ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ, ದೆಹಲಿ ಚುನವಣೆ : ಗುರುವಾರ ಗಮನಿಸಬೇಕಾದ ಇನ್ನಿತರ ಸುದ್ದಿಗಳು

|
Google Oneindia Kannada News

ಬೆಂಗಳೂರು, ಜನವರಿ 30: ರಾಜ್ಯ ಹಾಗೂ ಕೇಂದ್ರ ಎರಡೂ ಕಡೆಗಳಲ್ಲಿ ರಾಜಕೀಯ ಚಟುವಟಿಕೆಗಳು ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ.

ಗುರುವಾರ ಹಲವು ಮುಖ್ಯ ಘಟನಾವಳಿಗಳು ನಡೆಯಲಿದ್ದು, ಮಾಹಿತಿ, ಆಸಕ್ತಿ, ಭವಿಷ್ಯದ ದೃಷ್ಟಿಯಿಂದ ಗಮನಿಸಬೇಕಾದ ಪ್ರಮುಖ ಸುದ್ದಿಗಳ ಪಟ್ಟಿ ಇಲ್ಲಿದೆ.

Important News To Follow On Thursday

* ಯಡಿಯೂರಪ್ಪ ಅವರು ಇಂದು ದೆಹಲಿಗೆ ತೆರಳಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ದೆಹಲಿಗೆ ಯಡಿಯೂರಪ್ಪ; ಸಂಪುಟ ವಿಸ್ತರಣೆ ಲೆಕ್ಕಾಚಾರಗಳುದೆಹಲಿಗೆ ಯಡಿಯೂರಪ್ಪ; ಸಂಪುಟ ವಿಸ್ತರಣೆ ಲೆಕ್ಕಾಚಾರಗಳು

* ಡಿಸಿಎಂ ಪಟ್ಟಕ್ಕಾಗಿ ತುದಿಗಾಲಲ್ಲಿ ಕಾದು ಕೂತಿರುವ ಶ್ರೀರಾಮುಲು ತಮಗೆ ಡಿಸಿಎಂ ಸ್ಥಾನ ದೂರವಾಗುತ್ತಿದೆ ಎಂದು ಅರಿತು ಭಿನ್ನ ರಾಗ ಹಾಡಲು ಪ್ರಾರಂಭಿಸಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

* ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದ್ದು, ಬಿಜೆಪಿ-ಕಾಂಗ್ರೆಸ್-ಎಎಪಿ ಬಿರುಸಿನ ಪ್ರಚಾರ ಕೈಗೊಂಡಿವೆ. ಇಂದು ಪ್ರಾಣಾಳಿಕೆ ಬಿಡುಗಡೆ ಸಾಧ್ಯತೆ ಇದೆ. ರಾಷ್ಟ್ರ ರಾಜಧಾನಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.

* ಹೈದರಾಬಾದ್‌ ನಲ್ಲಿ ನಾಲ್ವರನ್ನು ಕೊರೊನಾ ವೈರಸ್ ಶಂಕಿತರೆಂದು ಗುರುತಿಸಲಾಗಿದ್ದು, ಪರೀಕ್ಷಾ ವರದಿಗಳಿಗಾಗಿ ಎದುರು ನೋಡಲಾಗುತ್ತಿದೆ. ನಾಲ್ವರೂ ಸಹ ಚೀನಾದಿಂದ ಹಿಂದುರಿಗಿದವರಾಗಿದ್ದಾರೆ.

* ಐಎಂಎ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ರಾಜ್ಯದ ಇಬ್ಬರು ಪ್ರಮುಖ ಐಪಿಎಸ್ ಅಧಿಕಾರಿಗಳ ವಿಚಾರಣೆಯನ್ನು ನಡೆಸಲು ಸರ್ಕಾರವು ಸಿಬಿಐ ಗೆ ಒಪ್ಪಿಗೆ ನೀಡಿದೆ. ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ವಿಚಾರಣೆಗೆ ಒಳಗಾಗಲಿದ್ದಾರೆ.

* ನಿರ್ಭಯಾ ಅತ್ಯಾಚಾರಿಗಳಲ್ಲಿ ಒಬ್ಬಾತ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಲಿದೆ. ಇದು ಮಹತ್ವದ್ದಾಗಿದ್ದು, ಫೆಬ್ರವರಿ 1 ರಂದು ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗುತ್ತದೆಯೇ ಇಲ್ಲವೇ ಎಂಬುದು ನಿಶ್ಚಯವಾಗಲಿದೆ.

* ಜೆಡಿಯು ಪಕ್ಷದಲ್ಲಿ ನಾಯಕರ ಕಿತ್ತಾಟ ತಾರಕಕ್ಕೆ ಹೋಗಿದ್ದು, ನಿತೀಶ್ ಕುಮಾರ್ ಅವರು ಪ್ರಶಾಂತ್ ಕಿಶೋರ್ ಅವರನ್ನು ಉಚ್ಛಾಟನೆ ಮಾಡಿದ್ದಾರೆ. ಪ್ರಶಾಂತ್ ಕಿಶೋರ್ ಮುಂದಿನ ನಡೆ ಬಗ್ಗೆ ಕುತೂಹಲವಿದೆ.

* ಕೇಂದ್ರ ಬಜೆಟ್‌ಗೆ ತಯಾರಿ ಬಹುತೇಕ ಅಂತಿಮವಾಗಿದ್ದು, ಬಜೆಟ್‌ ಮಂಡನೆಗೆ ಮುಂಚಿನ ಹೇಳಿಕೆಗಳು, ಷೇರು ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಗಮನವಹಿಸಬೇಕಿದೆ.

* ಸಿಎಎ-ಎನ್‌ಆರ್‌ಸಿ ಪ್ರತಿಭಟನೆಗಳು ರಾಷ್ಟ್ರವ್ಯಾಪಿಯಾಗಿ ನಡೆಯುತ್ತಲೇ ಇವೆ. ಶಹೀನ್ ಬಾಗ್‌ನಲ್ಲಿ ಸತತ ಪ್ರತಿಭಟನೆ ನಡೆಯುತ್ತಿದೆ.

English summary
Here are some important news to follow on Thursday. Cabinet expansion, Delhi election, CAA-NRC protest many more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X