ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ಒಂದು ದಿನದಲ್ಲಿ ಕರ್ನಾಟಕದಲ್ಲಿ ಹೆಚ್ಚು ಮಳೆಯಾದದ್ದೆಲ್ಲಿ?

|
Google Oneindia Kannada News

ಬೆಂಗಳೂರು, ಜುಲೈ 29: ಕಳೆದ ಒಂದು ದಿನದಲ್ಲಿ ಉತ್ತರ ಕನ್ನಡದ ಹೊನ್ನಾವರದ ನಗರಬಸ್ತಿಕೇರಿಯಲ್ಲಿ ಹೆಚ್ಚಿನ ಮಳೆಯಾಗಿದೆ.

ಜುಲೈ 28ರ ಬೆಳಗ್ಗೆ 8.30ರಿಂದ ಜುಲೈ 29ರ ಬೆಳಗ್ಗೆ 8.30ರವರೆಗೆ ಹೊನ್ನಾವರದಲ್ಲಿ 178 ಮಿ.ಮೀನಷ್ಟು ಮಳೆಯಾಗಿದೆ. ಉತ್ತರ ಕನ್ನಡದ ಕ್ಯಾಸಲ್ ರಾಕ್‌ನಲ್ಲಿ 19 ಸೆಂ.ಮೀ, ಗೇರುಸೊಪ್ಪದಲ್ಲಿ 13 ಸೆಂ.ಮೀನಷ್ಟು ಮಳೆಯಾಗಿದೆ. ಆಗಯಂಬೆಯಲ್ಲಿ 10 ಸೆಂ.ಮೀ, ಕೊಲ್ಲೂರು, ಲಿಂಗನಮಕ್ಕಿಯಲ್ಲಿ 9 ಸೆಂ.ಮೀ, ಸಿದ್ದಾಪುರ, ಭಟ್ಕಳ, ಸಿದ್ದಾಪುರ, ತಾಲಗುಪ್ಪದಲ್ಲಿ 7 ಸೆಂ.ಮೀ ಮಳೆಯಾಗಿದೆ.

ಮುಂಬೈನಲ್ಲಿ ನೀರಿನಲ್ಲಿ ಸಿಲುಕಿದ ಪ್ಯಾಸೆಂಜರ್ ರೈಲು: 500 ಪ್ರಯಾಣಿಕರ ರಕ್ಷಣೆಮುಂಬೈನಲ್ಲಿ ನೀರಿನಲ್ಲಿ ಸಿಲುಕಿದ ಪ್ಯಾಸೆಂಜರ್ ರೈಲು: 500 ಪ್ರಯಾಣಿಕರ ರಕ್ಷಣೆ

ಕೊಪ್ಪ, ಗೋಕರ್ಣ, ಸಾಗರಣ, ಹೊಸನಗರ, ಶೃಂಗೇರಿ, ಕಮ್ಮರಡಿಯಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ. ಕಾರ್ಕಳ, ಶಿರಾಲಿ, ಹುಂಚದಕಟ್ಟೆ, ತೀರ್ಥಹಳ್ಳಿ, ಬೆಳ್ತಂಗಡಿ, ಅಂಕೋಲಾ, ತ್ಯಾಗರ್ತಿ, ಪುತ್ತೂರು, ಉಪ್ಪಿನಂಗಡಿ, ಸುಬ್ರಹ್ಮಣ್ಯದಲ್ಲೂ ಮಳೆಯಾಗಿದೆ.

In one Day Heavy Rain Fall occurs in Honnavar

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಮಳೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ ಎಂದಿನಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಭಾನುವಾರ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ 28.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ ಗರಿಷ್ಠ 27.8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 28.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಭಾನುವಾರ ಜಯನಗರ, ಉತ್ತರ ಹಳ್ಳಿ, ಶಿವಾನಂದ ವೃತ್ತ, ಬನಶಂಕರಿ, ಮೆಜೆಸ್ಟಿಕ್, ಮತ್ತಿಕೆರೆ, ಮಲ್ಲೇಶ್ವರ, ಯಲಹಂಕ, ಕೆಂಗೇರಿ, ಮೈಸೂರು ರಸ್ತೆ, ರಾಜಾಜಿನಗರ, ವಿಜಯನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.

English summary
Rain accurred at most places over Coastal Karnataka and at many places over interior Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X