ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದ ಪ್ರಲ್ಹಾದ್ ಜೋಶಿ? 'ಅತೃಪ್ತ ಆತ್ಮಗಳು' ಎಂದಿದ್ದು ಯಾರಿಗೆ?

|
Google Oneindia Kannada News

ಯಡಿಯೂರಪ್ಪನವರ ಸರಕಾರದ ಕ್ಯಾಬಿನೆಟ್ ವಿಸ್ತರಣೆಯ ವೇಳೆ, ಸೈನಿಕ ಸಿ.ಪಿ.ಯೋಗೀಶ್ವರ್ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಲಬಾರದು ಎಂದು ರೇಣುಕಾಚಾರ್ಯ ನೇತೃತ್ವದಲ್ಲಿ ಅತೃಪ್ತ ಶಾಸಕರ ಸಭೆ ನಡೆದಿತ್ತು.

ಇದಾದ ನಂತರ, ಸಂಪುಟದಲ್ಲಿ ಮೂಲ ಬಿಜೆಪಿಗರಿಗೆ ಮಣೆಹಾಕಿಲ್ಲವೆಂದು ಅಲ್ಲಲ್ಲಿ ಬಿಜೆಪಿ ಶಾಸಕರು ಸಭೆ ಸೇರಿದ್ದರು. ಈ ರೀತಿಯ ಒಂದು ಸಭೆಯಲ್ಲಿ ಮಾಜಿ ಸಿಎಂ, ಹಾಲೀ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭಾಗವಹಿಸಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು.

ಕೊರೋನಾ ಭೀತಿ: ಲೋಕಸಭಾ ಅಧಿವೇಶನ ಕುರಿತು ಪ್ರಹ್ಲಾದ್ ಜೋಶಿ ಹೇಳಿಕೆಕೊರೋನಾ ಭೀತಿ: ಲೋಕಸಭಾ ಅಧಿವೇಶನ ಕುರಿತು ಪ್ರಹ್ಲಾದ್ ಜೋಶಿ ಹೇಳಿಕೆ

"ಪಕ್ಷಕ್ಕೆ ವಲಸೆ ಬಂದವರಿಗೆ ಯಡಿಯೂರಪ್ಪನವರು ಅಳೆದು ತೂಗಿ ಸಚಿವ ಸ್ಥಾನ ನೀಡುತ್ತಿದ್ದಾರೆ. ನನಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಬೇಸರವಿಲ್ಲ" ಎಂದು ಪಕ್ಷದ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದರೂ, ಅಸಮಾಧಾನದ ಹೊಗೆ, ಇನ್ನೂ ಆರಿಲ್ಲ ಎನ್ನುವುದು ಸ್ಪಷ್ಟ.

ಕೊರೊನಾ: ಎಚ್ದಿಕೆ ಟ್ವೀಟ್ ಗೆ ಶ್ರೀರಾಮುಲು ಪ್ರತಿಕ್ರಿಯೆ, ಕುಮಾರಣ್ಣ ಬೌನ್ಸ್ ಬ್ಯಾಕ್ಕೊರೊನಾ: ಎಚ್ದಿಕೆ ಟ್ವೀಟ್ ಗೆ ಶ್ರೀರಾಮುಲು ಪ್ರತಿಕ್ರಿಯೆ, ಕುಮಾರಣ್ಣ ಬೌನ್ಸ್ ಬ್ಯಾಕ್

ಇನ್ನು, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪದ ವಿಚಾರದಲ್ಲಿ ಪಕ್ಷದ ಮುಖಂಡರಲ್ಲಿ ಅಸಮಾಧಾನವಿದೆ ಎನ್ನುವ ಸುದ್ದಿಯ ನಡುವೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎರಡು ದಿನಗಳ ಕೆಳಗೆ, ಅತೃಪ್ತ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದರು ಎನ್ನುವುದು ಪಕ್ಷದೊಳಗೆ ದೊಡ್ಡ ಸುದ್ದಿಯಾಗಿದೆ. ಆದರೆ, ಈ ವಿಚಾರವನ್ನು ಕೇಂದ್ರ ಸಚಿವರು ನೇರಾನೇರ ನಿರಾಕರಿಸಿದ್ದಾರೆ. ಅತೃಪ್ತ ಆತ್ಮಗಳು ಎಂದು ಜೋಶಿ ಹೇಳಿದ್ದು ಯಾರನ್ನು?

ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವ ಕಾರ್ಯಕ್ರಮವನ್ನು ಸಿಎಂ ಹೊಂದಿದ್ದರು

ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವ ಕಾರ್ಯಕ್ರಮವನ್ನು ಸಿಎಂ ಹೊಂದಿದ್ದರು

ಎರಡು ದಿನಗಳ ಕೆಳಗೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೋರ್ ಕಮಿಟಿ ಸಮಿತಿ ಸಭೆ ನಡೆದಿತ್ತು. ಅದರಲ್ಲಿ, ಯಡಿಯೂರಪ್ಪ, ಪ್ರಲ್ಹಾದ್ ಜೋಶಿ ಆದಿಯಾಗಿ ಹಿರಿಯ ಮುಖಂಡರು ಭಾಗವಹಿಸಿದ್ದರು. ಸಭೆ ಮುಗಿದ ನಂತರ, ಚಿನ್ನೇನಹಳ್ಳಿಯಲ್ಲಿರುವ RSS ಕಚೇರಿಯಲ್ಲಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವ ಕಾರ್ಯಕ್ರಮವನ್ನು ಸಿಎಂ ಹೊಂದಿದ್ದರು. (ಫೈಲ್ ಫೋಟೋ)

ಇಲ್ಲ ಸರ್, ಹುಬ್ಬಳ್ಳಿ ಹೋಗಿ, ಅಲ್ಲಿಂದ ದೆಹಲಿಗೆ ಹೋಗಬೇಕು

ಇಲ್ಲ ಸರ್, ಹುಬ್ಬಳ್ಳಿ ಹೋಗಿ, ಅಲ್ಲಿಂದ ದೆಹಲಿಗೆ ಹೋಗಬೇಕು

ಕೋರ್ ಕಮಿಟಿ ಸಭೆ ಮುಗಿದ ನಂತರ, ನಡ್ಡಾ ಅವರನ್ನು ಭೇಟಿಯಾಗಲು ಹೋಗೋಣ ಬನ್ನಿ ಎಂದು ಜೋಶಿ ಅವರನ್ನು ಯಡಿಯೂರಪ್ಪ ಕರೆದಿದ್ದರು. ಆಗ, "ಇಲ್ಲ ಸರ್, ಹುಬ್ಬಳ್ಳಿ ಹೋಗಿ, ಅಲ್ಲಿಂದ ದೆಹಲಿಗೆ ಹೋಗಬೇಕು' ಎಂದು ಜೋಶಿ, ಮಲ್ಲೇಶ್ವರಂ ಕಚೇರಿಯಿಂದ, ಕುಮಾರಕೃಪಾ ಅತಿಥಿಗೃಹದಲ್ಲಿ ನಡೆಯುತ್ತಿದ್ದ ಬಿಜೆಪಿ ಅತೃಪ್ತ ಶಾಸಕರ ಸಭೆಗೆ ಹೋಗಿದ್ದರು ಎಂದು ಸುದ್ದಿಯಾಗಿತ್ತು. (ಫೈಲ್ ಫೋಟೋ)

ಯಡಿಯೂರಪ್ಪ ನಮ್ಮ ನಾಯಕರು

ಯಡಿಯೂರಪ್ಪ ನಮ್ಮ ನಾಯಕರು

ಈ ಸುದ್ದಿಗೆ ಪ್ರಲ್ಹಾದ್ ಜೋಶಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಯಡಿಯೂರಪ್ಪ ನಮ್ಮ ನಾಯಕರು. ಅವರು ಸಮರ್ಥವಾಗಿ ಸರಕಾರವನ್ನು ಮುನ್ನಡೆಸುತ್ತಿದ್ದಾರೆ. ಅವರೇ ಇನ್ನುಳಿದ ಅವಧಿಗೆ ರಾಜ್ಯದ ಮುಖ್ಯಮಂತ್ರಿ" ಎಂದು ಜೋಶಿ ಸ್ಪಷ್ಟನೆಯನ್ನು ನೀಡಿದ್ದಾರೆ. (ಫೈಲ್ ಫೋಟೋ)

ಅತೃಪ್ತ ಆತ್ಮಗಳು ಸುಳ್ಳುಸುದ್ದಿಯನ್ನು ಹಬ್ಬಿಸಿವೆ

ಅತೃಪ್ತ ಆತ್ಮಗಳು ಸುಳ್ಳುಸುದ್ದಿಯನ್ನು ಹಬ್ಬಿಸಿವೆ

"ಯಡಿಯೂರಪ್ಪನವರ ವಿರುದ್ದ ಸಭೆ ನಡೆಸುವಷ್ಟು ದೊಡ್ದವನು ನಾನಲ್ಲ. ಯಾವುದೋ ಅತೃಪ್ತ ಆತ್ಮಗಳು ಸುಳ್ಳು ವದಂತಿಯನ್ನು ಹಬ್ಬಿಸಿವೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಕೂಡಾ ಸ್ಪಷ್ಟನೆಯನ್ನು ನೀಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ" ಎಂದು ಪ್ರಲ್ಹಾದ್ ಜೋಶಿ, ಸ್ಪಷ್ಟನೆಯನ್ನು ನೀಡಿದ್ದಾರೆ. (ಫೈಲ್ ಫೋಟೋ)

English summary
In Karnataka BJP MLAs Separate Meeting, Did Prahlad Joshi Participated ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X