ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಕ್ ಬೌನ್ಸ್ ಪ್ರಕರಣಗಳ ಪರಿಹಾರ ನಿಗದಿಗೆ ವಿವೇಚನೆ ಬಳಸಲು ಹೈಕೋರ್ಟ್ ತಾಕೀತು

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು,ಜೂ.27. ಚಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ನಿಗದಿಗೂ ಮುನ್ನ ಮ್ಯಾಜಿಸ್ಪ್ರೇಟ್ ಕೋರ್ಟ್ ನ್ಯಾಯಾಧೀಶರು ತಮ್ಮ ವಿವೇಚನೆಯನ್ನು ಬಳಸಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.

ಚಕ್ ಬೌನ್ಸ್ ಪ್ರಕರಣಗಳನ್ನು ನಿರ್ವಹಿಸುವ ನೆಗೋಷಿಯಬಲ್ ಇನ್ಸಟ್ರುಮೆಂಟ್ ಕಾಯಿದೆ 2018ರ ತಿದ್ದುಪಡಿ ಮಾಡಿ ಸೆಕ್ಷನ್ 143ಎ ಸೇರಿಸಿ, ಮ್ಯಾಜಿಸ್ಪ್ರೇಟ್ಗೆ ಚಕ್ನ ಮೊತ್ತದ ಶೇ.20ರಷ್ಟನ್ನು ಮಧ್ಯಂತರ ಪರಿಹಾರವಾಗಿ ನೇರವಾಗಿ ಆರೋಪಿ ದೂರುದಾರರಿಗೆ ಪಾವತಿಸುವಂತೆ ಆದೇಶ ನೀಡುವ ಅಧಿಕಾರ ಕಲ್ಪಿಸಲಾಗಿದೆ.

ಆದರೆ ಹಾಗೆ ಮಾಡುವಾಗ ಮ್ಯಾಜಿಸ್ಪ್ರೇಟ್ ಆರೋಪಿ ವಿಚಾರಣೆಗೆ ಸಹಕರಿಸುತ್ತಿದ್ದಾರೆಯೇ, ಅವರ ನಡವಳಿಕೆ ಹೇಗಿದೆ ಎಂಬುದನ್ನು ಗಮನಿಸಬೇಕು, ಒಂದು ವೇಳೆ ಆರೋಪಿ ವಿಚಾರಣೆಗೆ ಚೆನ್ನಾಗಿ ಸಹಕರಿಸುತ್ತಿದ್ದರೆ, ಗೈರು ಹಾಜರಾಗದಿದ್ದರೆ ಆಗ ವಿವೇಚನೆ ಬಳಸಿ ಮಧ್ಯಂತರ ಪರಿಹಾರವನ್ನು ನಿಗದಿ ಮಾಡಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.

 In Cheque bounce case, magistrate should use discretionary power before fixing interim relief

ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ತಮಿಳುನಾಡಿನ ಮೆಟ್ಟುಪಾಳ್ಯಂನ ನಿವಾಸಿ ವಿ.ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಅರ್ಜಿದಾರರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.

ಹೈಕೋರ್ಟ್ ಆದೇಶವೇನಿದೆ?

ಒಂದು ವೇಳೆ ಆರೋಪಿ ಅನಗತ್ಯವಾಗಿ ವಿಚಾರಣೆಗೆ ಗೈರು ಹಾಜರಾಗುತ್ತಿದ್ದರೆ, ವಿಚಾರಣೆ ಮುಂದೂಡಿಸಿಕೊಳ್ಳುತ್ತಿದ್ದರೆ ಅಂತಹ ಸಂದರ್ಭಗಳಲ್ಲಿ ಮಧ್ಯಂತರ ಪರಿಹಾರ ಅರ್ಜಿ ಮಾನ್ಯ ಮಾಡುವುದು ಅನಿವಾರ್ಯವಾಗಲಿದೆ ಎಂದು ನ್ಯಾಯಪೀಠ ಹೇಳಿದೆ.

ಹಾಲಿ ಪ್ರಕರಣದಲ್ಲಿ ಒಟ್ಟು ವಹಿವಾಟಿನ ಮೊತ್ತ 5,56,71,208 ರೂ. ಮತ್ತು ಅದರಲ್ಲಿ ಶೇ. 20ರಷ್ಟು ಎಂದರೆ 55 ಲಕ್ಷ. ಅಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ನೀಡಬೇಕೆಂದು ಆದೇಶ ನೀಡಿರುವುದು ಸರಿಯಲ್ಲ, ಮ್ಯಾಜಿಸ್ಪ್ರೇಟ್‌ ಮಧ್ಯಂತರ ಪರಿಹಾರ ನಿಗದಿಗೂ ಮುನ್ನ ತನ್ನ ವಿವೇಚನೆ ಬಳಸಿಲ್ಲ, ನಿಗದಿಪಡಿಸಿದ ಮೊತ್ತಕ್ಕೆ ಕಾರಣವನ್ನೂ ನೀಡಿಲ್ಲ ಎಂದು ಕೋರ್ಟ್ ಹೇಳಿದೆ.

ಅಲ್ಲದೆ, ನ್ಯಾಯಪೀಠ ಪ್ರಕರಣವನ್ನು ಹೊಸದಾಗಿ ಪರಿಗಣಿಸಲು ಬೆಂಗಳೂರಿನ 28ನೇ ಹೆಚ್ಚುವರಿ ಚೀಫ್‌ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ಗೆ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:

Recommended Video

Kiccha Sudeep ನಿರೀಕ್ಷೆ ಮಾಡದ ಅಪರೂಪದ ಗಿಫ್ಟ್ ಕೊಟ್ಟ ಕ್ರಿಕೆಟ್ ದಂತಕಥೆ ಕಪಿಲ್ ದೇವ್ | *Cricket | OneIndia

ಚಿಲ್ಲರೆ ಮಾರಾಟಗಾರರಾದ ಅರ್ಜಿದಾರ ಕೃಷ್ಣಮೂರ್ತಿ, ಬೆಂಗಳೂರಿನ ಡೈರಿ ಕ್ಲಾಸಿಕ್ ಐಸ್‌ ಕ್ರೀಮ್ಸ್ ಪ್ರವೇಟ್ ಲಿಮಿಟೆಡ್ ಜೊತೆಗೆ 2017ರಲ್ಲಿ ಐಸ್ ಕ್ರೀಮ್ ಹಾಗೂ ಫ್ರೋಜನ್ ಉತ್ಪನ್ನಗಳನ್ನು ವಿತರಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆ ವೇಳೆ ಭದ್ರತೆ ದೃಷ್ಟಿಯಿಂದ ಅವರು ಖಾಲಿ ಚಕ್‌ ಗಳನ್ನು ಕಂಪನಿಗೆ ನೀಡಿದ್ದರು. ಆ ಕಂಪನಿ ದುರುಪಯೋಗಪಡಿಸಿಕೊಂಡು 5.56 ಕೋಟಿ ರೂ. ಎಂದು ಚಕ್‌ ನಲ್ಲಿ ನಮೂದಿಸಿದ್ದರು, ಆ ಚಕ್‌ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲದ ಕಾರಣಕ್ಕೆ ಬೌನ್ಸ್ ಆಗಿತ್ತು.
ಚಕ್‌ ಬೌನ್ಸ್‌ ಪ್ರಕರಣ ನ್ಯಾಯಾಲಯದಲ್ಲಿವಿಚಾರಣೆ ನಡೆಸುತ್ತಿತ್ತು. ಮಧ್ಯಂತರ ಪರಿಹಾರವಾಗಿ ಮ್ಯಾಜಿಸ್ಪ್ರೇಟ್‌ 55 ಲಕ್ಷ ರೂ. ನಿಗದಿಪಡಿಸಿದ್ದನ್ನು ಅರ್ಜಿದಾರರು ಪ್ರಶ್ನಿಸಿ, ಆ ಮೊತ್ತ ಕಡಿಮೆ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

English summary
High Court has held that Magistrate Court judges should exercise their discretion before interim relief in cheque bounce cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X