ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ತ್ರೈಮಾಸಿಕದಲ್ಲಿ ಕರ್ಣಾಟಕ ಬ್ಯಾಂಕ್ ಗಳಿಸಿದ ಲಾಭವೆಷ್ಟು?

|
Google Oneindia Kannada News

ಬೆಂಗಳೂರು, ಜುಲೈ 13: ಮಂಗಳೂರು ಮೂಲದ ಕರ್ಣಾಟಕ ಬ್ಯಾಂಕ್‌ನ 2019-20ರ ಆರ್ಥಿಕ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ 175.45 ಕೋಟಿ ರೂನಷ್ಟು ನಿವ್ವಳ ಲಾಭ ಗಳಿಸಿದೆ. ವರ್ಷದಲ್ಲಿ ಲಾಭ ಶೇ.7ರಷ್ಟು ಹೆಚ್ಚಳವಾಗಿದೆ.

ಮೊದಲ ಬಾರಿಗೆ ಖಾಸಗಿ ಬ್ಯಾಂಕ್‌ ಒಂದು ತನ್ನ ಲಾಭವನ್ನು ಘೋಷಿಸಿಕೊಂಡಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಜೂನ್‌ ತಿಂಗಳವರೆಗೆ ಮೂರು ತಿಂಗಳಲ್ಲಿ 163.24 ಕೋಟಿ ರೂ ಲಾಭ ಗಳಿಸಿತ್ತು. 2019ರ ಮಾರ್ಚ್ 31ರಂದು ವಿತ್ತ ವರ್ಷ ಪೂರ್ಣಗೊಂಡಿದೆ. ಒಂದು ವರ್ಷದ ಹಿಂದೆ 1,616.44 ಕೋಟಿ ಇದ್ದ ಆದಾಯ ಈಗ 1,829.16 ಕೋಟಿಗೆ ಹೆಚ್ಚಾಗಿದೆ.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಿತ್ತೀಯ ವರ್ಷ 2019ರ ಮೊದಲ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಜೂ.30ರ ಅಂತ್ಯಕ್ಕೆ ಬ್ಯಾಂಕ್‌ನ ಒಟ್ಟು ವ್ಯವಹಾರ 1,21,339.52 ಕೋಟಿ ರೂ.ಗಳನ್ನು ತಲುಪಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ.9.85 ಪ್ರಗತಿ ಸಾಧಿಸಿದೆ. ಬ್ಯಾಂಕ್‌ನ ಠೇವಣಿಗಳ ಮೊತ್ತ 62,275 ಕೋಟಿ ರೂ.ಗಳಿಂದ 68,520.72 ಕೋಟಿ ರೂ.ಗಳಿಗೆ ತಲುಪಿ ವಾರ್ಷಿಕ ಶೇ.9.24ರ ಪ್ರಗತಿ ಸಾಧಿಸಿದೆ. ಬ್ಯಾಂಕ್‌ನ ಮುಂಗಡಗಳು 47,731 ಕೋಟಿ ರೂ.ಗಳಿಂದ 52,818.80 ಕೋಟಿ ರೂ.ಗೆ ತಲುಪಿ ಶೇ.10.66ರ ವೃದ್ಧಿಯನ್ನು ದಾಖಲಿಸಿದೆ.

In first quarter Karnataka bank net profit rises

ಕಳೆದ ವರ್ಷ 222.06 ಕೋಟಿ ರೂ ಸಾಲ ನೀಡಲಾಗಿತ್ತು ಈ ಆರ್ಥಿಕ ವರ್ಷದಲ್ಲಿ 201.14 ಕೋಟಿ ರೂ ಸಾಲ ಬ್ಯಾಂಕಿನಿಂದ ನೀಡಲಾಗಿದೆ. ಜೂನ್ 30ರಂದು ಬ್ಯಾಂಕಿನ ಟರ್ನ್ಓವರ್ 1,21, 339.52 ಕೋಟಿಯಷ್ಟಿದ್ದು ಶೇ.9.85ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಿದೆ.

ಉಳಿತಾಯ ಖಾತೆ ಶೇ.9.23ಕ್ಕೆ ತಲುಪಿದ್ದು, ಕಳೆದ ಹಣಕಾಸು ವರ್ಷಕ್ಕಿಂತ ಬೆಳವಣಿಗೆ ಕಂಡಿದೆ. ಕಳೆದ ವರ್ಷ 62,725 ಕೋಟಿ ರೂ ಉಳಿತಾಯ ಖಾತೆಯಲ್ಲಿದ್ದರೆ ಈ ಬಾರಿ 68,520.72 ಕೋಟಿ ರೂ ಇದೆ. ನಾವು ಉತ್ತಮವಾದ ಲಾಭಾಂಶವನ್ನು ಗಳಿಸುವುದರೊಂದಿಗೆ ಅನುತ್ಪಾದಕ ಆಸ್ತಿಗಳನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದೇವೆ. ಇದು ಬ್ಯಾಂಕ್‌ನ ಬ್ಯಾಲೆನ್ಸ್‌ ಶೀಟ್‌ನ್ನು ಸಶಕ್ತಗೊಳಿಸಿದೆ.

ಬ್ಯಾಂಕಿಂಗ್‌ ವಲಯದಲ್ಲಿನ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳ ಮಧ್ಯೆಯೂ ಕರ್ಣಾಟಕ ಬ್ಯಾಂಕ್‌ ಸತತವಾಗಿ ಉತ್ತಮ ಫಲಿತಾಂಶಗಳನ್ನು ನೀಡುತ್ತಾ ಬಂದಿದೆ. ಇದು ಬ್ಯಾಂಕ್‌ನ ಸದೃಢತೆಯ ದ್ಯೋತಕವಾಗಿದೆ. ನಾವು ಈ ದಿಶೆಯಲ್ಲಿ ಮುನ್ನಡೆಯುತ್ತಾ ಬ್ಯಾಂಕ್‌ನ ಆರ್ಥಿಕ ಬೆಳವಣಿಗೆಯತ್ತ ಸಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. 2019-20ನೇ ಸಾಲಿನ ಮೊದಲನೇ ತ್ರೈಮಾಸಿಕ ಅಂತ್ಯಕ್ಕೆ ಅನುತ್ಪಾದಕ ಆಸ್ತಿ ಮೌಲ್ಯ ಶೇ.4.55ಕ್ಕೆ ಇಳಿಕೆ ಕಂಡಿದೆ, ಕಳೆದ ಬಾರಿ ಅದು 4.72ರಷ್ಟಿತ್ತು.

English summary
In first quarter Karnataka bank net profit rises to 175.42 crore, The private sector bank had posted a net profit of Rs 163.24 crore in the corresponding April-June period of the previous fiscal ended March 31, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X