ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ : 4 ಕೋಟಿ ಹಣ ವಶಕ್ಕೆ, ಕಾರಿನ ಸ್ಟೆಪ್ನಿಯಲ್ಲಿತ್ತು 2 ಕೋಟಿ!

|
Google Oneindia Kannada News

ಬೆಂಗಳೂರು, ಏಪ್ರಿಲ್ 21 : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 4 ಕೋಟಿಗೂ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿದೆ. ಕಾರಿನ ಸ್ಟೆಪ್ನಿಯಲ್ಲಿ 2 ಕೋಟಿ ಹಣವನ್ನು ಸಾಗಣೆ ಮಾಡಲಾಗುತ್ತಿತ್ತು.

ಶನಿವಾರ ಕರ್ನಾಟಕ, ಗೋವಾದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 4 ಕೋಟಿಗೂ ಅಧಿಕ ಮೊತ್ತದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯುತ್ತಿದೆ.

ಲೋಕಸಭಾ ಚುನಾವಣಾ ಪುಟ

ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಭದ್ರಾವತಿಗೆ ಹಣ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರನ್ನು ಪರಿಶೀಲನೆ ನಡೆಸಿದಾಗ ಕೋಟ್ಯಾಂತರ ರೂಪಾಯಿ ಹಣ ಪತ್ತೆಯಾಗಿದೆ. ಕಾರಿನ ಸ್ಟೆಪ್ನಿಯಲ್ಲಿ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು.

ದೇವೇಗೌಡರ ಕುಲದೇವರ ದೇವಸ್ಥಾನದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್‌ದೇವೇಗೌಡರ ಕುಲದೇವರ ದೇವಸ್ಥಾನದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್‌

Income tax department seized Rs 4 crore cash

ಸ್ಟೆಪ್ನಿಯಲ್ಲಿರುವ ಹಣವನ್ನು ತೆಗೆಯುವ ವಿಡಿಯೋವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ಕಾರಿನ ಸ್ಟೆಪ್ನಿಯಲ್ಲಿ 2000 ರೂ.ಗಳ ನೋಟಿನ ಕಂತೆ-ಕಂತೆಯನ್ನು ತೆಗೆಯಲಾಗಿದೆ. ಈ ಟೈರ್‌ನಲ್ಲಿ 2.30 ಕೋಟಿ ಹಣವಿತ್ತು ಎಂದು ಐಟಿ ಇಲಾಖೆ ಹೇಳಿದೆ. ಭದ್ರಾವತಿಯನ್ನು ನಡೆಸಿದ ಮೊತ್ತೊಂದು ಕಾರ್ಯಾಚರಣೆಯಲ್ಲಿ 50 ಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಮಧ್ಯಪ್ರದೇಶದಲ್ಲಿ ಐಟಿ ರೇಡ್! ಅಷ್ಟೊಂದು ಹಣ ಜಮೆಯಾಗಿದ್ದು ಯಾವ ಪಕ್ಷಕ್ಕೆ?ಮಧ್ಯಪ್ರದೇಶದಲ್ಲಿ ಐಟಿ ರೇಡ್! ಅಷ್ಟೊಂದು ಹಣ ಜಮೆಯಾಗಿದ್ದು ಯಾವ ಪಕ್ಷಕ್ಕೆ?

ಬಾಗಲಕೋಟೆಯಲ್ಲಿ 1 ಕೋಟಿ : ಬಾಗಲಕೋಟೆಯ ನವನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 1 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಉದ್ಯೋಗಿ ತಮ್ಮ ಮನೆಯಲ್ಲಿ ಹಣವನ್ನು ಇಟ್ಟುಕೊಂಡಿದ್ದರು.

Income Tax department

ವಿಜಯಪುರದಲ್ಲಿ ನಡೆಸಿದ ದಾಳಿಯ ವೇಳೆ 10 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ, ವಿಜಯಪುರ, ಬಾಗಲಕೋಟೆ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 23ರ ಮಂಗಳವಾರ ಚುನಾವಣೆ ನಡೆಯಲಿದೆ.

4 ನೋಟುಗಳು ನಾಪತ್ತೆ : ಅಕ್ರಮವಾಗಿ ಸಂಗ್ರಹಿಸಿಟ್ಟ ಹಣದಲ್ಲಿ 100 ರೂ. ಕಟ್ಟುಗಳು ಪತ್ತೆಯಾಗಿವೆ. ಆದರೆ, ಪ್ರತಿ ಕಟ್ಟಿನಲ್ಲಿ 4 ನೋಟುಗಳು ನಾಪತ್ತೆಯಾಗಿವೆ. ಹಣ ಸಂಗ್ರಹದಲ್ಲೂ ಅಕ್ರಮ ನಡೆದಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
The Income tax department has seized over Rs. 4 crore cash in raids across Karnataka and Goa in Lok sabha election 2019 season. Rs 2.30 crore in cash stuffed inside the spare tire in a car. The cash was being transported from Bengaluru to Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X