ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿಗೆ ಐಟಿ ನೋಟಿಸ್, ಹುಬ್ಬಳ್ಳಿಯಿಂದ ತುರ್ತಾಗಿ ವಾಪಸ್!

|
Google Oneindia Kannada News

ಬೆಂಗಳೂರು, ಡಿಸೆಂಬರ್ 02 : ಮಾಜಿ ಸಚಿವ, ಕನಕಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್‌ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಬೆಳಗಾವಿಗೆ ಹೊರಟಿದ್ದ ಅವರು ತುರ್ತಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.

ಡಿಸೆಂಬರ್ 2ರ ಸೋಮವಾರ ಆದಾಯ ತೆರಿಗೆ ಇಲಾಖೆ ಕಚೇರಿಗೆ ವಿಚಾರಣೆಗೆ ಬರಬೇಕು ಎಂದು ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ. ಬೆಳಗಾವಿಗೆ ಉಪ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ಡಿ. ಕೆ. ಶಿವಕುಮಾರ್ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಜನ ಪ್ರತಿನಿಧಿಗಳ ಕೋರ್ಟ್‌ಗೆ ಡಿಕೆ ಶಿವಕುಮಾರ್ ಹಾಜರ್ಜನ ಪ್ರತಿನಿಧಿಗಳ ಕೋರ್ಟ್‌ಗೆ ಡಿಕೆ ಶಿವಕುಮಾರ್ ಹಾಜರ್

Income Tax Department Notice To DK Shivakumar

ಇಂದು ಮಧ್ಯಾಹ್ನ ಡಿ. ಕೆ. ಶಿವಕುಮಾರ್ ಆದಾಯ ತೆರಿಗೆ ಕಚೇರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಉಪ ಚುನಾವಣೆ ವೇಳೆಯಲ್ಲಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಈ ತಿಂಗಳು 29 ದಿನಗಳ ಕಾಲ ಐಟಿ ಡಿ. ಕೆ. ಶಿವಕುಮಾರ್ ಮತ್ತು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಿದೆ.

ಡಿಕೆ ಶಿವಕುಮಾರ್‌ಗೆ ಮತ್ತೆ ಸಂಕಷ್ಟ: ಇ.ಡಿ ಮೇಲ್ಮನವಿ ವಿಚಾರಣೆಡಿಕೆ ಶಿವಕುಮಾರ್‌ಗೆ ಮತ್ತೆ ಸಂಕಷ್ಟ: ಇ.ಡಿ ಮೇಲ್ಮನವಿ ವಿಚಾರಣೆ

ಡಿ. ಕೆ. ಶಿವಕುಮಾರ್ ಮಾತ್ರವಲ್ಲ. ಡಿ. ಕೆ. ಶಿವಕುಮಾರ್ ಪತ್ನಿ ಉಷಾ, ಸಹೋದರ ಡಿ. ಕೆ. ಸುರೇಶ್, ಪುತ್ರಿ ಐಶ್ವರ್ಯಾ ಸೇರಿದಂತೆ ಹಲವರಿಗೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಲಾಗಿದೆ. ಈ ತಿಂಗಳಿನಲ್ಲಿಯೇ ಎಲ್ಲರ ವಿಚಾರಣೆ ನಡೆಯಲಿದೆ.

ಡಿಕೆಶಿ ಪುತ್ರಿ ಐಶ್ವರ್ಯಾಗೆ ಡಿಕೆ ಸುರೇಶ್ ಕೊಟ್ಟ ಸಾಲವೇ 'ಇಡಿ' ಗೆ ಆಸ್ತ್ರಡಿಕೆಶಿ ಪುತ್ರಿ ಐಶ್ವರ್ಯಾಗೆ ಡಿಕೆ ಸುರೇಶ್ ಕೊಟ್ಟ ಸಾಲವೇ 'ಇಡಿ' ಗೆ ಆಸ್ತ್ರ

2017ರ ಆಗಸ್ಟ್ 2ರಂದು ಡಿ. ಕೆ. ಶಿವಕುಮಾರ್ ನಿವಾಸ, ಸಂಬಂಧಿಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮತ್ತೊಂದು ಕಡೆ ದಾಳಿ ಸಂದರ್ಭದಲ್ಲಿ ದೆಹಲಿ ಫ್ಲ್ಯಾಟ್‌ನಲ್ಲಿ ಸಿಕ್ಕ ಹಣದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದೆ.

English summary
Income tax department issued notice to former minister D.K. Shivakumar. D.K.Shivakumar will appear before IT in Bengaluru office on December 2, 2019 evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X