ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಎರಡು ದಿನಗಳಲ್ಲಿ ಶಾಲಾ ಶುಲ್ಕ ನಿಗದಿ:ಸುರೇಶ್ ಕುಮಾರ್

|
Google Oneindia Kannada News

ಬೆಂಗಳೂರು,ಜನವರಿ 21: ಮುಂದಿನ ಎರಡು ದಿನಗಳಲ್ಲಿ ಅನುದಾನಿತ ಶಾಲೆಗಳ ಶುಲ್ಕವನ್ನು ನಿಗದಿಪಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಶಾಲೆಗಳು ಆರಂಭವಾಗುವ ಮೊದಲು 45 ದಿನಗಳ ವರೆಗೆ ಬ್ರಿಡ್ಜ್ ಕೋರ್ಸ್ ಮಾಡಲಾಗುವುದು. ಈ ಬ್ರಿಡ್ಜ್ ಕೋರ್ಸ್ ಹಿಂದಿನ ತರಗತಿಗಳನ್ನ ಕಲಿಸಿ ನಂತರ ಉಳಿದ ಪ್ರಸ್ತುತ ವರ್ಷದ ವಿಷಯಗಳನ್ನ ಕಲಿಸಲಾಗುವುದು ಎಂದರು.

ಶುಲ್ಕ ನಿಗದಿ ಪಡಿಸುವ ಕುರಿತು ಎಲ್ಲಾ ಅಂಶಗಳನ್ನು ಪರಿಗಣಿಸಬೇಕಿದೆ. ಒಂದೆಡೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಪೋಷಕರ ಆರ್ಥಿಕ ಸ್ಥಿತಿಗತಿ ಹಾಗೂ ಹದಗೆಟ್ಟಿರುವ ಶಾಲೆಗಳ ಸ್ಥಿತಿಗತಿಗಳನ್ನು ಕೂಡ ಪರಿಗಣಿಸಬೇಕಿದೆ ಎಂದರು.

Suresh Kumar

ಪಿಯುಸಿ ಮತ್ತು 8,9 ನೇ ತರಗತಿಗಳನ್ನ ಆರಂಭಿಸುವಂತೆ ಬೇಡಿಕೆಗಳು ಕೇಳಿಬರುತ್ತಿವೆ.‌ ಇದನ್ನೂ ಸಹ ತಾಂತ್ರಿಕ ಸಮಿತಿ ವರದಿ ನೀಡಿದ ಮೇಲೆ ನಿರ್ಧರಿಸಲಾಗುವುದು ಎಂದರು.

1 ರಿಂದ 5ನೇ ತರಗತಿ ಆರಂಭಿಸುವುದಿಲ್ಲ; ಸಚಿವ ಸುರೇಶ್ ಕುಮಾರ್1 ರಿಂದ 5ನೇ ತರಗತಿ ಆರಂಭಿಸುವುದಿಲ್ಲ; ಸಚಿವ ಸುರೇಶ್ ಕುಮಾರ್

ಹಾಗಾಗಿ ತಾಂತ್ರಿಕ ಸಲಹಾ ಸಮಿತಿ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಇನ್ನೂ ಪರಿಶೀಲಿಸಿಲ್ಲ. ಯಾರಿಗೂ ಅನ್ಯಾಯವಾಗದಂತೆ ಶುಲ್ಕ ನಿಗದಿಪಡಿಸಲಾಗುವುದು ಎಂದರು.ಒಂದರಿಂದ ಐದನೇ ತರಗತಿಗಳನ್ನು ಆರಂಭ ಮಾಡುವುದಿಲ್ಲ. ನಲಿಕಲಿ ಮತ್ತು ರೇಡಿಯೋ ಮೂಲಕ ಪಾಠ ಕಲಿಸಲಾಗುತ್ತದೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

"ಶಾಲೆಗೆ ಹಾಜರಾತಿ ಕಡ್ಡಾಯವಿಲ್ಲ, ನಾವು ಈ ಸರಿ ಅದನ್ನು ಪರೀಕ್ಷೆಯ ಗಣನೆಗೆ ತೆಗೆದುಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

Recommended Video

Vijayapura: ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ padayatraಗೆ ಚಾಲನೆ | Oneindia Kannada

"ದ್ವಿತೀಯ ಪಿಯುಸಿ ಮತ್ತು 10 ತರಗತಿ ಮಕ್ಕಳಿಗೆ ದಿನ ಪೂರ್ತಿ ಶಾಲೆ ನಡೆಸಲು ಅನುಮತಿ ಕೋರಿದ್ದಾರೆ. ಪ್ರಥಮ ಪಿಯುಸಿ, ಎಂಟನೇ ತರಗತಿ ಹಾಗೂ ಒಂಬತ್ತನೆಯ ತರಗತಿಗಳನ್ನು ಆರಂಭಿಸಬೇಕಾಗಿದೆ. ಹಾಗಾಗಿ ತಾಂತ್ರಿಕ ಸಲಹಾ ಸಮಿತಿ ಜೊತೆ ಮಾತನಾಡಿ ನಂತರ ತೀರ್ಮಾನಿಸಲಾಗುವುದು" ಎಂದರು.

English summary
Education Minister Suresh Kumar Sais that In Two Days Karnataka Government Will Announce School Fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X