ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ತಿಂಗಳಿನಿಂದ ಹೆಚ್ಚುವರಿ ಕೊರೊನಾ ಲಸಿಕೆ ರಫ್ತು ಪುನರಾರಂಭ; ಮಾಂಡವಿಯಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಮುಂದಿನ ತಿಂಗಳು 'ಲಸಿಕಾ ಮೈತ್ರಿ' ಕಾರ್ಯಕ್ರಮದಡಿಯಲ್ಲಿ ಭಾರತವು ಹೆಚ್ಚುವರಿ ಕೊರೊನಾ ಲಸಿಕೆಗಳ ರಫ್ತನ್ನು ಪುನರಾರಂಭ ಮಾಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

'ಕೋವ್ಯಾಕ್ಸ್ ಜಾಗತಿಕ ಲಸಿಕಾ ಕಾರ್ಯಕ್ರಮದೆಡೆಗೆ ತನ್ನ ಬದ್ಧತೆಯನ್ನು ಪೂರೈಸಲು ಭಾರತ ಕೊರನಾ ಲಸಿಕೆ ರಫ್ತನ್ನು ಪುನರಾರಂಭ ಮಾಡಲಿದೆ. ತನ್ನ ನಾಗರಿಕರಿಗೆ ಲಸಿಕೆ ನೀಡುವುದನ್ನು ಪ್ರಮುಖ ಆದ್ಯತೆಯಾಗಿಟ್ಟುಕೊಂಡು ಲಸಿಕೆಗಳನ್ನು ರಫ್ತು ಮಾಡಲಾಗುವುದು' ಎಂದು ಸೋಮವಾರ ಸಚಿವರು ತಿಳಿಸಿದ್ದಾರೆ.

 ಶೀಘ್ರವೇ ಭಾರತದಿಂದ ಕೊರೊನಾ ಲಸಿಕೆಗಳ ರಫ್ತು ಪುನರಾರಂಭ ಶೀಘ್ರವೇ ಭಾರತದಿಂದ ಕೊರೊನಾ ಲಸಿಕೆಗಳ ರಫ್ತು ಪುನರಾರಂಭ

ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ 30 ಕೋಟಿ ಡೋಸ್ ಕೊರೊನಾ ಲಸಿಕೆಗಳನ್ನು ಹಾಗೂ ಮುಂದಿನ ಮೂರು ತಿಂಗಳುಗಳಲ್ಲಿ ನೂರು ಕೋಟಿ ಡೋಸ್‌ಗಳನ್ನು ಪಡೆಯಲಿದೆ. ಹೆಚ್ಚುವರಿ ಡೋಸ್‌ಗಳನ್ನು ರಫ್ತು ಮಾಡುವ ಕಾರ್ಯವನ್ನು ಭಾರತ ಮುಂದಿನ ತಿಂಗಳು ಪುನರಾರಂಭ ಮಾಡಲಿದೆ' ಎಂದು ತಿಳಿಸಿದರು.

India To Resume Surplus Corona Vaccines Export From Next Month

ನಮ್ಮ ನಾಗರಿಕರಿಗೆ ಕೊರೊನಾ ಲಸಿಕೆ ನೀಡುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂಬುದನ್ನು ಪುನರುಚ್ಚರಿಸಿರುವ ಮಾಂಡವಿಯಾ, 'ಮುಂದಿನ ತ್ರೈಮಾಸಿಕದಲ್ಲಿ, (ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ) ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ಲಸಿಕೆಗಳ ರಫ್ತನ್ನು ಭಾರತ ಆರಂಭಿಸಲಿದೆ ಹಾಗೂ ಕೋವ್ಯಾಕ್ಸ್‌ ಕಡೆಗೆ ತನ್ನ ಬದ್ಧತೆಯನ್ನು ಮುಂದುವರೆಸಲಿದೆ ಎಂದು ಹೇಳಿದರು.

'ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಲಸಿಕೆ ರಫ್ತನ್ನು ಆರಂಭಿಸಲಾಗುತ್ತಿದೆ. ಲಸಿಕೆಗಳ ಹೆಚ್ಚುವರಿ ಪೂರೈಕೆಯನ್ನು ಕೊರೊನಾ ವಿರುದ್ಧದ ಸಾಮೂಹಿಕ ಹೋರಾಟ್ಕಾಗಿ ನೀಡುವ ಮೂಲಕ ವಿಶ್ವಕ್ಕೆ ನೆರವಾಗುವ ಬದ್ಧತೆಯನ್ನು ಪೂರೈಸಲಾಗುತ್ತದೆ' ಎಂದು ಹೇಳಿದರು.

ಭಾರತದ ಕೋವ್ಯಾಕ್ಸಿನ್‌ಗೆ WHO ಅನುಮೋದನೆ ಇನ್ನಷ್ಟು ವಿಳಂಬಭಾರತದ ಕೋವ್ಯಾಕ್ಸಿನ್‌ಗೆ WHO ಅನುಮೋದನೆ ಇನ್ನಷ್ಟು ವಿಳಂಬ

ಭಾರತದಲ್ಲಿ ಕೊರೊನಾ ಲಸಿಕೆಗಳ ಸ್ಥಳೀಯ ಸಂಶೋಧನೆ ಹಾಗೂ ಉತ್ಪಾದನೆಯ ಮಹತ್ವದ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಅವಿರತ ಪ್ರಯತ್ನ ಹಾಗೂ ಮಾರ್ಗದರ್ಶನದಿಂದಾಗಿ ಭಾರತ ಏಕಕಾಲದಲ್ಲಿ ಲಸಿಕೆಗಳ ಸಂಶೋಧನೆ ಹಾಗೂ ಉತ್ಪನ್ನವನ್ನು ಕೈಗೆತ್ತಿಕೊಳ್ಳುತ್ತಿದೆ ಎಂದರು.

'ಭಾರತದ ಲಸಿಕಾ ಅಭಿಯಾನವು ವಿಶ್ವಕ್ಕೇ ಮಾದರಿಯಾಗಿದೆ. ಹಾಗೂ ಅತ್ಯಂತ ವೇಗದಲ್ಲಿ ಮುನ್ನಡೆಯುತ್ತಿದೆ' ಎಂದು ಸಂತಸ ವ್ಯಕ್ತಪಡಿಸಿದರು.

India To Resume Surplus Corona Vaccines Export From Next Month

ದೇಶದಲ್ಲಿ ಬಹುಪಾಲು ಅರ್ಹ ವಯಸ್ಕರಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆಗಳ ರಫ್ತನ್ನು ಪುನರಾರಂಭಿಸಲು ಚಿಂತನೆ ನಡೆಸುತ್ತಿರುವುದಾಗಿ ಈಚೆಗೆ ಸರ್ಕಾರಿ ಮೂಲಗಳು ತಿಳಿಸಿದ್ದವು.

ಕೊರೊನಾ ಎರಡನೇ ಅಲೆ ಸಂದರ್ಭ ದೇಶದಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದಂತೆ ತನ್ನದೇ ಜನಸಂಖ್ಯೆಗೆ ಲಸಿಕೆ ನೀಡುವ ಆದ್ಯತೆಯೊಂದಿಗೆ ಭಾರತ ಏಪ್ರಿಲ್ ತಿಂಗಳಿನಲ್ಲಿ ಲಸಿಕೆ ರಫ್ತನ್ನು ನಿಲ್ಲಿಸಿತ್ತು.

ದೇಶದಲ್ಲಿ ಡಿಸೆಂಬರ್ ವೇಳೆಗೆ ತನ್ನ ಎಲ್ಲಾ 94 ಮಿಲಿಯನ್ ಅರ್ಹ ಜನಸಂಖ್ಯೆಗೆ ಲಸಿಕೆ ನೀಡಲು ಗುರಿ ಹೊಂದಿದ್ದು, ಇದುವರೆಗೆ 61% ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ನೀಡಿದೆ. ಹೀಗಾಗಿ ಲಸಿಕೆ ರಫ್ತು ಪುನರಾರಂಭಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ.

ಭಾರತ ಕೊರೊನಾ ಲಸಿಕೆ ರಫ್ತನ್ನು ನಿಲ್ಲಿಸುವ ಮೊದಲು ಸುಮಾರು ನೂರು ದೇಶಗಳಿಗೆ 66 ದಶಲಕ್ಷ ಡೋಸ್‌ಗಳನ್ನು ನೀಡಿತ್ತು ಹಾಗೂ ಮಾರಾಟವನ್ನೂ ಮಾಡಿತ್ತು. ಭಾರತದಲ್ಲಿ ಸದ್ಯ ಕೊರೊನಾ ಲಸಿಕೆಗಳ ಉತ್ಪಾದನೆಯೂ ಹೆಚ್ಚಾಗಿದ್ದು, ರಫ್ತು ಮಾಡಲು ಸಕಾಲ ಎಂದು ಪರಿಗಣಿಸಲಾಗುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್ ಕೋವಿಶೀಲ್ಡ್‌ ಲಸಿಕೆ ಉತ್ಪಾದನೆಯನ್ನು ಏಪ್ರಿಲ್ ತಿಂಗಳಿನಿಂದ ದ್ವಿಗುಣಗೊಳಿಸಿದೆ. ಈ ಎಲ್ಲಾ ಅಂಶಗಳು ಲಸಿಕೆ ಪೂರೈಕೆ ಮಾಡಲು ಪ್ರೇರಣೆ ನೀಡಿವೆ.

ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ವೇಗವಾಗಿ ನಡೆಯುತ್ತಿದ್ದು, ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರು ಮತ್ತು ಎರಡು ಡೋಸ್ ಪೂರ್ಣಗೊಳಿಸಿದವರಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Recommended Video

ಲೈವ್ ಶೋನಲ್ಲಿ ಪಾಕ್ ಆ್ಯಂಕರ್ ಮಾಡಿದ ಕೆಲಸ ನೋಡಿ ತಾಲಿಬಾನಿಗಳ ದಿಲ್ ಖುಷ್ | Oneindia Kannada

English summary
India will resume export of surplus Covid-19 vaccines next month under the 'Vaccine Maitri' programme says Health Minister Mansukh Mandaviya,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X