ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಇನ್ನೂ ಶೇ.82ರಷ್ಟು ಮಂದಿಗೆ ಲಸಿಕೆ ನೀಡಬೇಕಿದೆ: ತಜ್ಞರು

|
Google Oneindia Kannada News

ಬೆಂಗಳೂರು, ಮೇ 17: ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ತಾಂಡವವಾಡುತ್ತಿದೆ, ಹೀಗಿರುವಾಗ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ತ್ವರಿತಗತಿಯಲ್ಲಿ ನೀಡುವುದು ಬಹಳ ಮುಖ್ಯವಾದ ವಿಚಾರ, ಮೂರನೇ ಅಲೆಯು ಅಪ್ಪಳಿಸುವ ಭಯವೂ ಎದುರಾಗಿದೆ ಇನ್ನೂ ಶೇ.82ರಷ್ಟು ಮಂದಿಗೆ ಲಸಿಕೆ ನೀಡಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

8.6 ಲಕ್ಷ ಆರೋಗ್ಯ ಕಾಳಜಿ ನೌಕರರಿಗೆ ಕೋವಿಡ್-19 ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಈವರೆಗೂ 4,60,437 ಮಂದಿಗೆ ಅಷ್ಟೇ ಎರಡೂ ಡೋಸ್ ಗಳ ಲಸಿಕೆ ದೊರೆತಿದೆ. ಕನಿಷ್ಟ 2.4 ಲಕ್ಷ ಆರೋಗ್ಯ ಕಾಳಜಿ ಕಾರ್ಯಕರ್ತರು ಎರಡನೇ ಡೋಸ್ ಲಸಿಕೆಗೆ ಕಾಯುತ್ತಿದ್ದರೆ 1.6 ಲಕ್ಷ ಮಂದಿ ಇನ್ನೂ ಮೊದಲ ಡೋಸ್ ಗಾಗಿಯೇ ಕಾಯುತ್ತಿದ್ದಾರೆ. ಈ ಸಂಖ್ಯೆಗಳನ್ನು ತಲುಪುವುದಕ್ಕೆ ಸರ್ಕಾರಕ್ಕೆ ತಕ್ಷಣಕ್ಕೆ 5.6 ಲಕ್ಷ ಡೋಸ್‌ಗಳಷ್ಟು ಲಸಿಕೆ ಅವಶ್ಯಕತೆ ಇದೆ.

ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುತ್ತಾ, ತಜ್ಞರು ಹೇಳೋದೇನು?ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುತ್ತಾ, ತಜ್ಞರು ಹೇಳೋದೇನು?

ಮುನ್ನೆಲೆ ಕಾರ್ಯಕರ್ತರಿಗೆ 5.4 ಲಕ್ಷ ಲಸಿಕೆಗಳು ಒಟ್ಟಾರೆ ಸಿಗಬೇಕಿದೆ. ಇನ್ನು ಮುನ್ನೆಲೆ ಕಾರ್ಯಕರ್ತರ ವಿಷಯದಲ್ಲಿ 6 ಲಕ್ಷ ಟಾರ್ಗೆಟ್‌ ಹೊಂದಲಾಗಿದ್ದು, 1.2 ಲಕ್ಷ ಮಂದಿ ಇನ್ನೂ ಮೊದಲ ಲಸಿಕೆಯನ್ನೇ ಪಡೆದಿಲ್ಲ. 3 ಲಕ್ಷ ಮಂದಿ ಎರಡನೇ ಡೋಸ್ ಗಾಗಿ ಕಾಯುತ್ತಿದ್ದಾರೆ. ಈ ವಿಭಾಗದವರಿಗೆ ಎರಡೂ ಡೋಸ್ ಗಳನ್ನು ಪೂರೈಸುವುದಕ್ಕೆ ಸರ್ಕಾರಕ್ಕೆ ಒಟ್ಟು 5.4 ಲಕ್ಷ ಲಸಿಕೆಗಳ ಅಗತ್ಯವಿದೆ.

 In Karnataka Over 82% Wait To Be Vaccinated

ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯ ಪ್ರಕಾರ 1.5 ಲಕ್ಷ ಡೋಸ್ ಗಳಷ್ಟು ಕೋವ್ಯಾಕ್ಸಿನ್ ಹಾಗೂ 6.5 ಲಕ್ಷ ಡೋಸ್ ಗಳಷ್ಟು ಕೋವಿಶೀಲ್ಡ್ ಲಸಿಕೆಗಳು ರಾಜ್ಯದ ಬಳಿ ಲಭ್ಯವಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ರಾಜ್ಯಾದ್ಯಂತ 5.11 ಕೋಟಿ ಮಂದಿ (18 ವರ್ಷದ ಮೇಲ್ಪಟ್ಟವರೂ ಸೇರಿ) ಲಸಿಕೆ ಪಡೆಯುವುದಕ್ಕೆ ಅರ್ಹರಿದ್ದಾರೆ. ಲಸಿಕೆ ಅಭಿಯಾನ ಪ್ರಾರಂಭವಾದಾಗಿನಿಂದ (ಜನವರಿ ತಿಂಗಳಿನಿಂದ) ಮೇ.16 ವರೆಗೂ 1,11,88,143 ಮಂದಿಗೆ ಲಸಿಕೆ ನೀಡಲಾಗಿದ್ದು, ಇನ್ನೂ 4.22 ಕೋಟಿ ಮಂದಿಗೆ ಲಸಿಕೆ ನೀಡಬೇಕಿದ್ದು, ಶೇ.82 ರಷ್ಟು ಮಂದಿ ಲಸಿಕೆಗಾಗಿ ಕಾಯುತ್ತಿದ್ದಾರೆ. ಈ ಪೈಕಿ 66.4 ಲಕ್ಷ ಮಂದಿ ಫಲಾನುಭವಿಗಳು ಎರಡನೇ ಡೋಸ್ ಗಾಗಿ ಕಾಯುತ್ತಿದ್ದಾರೆ.

ಕೊರೊನಾ ವೈರಸ್ 3ನೇ ಅಲೆ ಎದುರಿಸಲು ಜೆಎಸ್ಎಸ್ ಆಸ್ಪತ್ರೆ ಸನ್ನದ್ಧಕೊರೊನಾ ವೈರಸ್ 3ನೇ ಅಲೆ ಎದುರಿಸಲು ಜೆಎಸ್ಎಸ್ ಆಸ್ಪತ್ರೆ ಸನ್ನದ್ಧ

ಇನ್ನು ಈಗ ಎರಡು ಡೋಸ್ ಗಳ ಲಸಿಕೆಯ ಅಂತರವನ್ನು 12-16 ವಾರಗಳಿಗೆ ಹೆಚ್ಚಿಸಿರುವುದರಿಂದ 1.68 ಲಕ್ಷ ಮಂದಿಗೆ ಕಾಯುವುದಕ್ಕೆ ಹೆಚ್ಚಿನ ಸಮಯ ಸಿಕ್ಕಂತಾಗಿದೆ.

Recommended Video

ಯಾವ ವ್ಯಾಕ್ಸಿನ್ ಸೇಫ್ ? ಇಲ್ಲಿದೆ ಉತ್ತರ! | Oneindia Kannada

ಈ ಅಂಕಿ-ಅಂಶಗಳೇನೇ ಇರಲಿ, ತಜ್ಞರ ಪ್ರಕಾರ ರಾಜ್ಯ ಇನ್ನೂ 4.40 ಲಕ್ಷ ಮಂದಿಗೆ ತಕ್ಷಣವೇ ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಬೇಕಿದ್ದು, ಅವರೆಲ್ಲರೂ ನಾಲ್ಕು ವಾರಗಳನ್ನು ಪೂರ್ಣಗೊಳಿಸಿರುವುದರಿಂದ ಕಾಯುವಂತೆ ಹೇಳುವುದಕ್ಕೆ ಸಾಧ್ಯವಿಲ್ಲ ಮೈಕ್ರೋ ಪ್ಲಾನಿಂಗ್ ಯೋಜನೆಯಲ್ಲಿ ಸರ್ಕಾರ ಎಡವಿದೆ ಎಂದು ತಜ್ಞರು ಹೇಳಿದ್ದಾರೆ. ಅಂಕಿ-ಅಂಶಗಳು ಹೀಗಿದ್ದು, ಲಸಿಕೆ ಅಭೊಯಾನವನ್ನು ಚುರುಕುಗೊಳಿಸುವುದು ಆರೋಗ್ಯ ಇಲಾಖೆಗೆ ಸವಾಲಿನ ಸಂಗತಿಯಾಗಿದೆ.

English summary
The clock is ticking away for Karnataka on the vaccine front even as the anticipated third wave looms large. Over 82 per cent of those eligible for Covid vaccinations are yet to be inoculated against the dreaded disease, while 66.4 lakh beneficiaries are waiting for their second dose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X