ್ಟು ಬೇಗನೆ ಸ್ಪಂದನೆ ಕಂಡು ನಮಗೆಲ್ಲ ಅಚ್ಚರಿಯಾಯಿತು' ಎಂದು ವಿಶಾಲ್ ಹೇಳಿದ್ದಾರೆ.

English summary
Indian Railways responded immediately to a tweet by passenger requesting tweet for sanitary napkin for a woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X