ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳನ್ನು ತಗ್ಗಿಸಬೇಕು: ತಜ್ಞರು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ತೀವ್ರತೆ ಒಂದೊಮ್ಮೆ ಕಡಿಮೆ ಇದ್ದರೂ ಕೂಡ, ಸಕ್ರಿಯ ಪ್ರಕರಣಗಳನ್ನು ತಗ್ಗಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಸೆಪ್ಟೆಂಬರ್ 11ರಿಂದ ಅಕ್ಟೋಬರ್ 13ರವರೆಗೆ 30 ದಿನಗಳ ವಿಶ್ಲೇಷಣೆಯನ್ನು ತೆಗೆದುಕೊಂಡರೆ ಕೋವಿಡ್ -19 ಕರ್ನಾಟಕದಲ್ಲಿ 24 ಸಾವಿರದ 869 ಸೋಂಕಿತ ಪ್ರಕರಣಗಳು ಮತ್ತು 228 ಸಾವು ಸಂಭವಿಸಬಹುದು ಎಂದು ಹೇಳಲಾಗಿದೆ.

ಬೆಂಗಳೂರಲ್ಲಿ ಕೋವಿಡ್ ಲಸಿಕೆ ನೀಡಿಕೆ ಇಳಿಮುಖಗೊಂಡಿದ್ದೇಕೆ? ಬೆಂಗಳೂರಲ್ಲಿ ಕೋವಿಡ್ ಲಸಿಕೆ ನೀಡಿಕೆ ಇಳಿಮುಖಗೊಂಡಿದ್ದೇಕೆ?

ಕೊರೊನಾ ಸೋಂಕಿನ ಗರಿಷ್ಠ ಏರಿಕೆ ಅವಧಿಗೆ ಹೋಲಿಸಿದರೆ ಈ ಸಂಖ್ಯೆ ಅಷ್ಟು ಹೆಚ್ಚಿಲ್ಲವೆಂದು ತೋರುತ್ತದೆಯಾದರೂ, ಅಕ್ಟೋಬರ್ ಅಂತ್ಯದ ಮೊದಲು ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 10 ಸಾವಿರಕ್ಕಿಂತ ಕಡಿಮೆ ಮಾಡುವತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

In Karnataka Need To Bring Down Active Cases: Experts

ಜೀವನ್ ರಕ್ಷಾ ಸಂಸ್ಥೆ ನಡೆಸಿದ ಈ ವಿಶ್ಲೇಷಣೆಯು ಸೆಪ್ಟೆಂಬರ್ 11 ರ ಹೊತ್ತಿಗೆ ರಾಜ್ಯದಲ್ಲಿ ಸಕ್ರಿಯ ಕೊರೋನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ 29 ಲಕ್ಷದ 60 ಸಾವಿರದ 131ರಷ್ಟಿದ್ದರೆ ಅಕ್ಟೋಬರ್ 13 ರ ವೇಳೆಗೆ 29 ಲಕ್ಷದ 85 ಸಾವಿರಕ್ಕೆ ಏರಿಕೆಯಾಗಲಿದೆ, ಇದೇ ಅವಧಿಯಲ್ಲಿ ಸಾವುಗಳು 37 ಸಾವಿರದ 472 ರಿಂದ 37 ಸಾವಿರದ 700 ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ.

ರಾಜ್ಯದ ಸಕ್ರಿಯ ಪ್ರಕರಣಗಳು ಇತ್ತೀಚೆಗೆ ಗಣನೀಯವಾಗಿ ಇಳಿದಿವೆ. ಜೂನ್ 13 ರಂದು, ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 1 ಲಕ್ಷದ 80 ಸಾವಿರದ 835 ಆಗಿದ್ದರೆ, ಜುಲೈ 13ರ ಹೊತ್ತಿಗೆ, 34 ಸಾವಿರದ 234 ಪ್ರಕರಣಗಳಿಗೆ ಇಳಿಕೆಯಾಗಿದೆ, ಆಗಸ್ಟ್ 13 ರಂದು 22 ಸಾವಿರದ 703 ಸಕ್ರಿಯ ಪ್ರಕರಣಗಳು ಮತ್ತು ಸೆಪ್ಟೆಂಬರ್ 13 ರಂದು ಇದು 16 ಸಾವಿರದ 341 ಸಕ್ರಿಯ ಪ್ರಕರಣಗಳಿಗೆ ಇಳಿದಿದೆ. ಆದಾಗ್ಯೂ, ಇನ್ನೊಂದು ತಿಂಗಳಲ್ಲಿ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 10 ಸಾವಿರಕ್ಕಿಂತ ಕಡಿಮೆಗೆ ಬರಬೇಕೆಂದು ತೋರಿಸುತ್ತದೆ.

ದೇಶದಲ್ಲಿ ಹೆಚ್ಚುತ್ತಿರುವ ಲಸಿಕೆ ಅಭಿಯಾನದಿಂದಾಗಿ, ಕೊರೊನಾ ಮೂರನೇ ಅಲೆಯು ಮೊದಲ ಅಲೆಗಿಂತ ಕಡಿಮೆ ತೀವ್ರತೆಯನ್ನು ಹೊಂದಿರುವ ಸಾಧ್ಯತೆಯಿದೆ. 3ನೇ ಅಲೆಯು ತುಂಬಾ ನಿಧಾನವಾಗಿ ಮತ್ತು ಕಡಿಮೆಯಾಗಿರಬಹುದು, ಅದರ ಪರಿಣಾಮ ಜನರ ಮೇಲೆ ಕಡಿಮೆಯಾಗಬಹುದು.

ಆರೋಗ್ಯ ಮೂಲಸೌಲಭ್ಯ ಹೆಚ್ಚಾಗಿ ಜನರಿಗೆ ಕೊರೋನಾಗೆ ಚಿಕಿತ್ಸೆ ಸೌಲಭ್ಯ ವೇಗವಾಗಿ ಸಿಗುವಂತಾಗಬಹುದು. ಆದರೆ ದೊಡ್ಡ ದೊಡ್ಡ ಸಭೆ-ಸಮಾರಂಭಗಳನ್ನು ನಡೆಸುವ ಬಗ್ಗೆ ಇನ್ನೂ ಕೆಲ ಸಮಯ ಎಚ್ಚರಿಕೆ ಇರಬೇಕು ಎಂದು ಸಂಸ್ಥೆಯ ವಿಶ್ಲೇಷಣೆ ಹೇಳುತ್ತದೆ ಎಂದು ಹಳೆಯ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ ಮನೋಹರ್ ಕೆ ಎನ್ ತಿಳಿಸಿದ್ದಾರೆ.

ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ (ಸಿಸಿಎಸ್‌ಟಿ)ನ ಸದಸ್ಯ ಡಾ ಅನೂಪ್ ಅಮರನಾಥ್, ಸಾಂಕ್ರಾಮಿಕ ರೋಗಶಾಸ್ತ್ರದ ಮೇಲೆ ನಿಗಾ ಇಡಬೇಕು ಎಂದು ಹೇಳುತ್ತಾರೆ. ಇದೀಗ, ಜಿಲ್ಲೆಗಳಲ್ಲಿ ಕೂಡ ಸೋಂಕಿನ ದರ ಕಡಿಮೆಯಾಗುತ್ತಿದೆ ಎಂದು ಹೇಳಿರುವುದಾಗಿ 'ಇಂಡಿಯನ್ ಎಕ್ಸ್‌ ಪ್ರೆಸ್' ವರದಿ ಮಾಡಿದೆ. ಅಂದರೆ ಮೂರನೇ ಅಲೆಯ ತೀವ್ರತೆ ಕಡಿಮೆಯಾಗಿದೆ ಎಂದರ್ಥ. ಮುಂದೆ, ಸೋಂಕನ್ನು ನಿಯಂತ್ರಿಸಲು ಹೊಸ ತಳಿಗಳು ಮತ್ತು ಜಿಯೊಮಿಕ್ ಅಧ್ಯಯನವನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳುತ್ತಾರೆ.

ಕಳೆದ ಶುಕ್ರವಾರದಿಂದ ಸೋಮವಾರದ ತನಕ ರಾಜ್ಯದಲ್ಲಿ ಪ್ರತಿದಿನ 2.07 ಲಕ್ಷ ಡೋಸ್ ಲಸಿಕೆಯನ್ನು ಮಾತ್ರ ನೀಡಲಾಗಿದೆ. ಪ್ರತಿದಿನ ಕನಿಷ್ಠ 5.43 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತಿತ್ತು. ಆಗಸ್ಟ್ 21ರಿಂದ ಸೆಪ್ಟೆಂಬರ್ 9ರ ತನಕ ಹೋಲಿಕೆ ಮಾಡಿದರೆ ಲಸಿಕೆ ನೀಡುವ ಪ್ರಮಾಣ ಇಳಿಮುಖಗೊಂಡಿದೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಲಸಿಕೆ ನೀಡುವ ಪ್ರಮಾಣ ಇಳಿಮುಖವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ, "ಸಾಲು-ಸಾಲು ರಜೆ ಮತ್ತು ಗೌರಿ ಗಣೇಶ ಹಬ್ಬದ ಕಾರಣದಿಂದಾಗಿ ಲಸಿಕೆ ನೀಡುವ ಪ್ರಮಾಣ ಇಳಿಕೆಯಾಗಿದೆ. ಸೆಪ್ಟೆಂಬರ್ 13ರ ಸೋಮವಾರದಿಂದ ಪುನಃ ಲಸಿಕೆ ನೀಡುವ ಪ್ರಮಾಣ ಹೆಚ್ಚಿಸಲಾಗಿದೆ" ಎಂದು ಹೇಳಿದ್ದಾರೆ.

ಕೇಂದ್ರದಿಂದ ಪೂರೈಕೆಯಾಗುವ ಲಸಿಕೆ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದ್ದರಿಂದ ಲಸಿಕೆ ನೀಡುವ ಸಂಖ್ಯೆಯೂ ಕಡಿಮೆಯಾಗಿದೆ. ಎಂಬ ಸುದ್ದಿಗಳಿತ್ತು. ಆದರೆ ಆರೋಗ್ಯ ಸಚಿವರು ಇದನ್ನು ತಳ್ಳಿಹಾಕಿದ್ದಾರೆ. ಲಸಿಕೆ ಪೂರೈಕೆ ಸಾಮಾನ್ಯವಾಗಿಯೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

Recommended Video

ಪೆಟ್ರೋಲ್ ಡೀಸೆಲ್ GST ವ್ಯಾಪ್ತಿಗೆ ಬಂದ್ರೆ ಪೆಟ್ರೋಲ್ ಬೆಲೆ ಇಷ್ಟೊಂದು ಕಮ್ಮಿಯಾಗುತ್ತಾ? | Oneindia Kannada

English summary
A 30-day analysis (September 11-October 13) of Covid-19 projection shows that Karnataka will add 24,869 cases and 228 deaths during the period. While the numbers do not seem to be that high, compared to the peak period, the analysis states that the focus now needs to be on bringing down the active cases to below 10,000 before October-end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X