• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳೆದ ಒಂದು ವಾರದ ಕೋವಿಡ್ ಹೊಸ ಸೋಂಕಿತರ ಸಂಖ್ಯೆಯಲ್ಲಿ ಈ ಜಿಲ್ಲೆ ಟಾಪ್

|

ಬೆಂಗಳೂರು, ಮಾರ್ಚ್ 8: ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದಲ್ಲಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಕಳೆದ ಒಂದು ವಾರದ ಗ್ರಾಫ್ ಅನ್ನು ಅವಲೋಕಿಸಿದಾಗ, ರಾಜ್ಯದಲ್ಲೂ ಗಣನೀಯ ಪ್ರಮಾಣದಲ್ಲಿ ಇದು ಹೆಚ್ಚಾಗುತ್ತಿದೆ.

ಇದ್ದ ಎಲ್ಲಾ ನಿರ್ಬಂಧಗಳನ್ನು ಸರಕಾರ ತೆಗೆದುಹಾಕಿದ ನಂತರ, ಸಾರ್ವಜನಿಕರಿಗೆ ಕೋವಿಡ್ ವಿಚಾರದಲ್ಲಿ ಅಸಡ್ಡೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಹೊರತು ಪಡಿಸಿ, ಮಿಕ್ಕ ಕಡೆ ಮಾಸ್ಕ್ ಧರಿಸುವುದನ್ನು ಜನರು ಮರೆತಂದಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಶೇ 10ರಷ್ಟು ಏರಿಕೆ

ಕೇಂದ್ರ ಸರಕಾರ ಮತ್ತು ಆಯಾಯ ರಾಜ್ಯಗಳ ಆರೋಗ್ಯ ಇಲಾಖೆ ಈ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಿದ್ದರೂ, ಜನರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ.

ಕಳೆದ ಒಂದು ವಾರದಿಂದ, ಅಂದರೆ ಮಾರ್ಚ್ ಒಂದರಿಂದ, ಏಳರವರೆಗೆ ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟು ಸೋಂಕಿತರಿದ್ದಾರೆ, ಮೃತಪಟ್ಟವರೆಷ್ಟು ಎನ್ನುವ ಮಾಹಿತಿಯಿಲ್ಲಿದೆ:

ಮಹಿಳೆ ಸಾವಿನ ಬಳಿಕ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಬಳಕೆ ನಿಲ್ಲಿಸಿದ ಆಸ್ಟ್ರಿಯಾ

ಬಾಗಲಕೋಟೆಯಲ್ಲಿ ಈ ಅವಧಿಯಲ್ಲಿ ಕೇವಲ ಎರಡು ಹೊಸ ಸೋಂಕಿತರು

ಬಾಗಲಕೋಟೆಯಲ್ಲಿ ಈ ಅವಧಿಯಲ್ಲಿ ಕೇವಲ ಎರಡು ಹೊಸ ಸೋಂಕಿತರು

ಬಾಗಲಕೋಟೆಯಲ್ಲಿ ಈ ಅವಧಿಯಲ್ಲಿ ಕೇವಲ ಎರಡು ಹೊಸ ಸೋಂಕಿತ ಕೇಸ್ ದಾಖಲಾಗಿದ್ದರೆ, ಬಳ್ಳಾರಿಯಲ್ಲಿ 42, ಬೆಳಗಾವಿಯಲ್ಲಿ 62, ಬೆಂಗಳೂರು ಗ್ರಾಮಾಂತರದಲ್ಲಿ 42, ಬೀದರ್ ನಲ್ಲಿ 101, ಚಾಮರಾಜನಗರದಲ್ಲಿ 21, ಚಿಕ್ಕಬಳ್ಳಾಪುರದಲ್ಲಿ 39, ಚಿಕ್ಕಮಗಳೂರಿನಲ್ಲಿ 15, ಚಿತ್ರದುರ್ಗದಲ್ಲಿ 44 ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಮಾರ್ಚ್ 1-7ರ ಅವಧಿಯಲ್ಲಿ ವರದಿಯಾಗಿದೆ.

ಹೊಸ ಕೇಸ್ ಗಳು ಮಾರ್ಚ್ 1-7ರ ಅವಧಿಯಲ್ಲಿ

ಹೊಸ ಕೇಸ್ ಗಳು ಮಾರ್ಚ್ 1-7ರ ಅವಧಿಯಲ್ಲಿ

ದಕ್ಷಿಣಕನ್ನಡ ಜಿಲ್ಲೆಯಲ್ಲಿ 128, ದಾವಣಗೆರೆಯಲ್ಲಿ 24, ಧಾರವಾಡ 67, ಗದಗ 14, ಹಾಸನ 48, ಹಾವೇರಿ 5, ಕಲಬುರಗಿ 154, ಕೊಡಗು 33, ಕೋಲಾರ 21, ಕೊಪ್ಪಳ 3, ಮಂಡ್ಯ 22, ಮೈಸೂರು 105, ರಾಯಚೂರು 14, ರಾಮನಗರ 5, ಶಿವಮೊಗ್ಗ 21 ಹೊಸ ಕೇಸ್ ಗಳು ಮಾರ್ಚ್ 1-7ರ ಅವಧಿಯಲ್ಲಿ ವರದಿಯಾಗಿದೆ.

ಬೆಂಗಳೂರು ನಗರದಲ್ಲಿ ಒಂದು ವಾರದ ಅವಧಿಯಲ್ಲಿ 2,388 ಹೊಸ ಕೇಸು

ಬೆಂಗಳೂರು ನಗರದಲ್ಲಿ ಒಂದು ವಾರದ ಅವಧಿಯಲ್ಲಿ 2,388 ಹೊಸ ಕೇಸು

ತುಮಕೂರು 127, ಉಡುಪಿ 106, ಉತ್ತರ ಕನ್ನಡ 41, ವಿಜಯಪುರ 53 ಮತ್ತು ಯಾದಗಿರಿ ಜಿಲ್ಲೆಯಲ್ಲಿ ಎಂಟು ಹೊಸ ಕೇಸ್ ಗಳು ದಾಖಲಾಗಿವೆ. ಇನ್ನು, ಕೋವಿಡ್ ಹೊಸ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದ್ದು ಬೆಂಗಳೂರು ನಗರದಲ್ಲಿ ಈ ಕಳೆದ ಒಂದು ವಾರದ ಅವಧಿಯಲ್ಲಿ ಇಲ್ಲಿ 2,388 ಹೊಸ ಕೇಸುಗಳು ದಾಖಲಾಗಿವೆ.

ಮಾರ್ಚ್ ಒಂದರಿಂದ ಏಳರವರೆಗೆ ಒಟ್ಟು ಮೃತ ಪಟ್ಟವರ ಸಂಖ್ಯೆ 31

ಮಾರ್ಚ್ ಒಂದರಿಂದ ಏಳರವರೆಗೆ ಒಟ್ಟು ಮೃತ ಪಟ್ಟವರ ಸಂಖ್ಯೆ 31

ಅಂದರೆ ಒಟ್ಟಾರೆ ಹೊಸ ಸೋಂಕಿತರ ಸಂಖ್ಯೆಯಾದ 3,764ರಲ್ಲಿ ಬೆಂಗಳೂರು ನಗರ ಒಂದರಲ್ಲೇ ಶೇ.65ರಷ್ಟು ಹೊಸ ಸೋಂಕಿತರಿದ್ದಾರೆ. ಮಾರ್ಚ್ ಒಂದರಿಂದ ಏಳರವರೆಗೆ ಒಟ್ಟು ಮೃತ ಪಟ್ಟವರ ಸಂಖ್ಯೆ 31. ಅದರಲ್ಲಿ ಬೆಂಗಳೂರಿನ ಪಾಲು ಇಪ್ಪತ್ತು. ಮಾರ್ಚ್ ಏಳರವರೆಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,862.

   Karnataka Budget 2021 : ಯಡಿಯೂರಪ್ಪ ಅವರ 2021 ಬಜೆಟ್ ! | Oneindia Kannada

   English summary
   In Karnataka New Covid Cases From March 1 to 7, Which District Is On Top
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X