ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಶಿರಸಿ ಉತ್ಸವದ ಸಾಂಸ್ಕೃತಿಕ ಸಂಭ್ರಮ

|
Google Oneindia Kannada News

ಶಿರಸಿ, ಫೆ. 2: ಮಲೆನಾಡಿನ ತಪ್ಪಲು ಶಿರಸಿಯಲ್ಲಿ ವಾರ ಕಾಲ ಹಬ್ಬದ ಸಂಭ್ರಮ. ಸಂಸ್ಕೃತಿ ಬಿಂಬಿಸುವ ಶಿರಸಿ ಉತ್ಸವಕ್ಕೆ ಚಾಲನೆ ದೊರೆತಿದ್ದು ಒಂದು ವಾರ ಕಾಲ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು, ಕಲಾತಂಡಗಳ ಮೆರವಣಿಗೆ ನಡೆಯಲಿದೆ.

ಪ್ರಸಿದ್ಧ ಮಾರಿಕಾಂಬಾ ದೇವಾಲಯದ ಎದುರು ರಾಜ್ಯ ಪ್ರಶಸ್ತಿ ಪುರಸ್ಕೃಥ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ, ಜಾನಪದ ಕಲಾವಿದೆ ಸುಕ್ರಿ ಬೊಮ್ಮ ಗೌಡ ಉತ್ಸವಕ್ಕೆ ಚಾಲನೆ ನೀಡಿದರು.[ಚಿತ್ರಗಳಲ್ಲಿ: ಶ್ರವಣಬೆಳಗೊಳ ನುಡಿಹಬ್ಬದ ಹೈಲೈಟ್ಸ್]

ನಾಗರಿಕರು ಮತ್ತು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಫೆಬ್ರವರಿ 6ರಂದು ಉತ್ಸವಕ್ಕೆ ತೆರ ಬೀಳಲಿದೆ. ಶಿರಸಿ ನಗರದ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ್ ಕಾರ್ಯಕ್ರಮದ ಮೇಲ್ವಿಚಾರಣೆ ಹೊತ್ತುಕೊಂಡಿದ್ದಾರೆ.

ನೃತ್ಯ ಪ್ರದರ್ಶನ

ನೃತ್ಯ ಪ್ರದರ್ಶನ

ಶಿರಸಿ ಉತ್ಸವದಲ್ಲಿ ನೃತ್ಯ ರೂಪಕಗಳ ಮೂಲಕ ಸಂಸ್ಕೃತಿ ಅನಾವರಣ

ಸಂಗೀತ ಕಾರ್ಯಕ್ರಮ

ಸಂಗೀತ ಕಾರ್ಯಕ್ರಮ

ಸಂಜೆ ನಡೆದ ಸುಗಮ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು

ಸ್ಕೂಟಿ ಸವಾರಿ

ಸ್ಕೂಟಿ ಸವಾರಿ

ನಿಧಾನವಾಗಿ ಸ್ಕೂಟಿ ಓಡಿಸಿದ ನಾರಿಯರು.

ಮದರಂಗಿ

ಮದರಂಗಿ

ಕೈಗೆ ಮದರಂಗಿ ಹಾಕುವುದರಲ್ಲಿ ನಿರತ ವಿದ್ಯಾರ್ಥಿನಿಯರು.

ಪ್ರಶಸ್ತಿ ವಿಜೇತರ ಸಂಭ್ರಮ

ಪ್ರಶಸ್ತಿ ವಿಜೇತರ ಸಂಭ್ರಮ

ವಿವಿಧ ಸ್ಪರ್ಧೆಗಳ ವಿಜೇತರ ಸಂಭ್ರಮ.

ಉದ್ಘಾಟನೆ

ಉದ್ಘಾಟನೆ

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್. ಶಾಸಕ ಶಿವರಾಂ ಹೆಬ್ಬಾರ್, ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ್ ಮತ್ತಿತರರು ಇದ್ದಾರೆ.

ಹಗ್ಗ ಜಗ್ಗಾಟ

ಹಗ್ಗ ಜಗ್ಗಾಟ

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಹಿಳೆಯರ ಕಸರತ್ತು.

ಲಿಂಬು ಚಮಚ

ಲಿಂಬು ಚಮಚ

ಲಿಂಬು ಚಮಚ ಓಟದ ನೋಟ ಹೀಗಿತ್ತು

ನೃತ್ಯ ವೈಭವ

ನೃತ್ಯ ವೈಭವ

ಶಿರಸಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ ಕಲಾವಿದರು.

English summary
Sirsi: One week Sirsi Utsava started on January 30. Number of cultural and sports events are conducting by utsva samiti President Ravindra Naik .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X