ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಟೈಂನಲ್ಲಿ ನಾವು ಸಿಎಂ ಯಡಿಯೂರಪ್ಪ ಜೊತೆಗಿರಬೇಕು, ಅದು ಮಾನವ ಧರ್ಮ

|
Google Oneindia Kannada News

ಬೆಂಗಳೂರು, ಜುಲೈ 22: ಜುಲೈ 25ಕ್ಕೆ ವರಿಷ್ಠರಿಂದ ಯಾವ ಸೂಚನೆ ಬಂದರೂ, ಅದನ್ನು ಪಾಲಿಸಲಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದರೂ, ಭಾರೀ ಒಳಗೊಳಗಿನ ರಾಜಕೀಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, "ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಕೇಳಿದೆ. ಹೈಕಮಾಂಡ್ ಸೂಚಿಸಿದಂತೆ ನಡೆಯುತ್ತೇನೆ ಎಂದು ಅವರು ಹೇಳಿದ್ದಾರೆ"ಎಂದು ಸುಧಾಕರ್ ಹೇಳಿದರು.

ಯಡಿಯೂರಪ್ಪ ಬೆಂಬಲಿಸಿ ಬಂದ ಪೀಠಾಧಿಪತಿಗಳು 'ಸ್ಪಾನ್ಸರ್ಡ್ ಸ್ವಾಮೀಜಿಗಳು'ಯಡಿಯೂರಪ್ಪ ಬೆಂಬಲಿಸಿ ಬಂದ ಪೀಠಾಧಿಪತಿಗಳು 'ಸ್ಪಾನ್ಸರ್ಡ್ ಸ್ವಾಮೀಜಿಗಳು'

"ಮುಂದಿನ ದಿನಗಳಲ್ಲಿ ನಾವೆಲ್ಲಾ ಸೇರಿ ಪಕ್ಷ ಕಟ್ಟಬೇಕಿದೆ ಎಂದು ಹೇಳಿದ್ದಾರೆ. ನಾವೆಲ್ಲಾ (ಬಾಂಬೆ ಟೀಂ) ರಾಜೀನಾಮೆ ನೀಡುತ್ತಿದ್ದೇವೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದದು. ಇಷ್ಟಕ್ಕೂ ನಾವೆಲ್ಲಾ ಯಾಕೆ ರಾಜೀನಮೆ ನೀಡಬೇಕೆಂದು"ಎಂದು ಸುಧಾಕರ್ ಪ್ರಶ್ನಿಸಿದರು.

 In This Tough Time, We Have To Be With CM Yediyurappa, Said Dr.Sudhakar

"ಮಾನ್ಯ ಯಡಿಯೂರಪ್ಪನವರ ನಾಯಕತ್ವವನ್ನು ಮತ್ತು ಬಿಜೆಪಿಯ ತತ್ವ, ಸಿದ್ದಾಂತವನ್ನು ನಂಬಿ ಬಂದವರು ನಾವು. ನಮ್ಮ ಉನ್ನತ ನಾಯಕರು ಏನು ನಿರ್ದೇಶನ ಕೊಡುತ್ತಾರೋ ಅದನ್ನು ನಾವು ಪಾಲಿಸುತ್ತೇವೆ"ಎಂದು ಸುಧಾಕರ್ ಈ ಸಂದರ್ಭದಲ್ಲಿ ಹೇಳಿದರು.

"ಕಳೆದ ಸುಮಾರು ಎರಡು ವರ್ಷಗಳಿಂದ ಮುಖ್ಯಮಂತ್ರಿಗಳ ಜೊತೆಗೆ ನಾವು ಕೆಲಸ ಮಾಡಿದ್ದೇವೆ. ಹಾಗಾಗಿ, ಇಂತಹ ಸಮಯದಲ್ಲಿ ನಾವು ಅವರ ಜೊತೆಗೆ ಇರಬೇಕಾಗುತ್ತದೆ, ಅದು ಮಾನವ ಧರ್ಮ"ಎಂದು ಸುಧಾಕರ್ ಅಭಿಪ್ರಾಯ ಪಟ್ಟರು.

 ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ: ಯಾವ ಸಚಿವರು ಏನು ಹೇಳಿದರು? ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ: ಯಾವ ಸಚಿವರು ಏನು ಹೇಳಿದರು?

Recommended Video

Modi's Master Plan, Gujarat ರೀತಿಯಲ್ಲೆ Karnataka ನಾಯಕರು ಮೋಸ ಹೋಗ್ತಾರಾ? | Oneindia Kannada

"ನಮಗೆ ಖಾತೆಯ ವಿಚಾರದಲ್ಲಾಗಲಿ ಅಥವಾ ಬಿಜೆಪಿಯಲ್ಲಿನ ನಮ್ಮ ಭವಿಷ್ಯದ ಬಗ್ಗೆ ಯಾವುದೇ ಆತಂಕವಿಲ್ಲ. ಹೈಕಮಾಂಡ್ ಏನು ನಿರ್ದೇಶನ ಕೊಡುತ್ತದೋ ಅದನ್ನು ನಾವು ಪಾಲಿಸುತ್ತೇವೆ"ಎಂದು ಡಾ.ಸುಧಾಕರ್ ಹೇಳಿದರು.

English summary
In This Tough Time, We Have To Be With CM Yediyurappa, Said Dr.Sudhakar. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X