ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಚುನಾವಣೆ; ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರಿ ಲಾಬಿ!

|
Google Oneindia Kannada News

ಬೆಂಗಳೂರು, ಜೂನ್ 14 : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪಡೆಯಲು ಭಾರಿ ಲಾಬಿ ನಡೆಯುತ್ತಿದೆ. ಅಚ್ಚರಿಯ ವಿಚಾರವೆಂದರೆ ಪ್ರತಿಪಕ್ಷ ನಾಯಕ ಸಿದ್ದರಾಯ್ಯ ಮೇಲೆ ಟಿಕೆಟ್ ಆಕಾಂಕ್ಷಿಗಳು ಒತ್ತಡ ಹಾಕುತ್ತಿದ್ದಾರೆ.

Recommended Video

ಒಂದು ದಿನದ ಮಳೆಗೇನೆ ಬೆಂಗಳೂರಿನಲ್ಲಿ ರಸ್ತೆ ಕುಸಿದ್ರೆ ಮಳೆಗಾಲ ಶುರುವಾದ್ರೆ ಏನ್ ಕಥೆ | Laggere | Oneindia Kannad

ಕರ್ನಾಟಕ ವಿಧಾನಸಭೆಯಿಂದ 7 ಸದಸ್ಯರನ್ನು ಪರಿಷತ್‌ಗೆ ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದೆ. ಶಾಸಕರ ಬಲದ ಆಧಾರದ ಮೇಲೆ ಕಾಂಗ್ರೆಸ್ ಎರಡು ಸ್ಥಾನದಲ್ಲಿ ಜಯಗಳಿಸಲಿದ್ದು, ಟಿಕೆಟ್‌ಗೆ ಭಾರಿ ಬೇಡಿಕೆ ಇದೆ.

65 ವರ್ಷ ಮೇಲ್ಪಟ್ಟವರು ಪರಿಷತ್ ಚುನಾವಣೆಗೆ ಸ್ಪರ್ಧಿಸಬಹುದು65 ವರ್ಷ ಮೇಲ್ಪಟ್ಟವರು ಪರಿಷತ್ ಚುನಾವಣೆಗೆ ಸ್ಪರ್ಧಿಸಬಹುದು

ನಿವೃತ್ತರಾಗಲಿರುವ ಸದಸ್ಯರು ಸೇರಿದಂತೆ ಡಜನ್‌ಗೂ ಅಧಿಕ ನಾಯಕರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಇವರಲ್ಲಿ ಮಹಿಳೆಯರು ಸಹ ಸೇರಿದ್ದಾರೆ. ಟಿಕೆಟ್ ಹಂಚಿಕೆ ಕಗ್ಗಂಟು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗುವ ನಿರೀಕ್ಷೆಯೂ ಇದೆ.

ವಿಧಾನ ಪರಿಷತ್ ಚುನಾವಣೆ; ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ವಿಧಾನ ಪರಿಷತ್ ಚುನಾವಣೆ; ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಪಕ್ಷಕ್ಕೆ ಅಧಿಕಾರ ಇಲ್ಲದ ಕಾಲದಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂದು ಕಾದು ನೋಡಬೇಕು.

ವಿಧಾನ ಪರಿಷತ್ ಚುನಾವಣೆ; ಯಡಿಯೂರಪ್ಪ ಮಾತೇ ಅಂತಿಮ! ವಿಧಾನ ಪರಿಷತ್ ಚುನಾವಣೆ; ಯಡಿಯೂರಪ್ಪ ಮಾತೇ ಅಂತಿಮ!

ಸಿದ್ದರಾಮಯ್ಯ ಭೇಟಿ

ಸಿದ್ದರಾಮಯ್ಯ ಭೇಟಿ

ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಗಳು ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ನಿವೃತ್ತಿ ಆಗುತ್ತಿರುವವರು ಪುನರಾಯ್ಕೆ ಬಯಸಿದರೆ, ಹಿರಿತನ ಪರಿಗಣಿಸಬೇಕು ಎಂದು ಕೆಲವು ನಾಯಕರು ಒತ್ತಾಯ ಮಾಡಿದ್ದಾರೆ. ಅಲ್ಪಸಂಖ್ಯಾತ, ಮಹಿಳಾ ಕೋಟಾದಡಿ ಟಿಕೆಟ್ ನೀಡಬೇಕು ಎಂದು ಸಿದ್ದರಾಮಯ್ಯ ಮೇಲೆ ಟಿಕೆಟ್ ಆಕಾಂಕ್ಷಿಗಳು ಒತ್ತಡವನ್ನು ಹಾಕುತ್ತಿದ್ದಾರೆ.

ಪ್ರಮುಖ ಆಕಾಂಕ್ಷಿಗಳು

ಪ್ರಮುಖ ಆಕಾಂಕ್ಷಿಗಳು

ಮಾಜಿ ಸಚಿವ ಎಂ. ಆರ್. ಸೀತಾರಾಂ, ಅಬ್ದುಲ್ ಜಬ್ಬಾರ್, ಕಳಲೆ ಕೇಶವಮೂರ್ತಿ, ಎಂ. ಡಿ. ಲಕ್ಷ್ಮೀ ನಾರಾಯಣ, ಚೆಲುವರಾಯಸ್ವಾಮಿ ಮುಂತಾದವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಲೋಕಸಭೆ ಟಿಕೆಟ್ ವಂಚಿತರಾದ ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡ ಸಹ ಟಿಕೆಟ್ ಬಯಸಿದ್ದಾರೆ.

ಕರ್ನಾಟಕ ವಿಧಾನಪರಿಷತ್ ಚುನಾವಣೆ ದಿನಾಂಕ, ವೇಳಾಪಟ್ಟಿಕರ್ನಾಟಕ ವಿಧಾನಪರಿಷತ್ ಚುನಾವಣೆ ದಿನಾಂಕ, ವೇಳಾಪಟ್ಟಿ

ಹಲವು ನಾಯಕರು ಆಕಾಂಕ್ಷಿಗಳು

ಹಲವು ನಾಯಕರು ಆಕಾಂಕ್ಷಿಗಳು

ಎಚ್‌. ಎಂ. ರೇವಣ್ಣ, ಐವಾನ್ ಡಿಸೋಜಾ, ನಸೀರ್ ಅಹ್ಮದ್, ಎಂ. ಸಿ. ವೇಣುಗೋಪಾಲ್ ಮರು ಆಯ್ಕೆ ಬಯಸಿದ್ದಾರೆ. ಮಾಜ ಸಂಸದ ವಿ. ಎಸ್. ಉಗ್ರಪ್ಪ, ರಾಣಿ ಸತೀಶ್, ಮೋಟಮ್ಮ ಅವರು ಸಹ ಪರಿಷತ್ ಟಿಕೆಟ್ ಬಯಸಿದ್ದಾರೆ.

ಹಿರಿಯ ನಾಯಕರ ಸಭೆ ಸಾಧ್ಯತೆ

ಹಿರಿಯ ನಾಯಕರ ಸಭೆ ಸಾಧ್ಯತೆ

ಪರಿಷತ್ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಜೂನ್ 18 ಕೊನೆಯ ದಿನವಾಗಿದೆ. ಪಕ್ಷದ ನಾಯಕರು ಸೋಮವಾರ ಅಥವ ಮಂಗಳವಾರ ಸಭೆ ಸೇರಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

English summary
Lobbying seems to have intensified among the senior Congress leaders to get the legislative council election ticket. Election will be held on June 29, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X