ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ಶಿವಕುಮಾರ್ ಸಂಬಂಧಿ ಮನೆ ಮೇಲೆ ಐಟಿ ದಾಳಿ

By Srinath
|
Google Oneindia Kannada News

Income tax raid on Congress MLA DK Shivakumar relative in Kanakarapura
ರಾಮನಗರ, ನ. 25: ಇತ್ತ, ಕಾಂಗ್ರೆಸ್ಸಿನ ಹಿರಿಯ ನಾಯಕ ಡಿಕೆ ಶಿವಕುಮಾರ್ ಅವರು ಬೆಳಗಾವಿ ಅಧಿವೇಶನಕ್ಕೆ ತೆರಳದೆ ವಿಶೇಷ ಕರ್ತವ್ಯದ ಮೇಲೆ ರಾಜಸ್ಥಾನದಲ್ಲಿ ಪಕ್ಷ ನಿಷ್ಠೆಯಲ್ಲಿ ತಲ್ಲೀನರಾಗಿರುವಾಗ ಇತ್ತ ಅವರ ಕರ್ಮಭೂಮಿಯಾದ ಕನಕಪುರದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕನಕಪುರದಲ್ಲಿ ಡಿಕೆ ಶಿವಕುಮಾರ್ ಅವರ ಸಮೀಪ ಬಂಧುವಿನ ಮನೆಯ ಮೇಲೆ ಅಧಿಖಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿ, ವ್ಯಾಪಕ ಶೋಧದಲ್ಲಿ ನಡೆಸಿದ್ದಾರೆ. (ಮಂತ್ರಿ ಆಗ್ತೀನಿ ಅಂತ ಊಟಕ್ಕೆ ಕುಳಿತ ಡಿಕೆ ಶಿವಕುಮಾರ್)

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೂಕುಂದ ಗ್ರಾಮದಲ್ಲಿರುವ ಡಿಕೆ ಶಿ ಸಂಬಂಧಿ ಕಾಂತರಾಜ್ ಅವರ ಮನೆಯ ಮೇಲೆ 15ಕ್ಕೂ ಹೆಚ್ಚು ಅಧಿಕಾರಿಗಳು ಇಂದು ಬೆಳಗ್ಗೆ 7 ಗಂಟೆಯಲ್ಲಿ ದಾಳಿ ನಡೆಸಿದ್ದಾರೆ. ದಾಳಿ ಇನ್ನೂ ಮುಂದುವರಿದಿದ್ದು, ಇತರೆ ಸ್ಥಳೀಯ ನಾಯಕರ ಮನೆಗಳ ಮೇಲೂ ಐಟಿ ದಾಳಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಕನಕಪುರ ಶಾಸಕ ಡಿಕೆ ಶಿವಕುಮಾರ್ ಮತ್ತು ಅವರ ಸೋದರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಅವರ ಬಹಳಷ್ಟು ವ್ಯವಹಾರಗಳನ್ನು ನೋಡಿಕೊಳ್ಳುವವರು ಇದೇ ಕಾಂತರಾಜ್ ಎಂದು ತಿಳಿದುಬಂದಿದೆ.

English summary
Income tax raid on Congress MLA DK Shivakumar relative in Kanakarapura. Presently, DK Shivakumar who is absent from Belgaum Legislature session that began today is on special duty at Rajasthan assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X