ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಡಿಕಲ್ ಸೀಟು ಬ್ಲಾಕಿಂಗ್ ದಂಧೆಯಿಂದ 402 ಕೋಟಿ ರೂ. ಶುಲ್ಕ ವಸೂಲಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ರಾಜ್ಯದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳು ಸೀಟು ಬ್ಲಾಕಿಂಗ್ ದಂಧೆ ಅವ್ಯಾಹತವಾಗಿ ಜೀವಂತವಾಗಿದೆ ಎಂಬುದನ್ನು ಐಟಿ ದಾಳಿ ಮತ್ತೆ ಸಾಬೀತು ಮಾಡಿದೆ. ಎರಡು ದಿನದ ಹಿಂಧೆ ಐಟಿ ಅಧಿಕಾರಿಗಳು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಏಕ ಕಾಲಕ್ಕೆ ನಡೆಸಿದ ಐಟಿ ದಾಳಿಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಬ್ರೋಕರ್ ಗಳ ಮೂಲಕ ಸೀಟು ಬ್ಲಾಕಿಂಗ್ ದಂಧೆಯಿಂದ 402 ಕೋಟಿ ರೂ.ನಗದು ಹಣವನ್ನು "ಕ್ಯಾಪಿಟೇಷನ್ ಶುಲ್ಕ" ಹೆಸರಿನಲ್ಲಿ ಪಡೆದಿರುವುದನ್ನು ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ರಾಜ್ಯದ 9 ಮೆಡಿಕಲ್ ಕಾಲೇಜುಗಳ ಮೇಲೆ ನಡೆಸಿದ ದಾಳಿಯಲ್ಲಿ 15.9 ರೂ. ನಗದು, 30 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿರುವ ಶಂಕೆ ಮೇಲೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ನೋಂದಣಿಯಾಗಿರುವ ಒಂಬತ್ತು ಟ್ರಸ್ಟ್‌ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಕೇರಳದ 56 ಸ್ಥಳಗಳಲ್ಲಿ ಬುಧವಾರದಿಂದ ಶೋಧ ನಡೆಸಲಾಗಿದೆ.

ಬ್ರೋಕರ್ ಮತ್ತು ಸೀಟು ಬ್ಲಾಕಿಂಗ್

ಬ್ರೋಕರ್ ಮತ್ತು ಸೀಟು ಬ್ಲಾಕಿಂಗ್

ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಬಳಿಸಿಕೊಂಡು ವೈದ್ಯಕೀಯ ಸೀಟುಗಳನ್ನು ಕಾಯ್ದಿರಿಸಿ ನಂತರ ದುಬಾರಿ ದರಕ್ಕೆ ಮಾರಾಟ ಮಾಡಲಾಗಿದೆ. ನೀಟ್ ನಲ್ಲಿ ಅಗ್ರ ಶ್ರೇಯಾಂಕ ಪಡೆದ ಅಭ್ಯರ್ಥಿಗಳಿಗೆ ಕಾಲೇಜಿಗೆ ನೋಂದಣಿಯಾಗುವ ಉದ್ದೇಶವೇ ಇರಲ್ಲ. ಇಂತಹವರನ್ನು ಸಂಪರ್ಕಿಸಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಸೀಟು ಬಿಡಿಸಿಕೊಳ್ಳುತ್ತಾರೆ. ದಾಖಲಾತಿ ಪ್ರಕ್ರಿಯೆ ಮುಗಿದ ಬಳಿಕ ಆ ಸೀಟನ್ನು ಆಡಳಿತ ಮಂಡಳಿಗೆ ಬಿಟ್ಟುಕೊಡುತ್ತಾರೆ. ಈ ಸೀಟನ್ನು ಮಧ್ಯವರ್ತಿಗಳ ಮೂಲಕ ದುಬಾರಿ ಶುಲ್ಕಕ್ಕೆ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಅಕ್ರಮ ಗಳಿಕೆ ಮಾಡುತ್ತಾರೆ. ಆಡಳಿತ ಖೋಟಾದಡಿ ನೋಂದಣಿಯಾಗುವ ವಿದ್ಯಾರ್ಥಿಗಳಿಂದ ಕ್ಯಾಪಿಟೇಷನ್ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡುತ್ತಾರೆ. ಇದಕ್ಕಾಗಿ ಕಾಲೇಜು ಟ್ರಸ್ಟ್ ಗಳು ಮಧ್ಯವರ್ತಿಗಳನ್ನು ಇರಿಸಿಕೊಂಡಿರುವ ಸಂಗತಿಯೂ ಐಟಿ ದಾಳಿಯಲ್ಲಿ ಬೆಳಕಿಗೆ ಬಂದಿದೆ.

ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಐಟಿ ಅಧಿಕಾರಿಗಳಿಂದ ಶಾಕ್ !ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಐಟಿ ಅಧಿಕಾರಿಗಳಿಂದ ಶಾಕ್ !

ಬೇನಾಮಿ ಆಸ್ತಿ

ಬೇನಾಮಿ ಆಸ್ತಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿಗೆ ಒಳಗಾದ ಸಂಸ್ಥೆಗಳ ಟ್ರಸ್ಟಿಗಳು ಮತ್ತು ಪ್ರಮುಖರ ಮನೆಗಳಿಂದ 40 ಕೆ.ಜಿ. ಬೆಳ್ಳಿ, 50 ಕ್ಯಾರಟ್‌ ವಜ್ರ, ಬೇನಾಮಿ ಹೆಸರಿನಲ್ಲಿ ಖರೀದಿಸಿರುವ 35 ಐಷಾರಾಮಿ ಕಾರುಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ದೇ ಘಾನಾದಲ್ಲಿ ₹ 2.39 ಕೋಟಿ ಮೊತ್ತದ ಅಘೋಷಿತ ವಿದೇಶಿ ಹೂಡಿಕೆ ಮಾಡಲಾಗಿದ್ದು, ಇದನ್ನೂ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆರೋಪಿತ ಸಂಸ್ಥೆಗಳು ಮತ್ತು ವ್ಯಕ್ತಿಗಳು ಭಾರಿ ಪ್ರಮಾಣದ ಆದಾಯವನ್ನು ಘೋಷಣೆ ಮಾಡದೇ ತೆರಿಗೆ ವಂಚಿಸಿರುವುದಕ್ಕೂ ಸಾಕ್ಷ್ಯಗಳು ಲಭಿಸಿವೆ ಎಂಬ ಮಾಹಿತಿಯನ್ನು ಐ.ಟಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವೇಶದಲ್ಲೇ ಅಕ್ರಮ ವಾಸನೆ

ಪ್ರವೇಶದಲ್ಲೇ ಅಕ್ರಮ ವಾಸನೆ

ನೀಟ್ ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳು ಈ ಸೀಟು ಬ್ಲಾಕಿಂಗ್ ದಂಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರಿ ಕೋಟಾದಡಿ ಸೀಟು ಪಡೆದು ಅವನ್ನು ಕಡಿಮೆ ಶ್ರೇಯಾಂಕಿತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಿಟ್ಟುಕೊಡುವುದು, ಇವರಿಂದ ನಗದು ಹಣ ಪಡೆಯುವುದು, ಎಂಬಿಬಿಎಸ್, ದಂತ ವೈದ್ಯಕೀಯ, ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಅಕ್ರಮ ಹಣ ಪಡೆದು ಸೀಟು ಹಂಚಿಕೆ ಮಾಡಿರುವುದು ಐಟಿ ದಾಳಿಯಲ್ಲಿ ದೃಢಪಟ್ಟಿದೆ. ವಿದ್ಯಾರ್ಥಿಗಳಿಂದ ನಗದು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಪುಸ್ತಕ, ಡೈರಿ, ಎಕ್ಸೆಲ್ ಶೀಟ್ ಮತ್ತಿತರ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೀಗೆ ಸಂಗ್ರಹಿದ ಅಕ್ರಮ ಹಣದಲ್ಲಿ ಭಾರಿ ಮೊತ್ತದ ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಿರುವುದನ್ನು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ದುಡ್ಡು ಕೊಟ್ರೆ ಎಂಬಿಬಿಎಂಸ್ ಪಾಸ್

ದುಡ್ಡು ಕೊಟ್ರೆ ಎಂಬಿಬಿಎಂಸ್ ಪಾಸ್

ಆಡಳಿತ ಮಂಡಳಿ ಖೋಟಾದಡಿ ಸೀಟು ಪಡೆದ ಅಭ್ಯರ್ಥಿಗಳು ಕಾಸು ಕೊಟ್ಟರೆ ಎಂಬಿಬಿಎಸ್ ಪರೀಕ್ಷೆಯನ್ನು ಕೂಡ ಹಣ ಕೊಟ್ಟು ಪಾಸು ಮಾಡಬಹುದು. ಐಟಿ ದಾಳಿಯಲ್ಲಿ ಇಂತಹ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಆಡಳಿತ ಮಂಡಳಿ ಕೋಟಾದಲ್ಲಿ ಸೀಟು ಪಡೆದವರು 1 ರಿಂದ 2 ಲಕ್ಷದ ವರೆಗೆ ಪ್ಯಾಕೇಜ್ ನೀಡಿದರೆ, ಅಂತಹ ವಿದ್ಯಾರ್ಥಿಗಳನ್ನು ಲಿಖಿತ ಹಾಗೂ ಮೌಖಿಕ ಪರೀಕ್ಷೆಯಲ್ಲಿ ಪಾಸು ಮಾಡುವ ದಂಧೆಯನ್ನು ಕೂಡ ಕೆಲವು ಖಾಸಗಿ ಕಾಲೇಜುಗಳು ನಡೆಸಿಕೊಂಡು ಬರುತ್ತಿವೆ. ಇದಕ್ಕೆ ಪೂರಕ ದಾಖಲೆಗಳನ್ನು ಸಹ ಐಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.

Recommended Video

Jaipur Literature Festival | Exclusive inside stories | Namita Gokhale | Oneinda Kannada
ಇಡಿ ತನಿಖೆಗೆ ಮೂಲ

ಇಡಿ ತನಿಖೆಗೆ ಮೂಲ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬೇನಾಮಿ ಹೂಡಿಕೆ ಕಂಡು ಬಂದಿದ್ದು, ಈ ಕುರಿತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಡಿ ಅಧಿಕಾರಿಗಳ ಜತೆ ಹಂಚಿಕೊಳ್ಳಲಿದ್ದಾರೆ. ಹೀಗಾಗಿ ಬೇನಾಮಿ ವಹಿವಾಟು ನಡೆಸಿರುವ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಗಳಿಗೆ ಸಂಕಷ್ಟ ಕಾದಿದೆ.

English summary
Income tax department raid exposed Medical colleges MBBS seat blocking scam in Karnataka and IT officials seized 15 cr cash, and 30 cr worth gold know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X