ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು, ಕರಾವಳಿ ಭಾಗದಲ್ಲಿ ಮುಂದಿನ 48 ಗಂಟೆ ಭಾರಿ ಮಳೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 9 : ಮಳೆಯ ಹನಿಗಳು ಅದೆಲ್ಲಿ ಮೋಡದ ಮರೆಯಲ್ಲಿ ಅಡಗಿ ಕುಳಿತಿದ್ದವೋ? ಬೆಂಗಳೂರಿನ ಕೊಳೆಯನ್ನೆಲ್ಲ ತೊಳೆದು ಹಾಕುವ ಹಾಗೆ ಒಂದೇ ಸವನೆ ರಪರಪನೆ ಬಾರಿಸುತ್ತಿವೆ. ಒಟ್ಟಿನಲ್ಲಿ ಮಣ್ಣಿನ ವಾಸನೆ ಮತ್ತೆ ಗ್ರಹಿಸುವ ಸೌಭಾಗ್ಯ.

ಶನಿವಾರ ಸಂಜೆಯಿಂದಲೇ ಯಾವ ಪರಿ ಸುರಿಯುತ್ತದೆಯೆಂದರೆ ಹಲವು ಬಡಾವಣೆಗಳಲ್ಲಿ ಬೋಟುಗಳನ್ನು ತರಿಸಬೇಕಾದ ಸಂದರ್ಭ ಎದುರಾಗಿದೆ. ರಸ್ತೆಗಳೆಲ್ಲ ತುಂಬಿ ಹರಿಯುತ್ತಿವೆ. ಕೊಡೆ ತರಲು ಮರೆತವರಿಗೆ ಮಳೆರಾಯ ಇದ್ದಕ್ಕಿದ್ದಂತೆ ಅಚ್ಚರಿ ಮೂಡಿಸಿದ್ದಾನೆ.

ನಗರದಲ್ಲಿ ಗುಡುಗು ಸಿಡಿಲು ಸಮೇತ ಭಾರೀ ಮಳೆ ಸುರಿಯುತ್ತಿದ್ದು, ಬಿರುಗಾಳಿಗೆ ಅಲ್ಲಲ್ಲಿ ಮರಗಳೂ ಉರುಳಿರುವ ವರದಿಗಳು ಬರುತ್ತಿವೆ. ಅಡ್ಡಾಡುವವರು ಎಚ್ಚರಿಕೆಯಿಂದ ಅಡ್ಡಾಡಬೇಕಾಗಿ ವಿನಂತಿ.

ಬೆಂಗಳೂರು ಹಾಗೂ ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಲ್ಲಿ ಚಳಿ ಇಳಿಕೆ, ಸೆಕೆ ಆರಂಭ, 2 ದಿನ ತುಂತುರು ಮಳೆ ಸಾಧ್ಯತೆಬೆಂಗಳೂರಲ್ಲಿ ಚಳಿ ಇಳಿಕೆ, ಸೆಕೆ ಆರಂಭ, 2 ದಿನ ತುಂತುರು ಮಳೆ ಸಾಧ್ಯತೆ

in 48 hours normal rain expected in coastal karnataka

ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಡಿಲು ಬಡಿದು ಒಬ್ಬ ಯುವ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬೆಂಗಳೂರಲ್ಲಿಯೂ ಕೂಡ ಜಯನಗರ, ಬನಶಂಕರಿ, ಉತ್ತರಹಳ್ಳಿ, ವಿಧಾನಸೌಧ ಇನ್ನಿತರೆ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಮುಂದಿನ 24 ಗಂಟೆಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

in 48 hours normal rain expected in coastal karnataka

ಬೆಳಗಾವಿಯಲ್ಲಿ ಅತಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್, ಗರಿಷ್ಠ 32.6 ಡಿಗ್ರಿ ಸೆಲ್ಸಿಯಸ್, ಕೆಐಎನಲ್ಲಿ ಕನಿಷ್ಠ 19.5 ಡಿಗ್ರಿ ಸೆಲ್ಸಿಯಸ್, ಗರಿಷ್ಠ 31.6 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್, ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

English summary
In 48 hours Rain/thundershowers likely to occur at isolated places over Interior Karnataka and Bengaluru. Dry weather very likely to prevail over Coastal Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X