India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಮೂಲದ ಎಂಜಿಎಂ ಗ್ರೂಪ್ ಕಂಪನಿಗಳ ಮೇಲೆ ಐಟಿ ದಾಳಿ

|
Google Oneindia Kannada News

ಚೆನ್ನೈ/ ಬೆಂಗಳೂರು, ಜೂ. 15: ಮನರಂಜನೆ ಹಾಗೂ ಲಾಜಿಸ್ಟಿಕ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡು ಮೂಲದ ಎಂಜಿಎಫ್ ಸಮೂಹ ಕಂಪನಿಗಳ ಮೇಲೆ ಬುಧವಾರ ಬೆಳಗಿನ ಜಾವ ಐಟಿ ಅಧಿಕಾರಿಗಳು ನಡೆಸಿದ್ದಾರೆ. ಬೆಂಗಳೂರು ಹಾಗೂ ಚೆನ್ನೈ ಸೇರಿದಂತೆ 50 ಕಡೆ ಇರುವ ಎಂಜಿಎಂ ಸಂಸ್ಥೆಗಳ ಆಡಳಿತ ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

KGF ಬಾಬು ಅಲಿಯಾಸ್ ಸ್ಕ್ರಾಪ್ ಬಾಬು ಮನೆ ಮೇಲೆ ಇಡಿ ದಾಳಿKGF ಬಾಬು ಅಲಿಯಾಸ್ ಸ್ಕ್ರಾಪ್ ಬಾಬು ಮನೆ ಮೇಲೆ ಇಡಿ ದಾಳಿ

ಚೆನ್ನೈನ ರಾಣಿಪೇಟೆಯಲ್ಲಿರುವ ಎಂಜಿಎಂ ಕಚೇರಿಯ ಮೇಲೆ ಹದಿನೈದಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಇನ್ನು ಚೆನ್ನೈ ನ ತಿರುನಲ್ವೇಲಿ ಮತ್ತು ಬೆಂಗಳೂರಿನಲ್ಲಿರುವ ಕಚೇರಿ ಮೇಲೂ ದಾಳಿಯಾಗಿದೆ.

ಜಯನಗರದಲ್ಲಿರುವ ಎಂಜಿಎಂ ಕಂಪನಿ ಕಚೇರಿ ಮೇಲೆ ಸಹ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಹಿಂದೆ ಎಂಜಿಎಂ ಕಂಪನಿ 250 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿತ್ತು. ಇದೀಗ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕದಲ್ಲಿ ಏಕ ಕಾಲಕ್ಕೆ

50 ಕಡೆ ದಾಳಿ ನಡೆದಿದ್ದು ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಹಾಗೂ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

Income Tax Officials Raid on Over 50 Places Belonging to MGM Group of Companies

1963 ರಲ್ಲಿ ಎಂ.ಜಿ. ಮುತ್ತು ಎಂಬುವರು ಹುಟ್ಟು ಹಾಕಿದ ಎಂಜಿಎಂ ಸಮೂಹ ಕಂಪನಿಗಳು ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಹೊಂದಿದ್ದು ವಾರ್ಷಿಕ 2500 ಕೋಟಿ ರೂ. ವಹಿವಾಟು ನಡೆಸುತ್ತವೆ, ಡಿಸ್ಟಿಲರಿ, ಲಾಜಿಸ್ಟಿಕ್ ಹಾಗು ಥೀಮ್ ಪಾರ್ಕ್ ಹಾಗೂ ಹೋಟೆಲ್ ಉದ್ಯಮ ಸೇರಿದಂತೆ ಹಲವು ಬ್ಯುಜಿನೆಸ್ ಗಳನ್ನು ಎಂಜಿಎಂ ಸಮೂಹದ ಸಂಸ್ಥೆಗಳು ನಡೆಸುತ್ತಿವೆ. ಮದ್ಯ ಉತ್ಪಾದನೆಯಲ್ಲಿ ಖ್ಯಾತಿ ಪಡೆದಿರುವ ಎಂಜಿಎಂ ಕಂಪನಿ ವೋಟ್ಕಾ, ಗೋಲ್ಡ್ ಕ್ರೌನ್, ಕ್ಲಾಸಿಕ್ ಫೈನ್ ವಿಸ್ಕಿ ಇತರೆ ವಿದೇಶಿ ಮದ್ಯ ತಯಾರಿಕೆಯಲ್ಲಿ ಎಂಜಿಎಂ ಕಂಪನಿಗಳು ನಿರತರವಾಗಿವೆ. ಎಂಜಿಎಂ ಡಿಜಲ್ ವರ್ಡ್ ಅಮೂಸ್ಮೆಂಟ್ ಪಾರ್ಕ್ ಚೆನ್ನೈನಲ್ಲಿ ಎಂಜಿಎಂ ಕಂಪನಿ ಸ್ಥಾಪಿಸಿದೆ. ಇದಲ್ಲದೇ ಮ್ಯಾರಿಬ್ರೌನ್ ಹೆಸರಿನ ಮಲೇಶಿಯಾ ಫಾಸ್ಟ್ ಪುಡ್ ಸೆಂಟರ್ ಗಳ ಫ್ರಾಂಚಸಿಗಳನ್ನು ಸಹ ಎಂಜಿಎಂ ಕಂಪನಿ ನಿರ್ವಹಿಸುತ್ತಿದೆ. ದಕ್ಷಿಣ ಭಾರತದಲ್ಲಿ ಸುಮಾರು 100 ಕ್ಕೂ ಹೆಚ್ಚು ಮ್ಯಾರಿಬ್ರೌನ್ ಫಾಸ್ಟ್ ಫುಡ್ ಕೇಂದ್ರಗಳನ್ನು ಎಂಜಿಎಂ ಕಂಪನಿ ನಿರ್ವಹಿಸುತ್ತಿದೆ.

(ಒನ್ಇಂಡಿಯಾ ಸುದ್ದಿ)

   IND vs RSA ಮೂರನೇ ಪಂದ್ಯದಲ್ಲಿ ಏನೆಲ್ಲಾ ವಿಶೇಷತೆಗಳಿದ್ದವು? | OneIndia Kannada
   English summary
   Income tax officials raided MGM group of companies across the South India offices, including in Bengaluru and Chennai. know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X