ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉರಿ ಸೆಕೆಯ ಹಳೆ ದಾಖಲೆ ಸುಟ್ಟುಹಾಕಿದ ಬೆಂಗಳೂರು

|
Google Oneindia Kannada News

ಬೆಂಗಳೂರು, ಏಪ್ರಿಲ್, 12: ಕರ್ನಾಟಕದಲ್ಲಿ ಬಿಸಿಲಿನ ಝಳ ಏರುತ್ತಿರುವುದು ಹೊಸ ಸುದ್ದಿ ಏನಲ್ಲ. ಕುಸಿಯುತ್ತಿರುವ ಜಲಾಶಯ ಮಟ್ಟ, ಕುಡಿಯುವ ನೀರಿಗೆ ಹಾಹಾಕಾರ, ಉಗ್ರ ಸ್ವರೂಪ ಪಡೆದುಕೊಳ್ಳುತ್ತಿರುವ ನೀರಾವರಿ ಹೋರಾಟ.. ಇವೆಲ್ಲ ಪ್ರತಿದಿನದ ಸುದ್ದಿಯಾಗಿ ಹೋಗಿದೆ.

ಹೊಸ ಸುದ್ದಿ ಏನಪ್ಪಾ ಅಂದ್ರೆ ರಾಜ್ಯದ ರಾಜಧಾನಿ ಬೆಂಗಳೂರು 40 ಡಿಗ್ರಿ ಉಷ್ಣತೆ ದಾಖಲು ಮಾಡಿದೆ. ಹೌದು ಮಂಗಳವಾರ ಬೆಂಗಳೂರಲ್ಲಿ ಅತಿ ಹೆಚ್ಚು ಅಂದರೆ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದು ಸರ್ವಕಾಲಿಕ ದಾಖಲೆಯೂ ಆಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚಿನ ಅಂದರೆ 42.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.[ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ]

1996 ರಲ್ಲಿ ಮತ್ತು 2013 ರಲ್ಲಿ 37 ಡಿಗ್ರಿ ದಾಖಲಾಗಿದ್ದು ಬೆಂಗಳೂರಿನ ಹಿಂದಿನ ದಾಖಲೆಯಾಗಿತ್ತು. ಇನ್ನು ಹಿಂದಕ್ಕೆ ಹೋದರೆ 1937ರ ಮೇ 22 ರಂದು 39 ಡಿಗ್ರಿ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಹೇಳುತ್ತದೆ. ಆದರೆ ಮಂಗಳವಾರದ ಬಿಸಿಲು ಇದೆಲ್ಲವನ್ನು ಸುಟ್ಟುಹಾಕಿದೆ.

ರಣಬಿಸಿಲಿಗೆ ಮಲೆನಾಡು ಭಾಗವೂ ಸುಡುತ್ತಿದೆ. ಶಿವಮೊಗ್ಗದಲ್ಲಿ 38 ಡಿಗ್ರಿ, ಶಿರಸಿ 36 ಡಿಗ್ರಿ ಉಷ್ಣಾಂಶ ದಾಖಲು ಮಾಡಿದೆ. ಉಳಿದಂತೆ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗಗಳು 40 ಡಿಗ್ರಿ ಆಸುಪಾಸಿನಲ್ಲಿವೆ. ರಾಜ್ಯದ ಎಲ್ಲೆಡೆ ಬಿಸಿಲಿನ ಝಳ ಮುಂದುವರಿಯಲಿದ್ದು ಸದ್ಯಕ್ಕೆ ಮಳೆ ಸಂಭವ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚೆನ್ನೈಗಿಂತ ಅಧಿಕ

ಚೆನ್ನೈಗಿಂತ ಅಧಿಕ

ಬೆಂಗಳೂರು ಸಮುದ್ರ ತೀರ ಚೆನ್ನೈ ಗಿಂತ ಅಧಿಕ ಬಿಸಿಯಾಗಿದೆ. ಚೆನ್ನೈನಲ್ಲಿ ಮಂಗಳವಾರ 32 ಡಗ್ರಿ ಉಷ್ಣತೆ ಇದ್ದರೆ ಬೆಂಗಳೂರಲ್ಲಿ 40 ಡಿಗ್ರಿ ಇತ್ತು.

 ಯುಗಾದಿ ಮರುದಿನ

ಯುಗಾದಿ ಮರುದಿನ

ಯುಗಾದಿ ಕಳೆದ ನಂತರದ ದಿನಗಳಲ್ಲಿ ಅಂದರೆ ಕಳೆದ ಎರಡು ಮೂರು ದಿನದಲ್ಲಿ ಉಷ್ಣತೆ ಏಕಾಏಕಿ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲ್ಲಿಯೂ ತಾಪಮಾನ ಕೆಳಕ್ಕೆ ಬರುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ಈ ಬಾರಿ ಮುಂಗಾರು ಭರ್ಜರಿ

ಈ ಬಾರಿ ಮುಂಗಾರು ಭರ್ಜರಿ

ಕಳೆದೆರಡು ವಷ೯ಗಳಿಗಿ೦ತ ಈ ಬಾರಿ ಉತ್ತಮ ಮು೦ಗಾರು ಮಳೆಯಾಗಲಿದೆ ಎ೦ದು ಕೇ೦ದ್ರ ಹವಾಮಾನ ಇಲಾಖೆ ಹೇಳಿದೆ. ಮಳೆ ಕೊರತೆ ಎದುರಿಸುತ್ತಿದ್ದ ದೇಶ ಈ ಬಾರಿ ಹದ ಮಳೆಯ ನಿರೀಕ್ಷೆ ಇದೆ.

 ಕಾದ ಕರ್ನಾಟಕ

ಕಾದ ಕರ್ನಾಟಕ

ರಾಜ್ಯದಲ್ಲಿ ಸದ್ಯಕ್ಕೆ ತಾಪಮಾನ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ರಾಯಚೂರಿನಲ್ಲಿ ಬಿಂದಿಗೆ ನೀರಿಗೆ 20 ರು. ಬಳ್ಳಾರಿಯಲ್ಲಿ ಬಿಂದಿಗೆ ನೀರಿಗೆ ಮೈಲುಗಟ್ಟಲೆ ನಡೆಯುವುದು ಎಲ್ಲವೂ ಸಾಮಾನ್ಯ ಸುದ್ದಿಯಾಗಿ ಮಾರ್ಪಾಡಾಗುತ್ತಿದೆ.

English summary
Bengaluru touched 40 degree celsius on Tuesday April 12. This is the new history of Bengaluru Weather. A latest research by meteorologists has found that the 'hotter months' in the city are increasing by the year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X