ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಂಎ ಹಗರಣದ ತನಿಖೆ : ಬಿಜೆಪಿ ಸಂಸದರಿಂದ ಅಮಿತ್‌ ಶಾಗೆ ಮನವಿ

|
Google Oneindia Kannada News

ಬೆಂಗಳೂರು, ಜೂನ್ 26 : ಐಎಂಎ ಹಗರಣದ ಕುರಿತು ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಮನವಿ ಮಾಡಿದೆ. ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಇದುವರೆಗೂ 32 ಕೋಟಿ ರೂ. ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.

ಕರ್ನಾಟಕದ ಬಿಜೆಪಿ ಸಂಸದರ ನಿಯೋಗ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿತು. ಐಎಂಎ ಹಗರಣದ ಕುರಿತು ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದರು.

ಐಎಂಎ ವಂಚನೆ ಪ್ರಕರಣ ಸಿಬಿಐಗೆ ವಹಿಸಲು ಬಿಜೆಪಿ ಆಗ್ರಹಐಎಂಎ ವಂಚನೆ ಪ್ರಕರಣ ಸಿಬಿಐಗೆ ವಹಿಸಲು ಬಿಜೆಪಿ ಆಗ್ರಹ

ಈ ಹಗರಣದಿಂದಾಗಿ ಸಾಮಾನ್ಯ ಜನರಿಗೆ ಆಗಿರುವ ಅನ್ಯಾಯದ ವಿರುದ್ಧ, ಕೇಂದ್ರ ಗೃಹ ಸಚಿವಾಲಯ ತನಿಖೆ ನಡೆಸಿ ಅಲ್ಲಿ ಆದ ಅವ್ಯವಹಾರವನ್ನು ಬಯಲಿಗೆಳೆಯಬೇಕು ಹಾಗೂ ಶಾಮೀಲಾಗಿರುವ ಎಲ್ಲರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಲಾಗಿದೆ.

ಮನ್ಸೂರ್ ವಿಡಿಯೋ ಬಗ್ಗೆ ತನಿಖಾಧಿಕಾರಿಯ ಮೊದಲ ಪ್ರತಿಕ್ರಿಯೆಮನ್ಸೂರ್ ವಿಡಿಯೋ ಬಗ್ಗೆ ತನಿಖಾಧಿಕಾರಿಯ ಮೊದಲ ಪ್ರತಿಕ್ರಿಯೆ

IMA scam : Karnataka BJP seeks probe by central agency

ಪ್ರಸ್ತುತ ಐಎಂಎ ಹಗರಣದ ಬಗ್ಗೆ ಕರ್ನಾಟಕ ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ತನಿಖೆಯನ್ನು ನಡೆಸುತ್ತಿದೆ. ಬಿ.ಆರ್.ರವಿಕಾಂತೇಗೌಡ ಅವರ ನೇತೃತ್ವದ ಎಸ್‌ಐಟಿ ತನಿಖೆ ನಡೆಸುತ್ತಿದ್ದು, 15 ಸಾವಿರಕ್ಕೂ ಅಧಿಕ ದೂರುಗಳು ಇದುವರೆಗೂ ದಾಖಲಾಗಿವೆ.

ಐಎಂಎ ಜ್ಯುವೆಲ್ಸ್ ವಂಚನೆ ಕೇಸ್, ಮನ್ಸೂರ್ ಗೆ 'ಇಡಿ' ನೋಟಿಸ್ಐಎಂಎ ಜ್ಯುವೆಲ್ಸ್ ವಂಚನೆ ಕೇಸ್, ಮನ್ಸೂರ್ ಗೆ 'ಇಡಿ' ನೋಟಿಸ್

ಹಗರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಇದುವರೆಗೂ 32 ಕೋಟಿಗೂ ಅಧಿಕ ಮೊತ್ತದ ಆಸ್ತಿಗಳನ್ನು ವಶಕ್ಕೆ ಪಡೆದಿದೆ. ಐಎಂಎ ಮಾಲೀಕ ಮನ್ಸೂರ್ ಖಾನ್ ಬಂಧನ ಮಾತ್ರ ಆಗಿಲ್ಲ. ಆತ ವಿದೇಶದಲ್ಲಿರುವ ಮಾಹಿತಿ ಎಸ್‌ಐಟಿಗೆ ಸಿಕ್ಕಿದೆ.

ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಐಎಂಎ ಹಗರಣದಲ್ಲಿ ರಾಜ್ಯ ಸರ್ಕಾರ ಮೌನ ವಹಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಸಿಬಿಐಗೆ ವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.

English summary
Karnataka BJP MPs delegation met the union home minister Amit Shah and sought a central agency probe on IMA scam. Now Special Investigation Team probing the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X