ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ, ಗದಗ, ಬಳ್ಳಾರಿಯಲ್ಲಿ ಸುರಿದ ಆಲಿಕಲ್ಲು ಮಳೆ, 2 ದಿನ ಮಳೆ

|
Google Oneindia Kannada News

ಬೆಂಗಳೂರು, ಮಾರ್ಚ್ 30: ಬಿಸಿಲ ಬೇಗೆಯಿಂದ ಬಳಲುತ್ತಿದ್ದ ರಾಜ್ಯದ ಜನತೆಗೆ ಮಳೆರಾಯ ತಂಪನೆರೆದಿದ್ದಾನೆ. ರಾಜ್ಯಾದ್ಯಂತ ಹಲವು ಕಡೆ ಶುಕ್ರವಾರ ಆಲಿಕಲ್ಲು ಸಹಿತ ಮಳೆಯಾಗಿದೆ. ಇದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಗದಗ ಸೇರಿದಂತೆ ರಾಜ್ಯಾದ್ಯಂತ ಶುಕ್ರವಾರ ಭಾರಿ ಸಂಜೆ ಮಳೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿರಾಜಪೇಟೆ, ಬಂಡೀಪುರದಲ್ಲಿ ಮಳೆ, ರೈತರಲ್ಲಿ ಸಂತಸವಿರಾಜಪೇಟೆ, ಬಂಡೀಪುರದಲ್ಲಿ ಮಳೆ, ರೈತರಲ್ಲಿ ಸಂತಸ

ಮಿಂಚು, ಗುಡುಗು ಹಾಗೂ ಆಲಿಕಲ್ಲಿನಿಂದ ಕೂಡಿದ ಮಳೆ ಸುಮಾರು 20 ನಿಮಿಷಗಳ ಕಾಲ ಸುರಿದಿದೆ. ಕಾಫಿ, ಅಡಿಕೆಗೆ ಒಳ್ಳೆಯ ಮಳೆ ದೊರೆತಂತಾಗಿದೆ. ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಶುಕ್ರವಾರ ಮಳೆಯಾಗಿದೆ.

In 24 hours rain likely to occurat isolated places over the state

ಬಿಸಿಲಿನ ಬೇಗೆಯಿದ ಬಳಲುತ್ತಿದ್ದ ಮಲೆನಾಡಿಗೆ ಜೀವ ಬಂದಂತಾಗಿದೆ. ಕೊಡಗು ಜಿಲ್ಲೆಯ ನಾಪೊಕ್ಲು ಹೋಬಳಿ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬಲಮುರಿ, ಪಾರಾಣೆ, ಕೈಕಾಡು, ಬೇತು ಭಾಗಗಳಲ್ಲಿ 25ಮಿ.ಮೀ ಮಳೆಯಾಗಿದೆ.

ಇನ್ನೆರಡು ದಿನದಲ್ಲಿ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ಮಳೆಇನ್ನೆರಡು ದಿನದಲ್ಲಿ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ಮಳೆ

ದಾವಣಗೆರೆ ಜಿಲ್ಲೆ ಉಚ್ಚಂಗಿದುರ್ಗ ಸಮೀಪದ ಅರಸೀಕೆರೆ ಹೋಬಳಿ ವ್ಯಾಪ್ತಿಯ ಕೆಲೆವೆಡೆ ಆಲಿಕಲ್ಲು ಮಳೆಯಾಗಿದೆ. ಚಿತ್ರದುರ್ಗ, ಮಲೆಬೆನ್ನೂರು ಭಾಗದಲ್ಲೂ ಮಳೆಯಾಗಿದೆ. ಬೆಂಗಳೂರು ಜನತೆ ಕೂಡ ಬಿಸಿಲಿನಿಂದ ಬೇಸತ್ತಿದ್ದು ಮಳೆಯ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ 19.6 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಬೆಂಗಳೂರಿನ ಕೇಂದ್ರದಲ್ಲಿ ಗರಿಷ್ಠ ಉಷ್ಣಾಂಶ 35.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 23.4 ಡಿಗ್ರಿ ಸೆಲ್ಸಿಯಸ್, ಕೈಎನಲ್ಲಿ ಗರಿಷ್ಠ ಉಷ್ಣಾಂಶ 35.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 34.6ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

English summary
Rain/Thundershowers likely to occurat isolated places over North interior Karnataka. Dry weather very likely to prevail over coastal Karnataka and South interior Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X