ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬುರೇವಿ' ಚಂಡಮಾರುತ; ಡಿ. 3 ಮತ್ತು 4ರಂದು ಯೆಲ್ಲೊ ಅಲರ್ಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 01 : ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ 'ಬುರೇವಿ' ಚಂಡಮಾರುತದ ಪರಿಣಾಮ ಎರಡು ದಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಡಿಸೆಂಬರ್ 3 ಮತ್ತು 4ರಂದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಭಾರತೀಯ ಹವಮಾನ ಇಲಾಖೆ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಡಿಸೆಂಬರ್ 3 ಮತ್ತು 4ರಂದು ಸುರಿಯುವ ಸಾಧ್ಯತೆ ಇದೆ ಎಂದು ಹೇಳಿದೆ. ರಾಜ್ಯದ ಮೇಲೆ ಈ ಚಂಡಮಾರುತ ಹೆಚ್ಚು ಪ್ರಭಾವ ಬೀರುವುದಿಲ್ಲ.

ಮತ್ತೆ ವಾಯುಭಾರ ಕುಸಿತ, ನಿವಾರ್ ಪರಿಣಾಮ ಮತ್ತೆ ಮಳೆ ಮತ್ತೆ ವಾಯುಭಾರ ಕುಸಿತ, ನಿವಾರ್ ಪರಿಣಾಮ ಮತ್ತೆ ಮಳೆ

'ಬುರೇವಿ' ಚಂಡಮಾರುತ ಶ್ರೀಲಂಕಾ ಹಾಗೂ ತಮಿಳುನಾಡು ಭಾಗದಲ್ಲಿ ಡಿಸೆಂಬರ್ 2ರಂದು ಅಪ್ಪಳಿಸಲಿದೆ. ಕರ್ನಾಟಕದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ. ಆದರೆ, ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ.

ವಾಯುಭಾರ ಕುಸಿತ; 4 ದಿನ ಕರ್ನಾಟಕದಲ್ಲಿ ಮಳೆ ವಾಯುಭಾರ ಕುಸಿತ; 4 ದಿನ ಕರ್ನಾಟಕದಲ್ಲಿ ಮಳೆ

IMD Issued Yellow Alert On December 3 And 4 For South Interior Karnataka

ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಈ ಚಂಡಮಾರುತ ಸಂಭವಿಸಲಿದೆ. ಪ್ರಸ್ತುತ ಮಾಹಿತಿಯಂತೆ ಚಂಡಮಾರುತ ದುರ್ಬಲವಾಗಿದೆ. ಆದರೆ, ತಮಿಳುನಾಡು ಕರಾವಳಿ ಭಾಗದಲ್ಲಿ ಮಳೆಯಾಗಲಿದೆ.

ಚಂಡಮಾರುತ: ತಮಿಳುನಾಡಿನಲ್ಲಿ ಮಳೆ ಶುರು ಚಂಡಮಾರುತ: ತಮಿಳುನಾಡಿನಲ್ಲಿ ಮಳೆ ಶುರು

ಕರ್ನಾಟಕದ ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಒಣಹವೆ ಮುಂದುವರೆಯಲಿದೆ. ಪೂರ್ವದಿಕ್ಕಿನಿಂದ ಗಾಳಿ ಬೀಸುತ್ತಿದ್ದು, ಚಳಿಯ ಸ್ಥಿತಿ ಮುಂದುವರೆಯಲಿದೆ. ದಾವಣಗೆರೆಯಲ್ಲಿ ಗರಿಷ್ಠ 14, ಕಾರವಾರದಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

English summary
The India Meteorological Department (IMD) has issued a yellow alert for south interior Karnataka on December 3 and 4, 2020 due to Burevi cyclone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X