ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಂಎ ಹಗರಣ: ಜಿಲ್ಲಾಧಿಕಾರಿ ಸೇರಿ ಮೂವರಿಗೆ ಜಾಮೀನು

|
Google Oneindia Kannada News

ಬೆಂಗಳೂರು, ಜುಲೈ 26: ಐಎಂಎ ಹಗರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಪ್ರಮುಖ ಸರ್ಕಾರಿ ಅಧಿಕಾರಿಗಳಿಗೆ ಇಂದು ಜಾಮೀನು ದೊರೆತಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳೂ ಸೇರಿದ್ದಾರೆ.

ಐಎಂಎ ಪ್ರಕರಣದಲ್ಲಿ ಒಂದೂವರೆ ಕೋಟಿ ಲಂಚ ಸ್ವೀಕರಿಸಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್, ನಾಲ್ಕುವೆ ಕೋಟಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧನಕ್ಕೆ ಓಳಗಾಗಿದ್ದ ಎಸಿ ನಾಗರಾಜು ಮತ್ತು ಮತ್ತೊಬ್ಬ ಅಧಿಕಾರಿಗೆ ಇಂದು ಜಾಮೀನು ದೊರೆತಿದೆ.

ಮನ್ಸೂರ್‌ ಅಲಿಖಾನ್ ಜು.26ರ ತನಕ ಇಡಿ ವಶಕ್ಕೆಮನ್ಸೂರ್‌ ಅಲಿಖಾನ್ ಜು.26ರ ತನಕ ಇಡಿ ವಶಕ್ಕೆ

ಆದರೆ ಜಾಮೀನು ನೀಡುವಂತೆ ಅರ್ಜಿ ಹಾಕಿದ್ದ ಐಎಂಎಯ ಕ್ಲರ್ಕ್‌ ಹನೀಫ್ ಅಫ್ಜರ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿದೆ.

Ima Ponzi Scheme Case Three People Get Bail

ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಜುಲೈ 8 ರಂದು ಎಸ್‌ಐಟಿಯು ಬಂಧಿಸಿತ್ತು. ಅವರಿಗೂ ಕೆಲವೇ ದಿನ ಮುನ್ನಾ ಎಸಿ ನಾಗರಾಜು ಅವರನ್ನು ಎಸ್‌ಐಟಿಯು ಬಂಧಿಸಿತ್ತು.

ವಿಜಯಶಂಕರ್ ಅವರು ಒಂದೂವರೆಕೋಟಿ ಲಂಚ ಪಡೆದ ಆರೋಪ ಹೊತ್ತಿದ್ದರೆ, ನಾಗರಾಜು, ಐಎಂಎ ಯಿಂದ ನಾಲ್ಕೂವರೆ ಕೋಟಿ ಲಂಚ ಪಡೆದ ಆರೋಪವನ್ನು ಹೊತ್ತಿದ್ದಾರೆ.

ಐಎಂಎ ಹಗರಣ: ಜಮೀರ್ ಅಹ್ಮದ್, ರೋಷನ್ ಬೇಗ್‌ಗೆ ಎಸ್‌ಐಟಿ ನೋಟಿಸ್ ಐಎಂಎ ಹಗರಣ: ಜಮೀರ್ ಅಹ್ಮದ್, ರೋಷನ್ ಬೇಗ್‌ಗೆ ಎಸ್‌ಐಟಿ ನೋಟಿಸ್

ಕೆಲವು ದಿನಗಳ ಮುಂಚೆಯಷ್ಟೆ ಐಎಂಎ ಹಗರಣದ ಪ್ರಮುಖ ಆರೋಪಿ, ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ವಿದೇಶದಿಂದ ಭಾರತಕ್ಕೆ ವಾಪಸ್ಸಾಗಿದ್ದು, ಪ್ರಸ್ತುತ ಇಡಿ ವಶದಲ್ಲಿದ್ದಾನೆ. ಇಂದು ಎಸ್‌ಐಟಿಯು ಮನ್ಸೂರ್‌ ಖಾನ್‌ನನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

English summary
IMA Ponzi scheme case: Three including Bengaluru Deputy Commissioner Vijay Shankar & Assistant Commissioner, Nagaraj granted bail in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X