ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಳದರ್ಜೆ ನೌಕರರ ಮಾಸಿಕ ಅನುಕಂಪ ಭತ್ಯೆ ಹೆಚ್ಚಳ: ದೇಶಪಾಂಡೆ

|
Google Oneindia Kannada News

ಬೆಂಗಳೂರು, ಜನವರಿ 10: ರಾಜ್ಯದ ಕೆಳದರ್ಜೆ ನೌಕರರಾದ ತೋಟಿ, ತಳವಾರ, ನೀರಗಂಟಿ, ವಾಲೀಕಾರ ಸನದಿ ಮತ್ತಿತರರಿಗೆ ಹಾಲಿ ಕೊಡುತ್ತಿರುವ ಮಾಸಿಕ 800 ರೂ.ಗಳ ಅನುಕಂಪ ಭತ್ಯೆಯನ್ನು 1,600 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಒಟ್ಟು ನಾಲ್ಕು ಕಂದಾಯ ವಿಭಾಗಗಳಲ್ಲಿ ಒಟ್ಟು 2,869 ಕೆಳದರ್ಜೆ ನೌಕರರಿದ್ದಾರೆ. ಈ ಪೈಕಿ ಬೆಂಗಳೂರು ಕಂದಾಯ ವಿಭಾಗದಲ್ಲಿ 1,925, ಮೈಸೂರು ವಿಭಾಗದಲ್ಲಿ 56, ಬೆಳಗಾವಿ ವಿಭಾಗದಲ್ಲಿ 281 ಮತ್ತು ಕಲಬುರಗಿ ವಿಭಾಗದಲ್ಲಿ 607 ಮಂದಿ ಇದ್ದಾರೆ. ಇವರೆಲ್ಲರಿಗೂ ಈ ಹೆಚ್ಚಳದ ಲಾಭ ಸಿಗಲಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ,'' ಎಂದು ತಿಳಿಸಿದ್ದಾರೆ.

ಬರ ತಾಲೂಕುಗಳಿಗೆ ಹೆಚ್ಚುವರಿ 50 ಲಕ್ಷ ಅನುದಾನ: ದೇಶಪಾಂಡೆ ಘೋಷಣೆ ಬರ ತಾಲೂಕುಗಳಿಗೆ ಹೆಚ್ಚುವರಿ 50 ಲಕ್ಷ ಅನುದಾನ: ದೇಶಪಾಂಡೆ ಘೋಷಣೆ

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ಕ್ರಮವನ್ನು ಸ್ವಾಗತಿಸಿರುವ ಆರ್‌.ವಿ.ದೇಶಪಾಂಡೆ ಉದ್ದೇಶಿತ ಮೀಸಲನ್ನು ಜಾರಿಗೆ ತರಲು ತಿದ್ದುಪಡಿ ಮಸೂದೆ ಮಂಡಿಸಿ, ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆದಿರುವುದು ಸ್ವಾಗತಾರ್ಹವಾದುದಾಗಿದೆ,'' ಎಂದು ಹೇಳಿದ್ದಾರೆ.

Increase monthly compensation allowance for depressed employees: RV Deshpande

ಕೇಂದ್ರವನ್ನು ಕೇಳಿದ್ದು 722 ಕೋಟಿ, ಕೊಟ್ಟಿದ್ದು 546 ಕೋಟಿ: ದೇಶಪಾಂಡೆ ಕೇಂದ್ರವನ್ನು ಕೇಳಿದ್ದು 722 ಕೋಟಿ, ಕೊಟ್ಟಿದ್ದು 546 ಕೋಟಿ: ದೇಶಪಾಂಡೆ

ಕಾಯ್ದೆಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಯಾವುದೇ ಬಗೆಯ ಮೀಸಲು ಸೌಲಭ್ಯಕ್ಕೆ ಒಳಪಡದಿರುವಂತಹ ವರ್ಗಗಳ ಬಡವರಿಗೆ ಅನುಕೂಲವಾಗಲಿದೆ. ವಾರ್ಷಿಕ ಆದಾಯ 8 ಲಕ್ಷ ರೂ. ಮೀರದೆ ಇರುವಂಥವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಇದರಿಂದ ಮೀಸಲಾತಿ ಸಿಗಲಿದ್ದು, ಸಾಕಷ್ಟು ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಶೇಕಡ 10ರಷ್ಟು ಮೀಸಲಿನಿಂದ ಒಟ್ಟು ಮೀಸಲಾತಿ ಪ್ರಮಾಣ ಶೇಕಡ 50ರಿಂದ 60ಕ್ಕೆ ಏರಲಿದೆ. ಎಂದು ದೇಶಪಾಂಡೆ ಅಭಿಪ್ರಾಯ ಪಟ್ಟಿದ್ದಾರೆ.

English summary
Increase in monthly compensation allowance for depressed employees on state government said revenue minister RV Deshpande. He also welcomes the reservation for economically weaken upper caste decision of central government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X