ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಗಣಿಗಾರಿಕೆ : ಜನಾರ್ದನ ರೆಡ್ಡಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 27 : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಅದಿರು ಗಣಿಗಾರಿಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

ಶೇಖ್ ಸಾಬ್ ಗಣಿಯಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಮತ್ತು ಆಪ್ತರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

12 ವರ್ಷದ ದ್ವೇಷ ತೀರಿಸಿಕೊಂಡ ಕುಮಾರಸ್ವಾಮಿ : ಜನಾರ್ದನ ರೆಡ್ಡಿ12 ವರ್ಷದ ದ್ವೇಷ ತೀರಿಸಿಕೊಂಡ ಕುಮಾರಸ್ವಾಮಿ : ಜನಾರ್ದನ ರೆಡ್ಡಿ

ಚಾರ್ಜ್‌ಶೀಟ್‌ನಲ್ಲಿ ಜನಾರ್ದನ ರೆಡ್ಡಿ ಅವರು ಮೊದಲ ಆರೋಪಿಯಾಗಿದ್ದಾರೆ. ಅಲಿಖಾನ್ 2ನೇ ಆರೋಪಿ ಶ್ರೀನಿವಾಸ ರೆಡ್ಡಿ 3ನೇ ಆರೋಪಿಯಾಗಿದ್ದಾರೆ. ಖಾರದಪುಡಿ ಮಹೇಶ್ ಸೇರಿ ಹಲವರನ್ನು ಚಾರ್ಜ್‌ಶೀಟ್‌ನಿಂದ ಕೈ ಬಿಡಲಾಗಿದೆ.

ಆಂಬಿಡೆಂಟ್ ವಂಚನೆ ಪ್ರಕರಣ : ಜನಾರ್ದನ ರೆಡ್ಡಿಗೆ ತಾತ್ಕಾಲಿಕ ನೆಮ್ಮದಿಆಂಬಿಡೆಂಟ್ ವಂಚನೆ ಪ್ರಕರಣ : ಜನಾರ್ದನ ರೆಡ್ಡಿಗೆ ತಾತ್ಕಾಲಿಕ ನೆಮ್ಮದಿ

Janardhana Reddy

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ಐಪಿಸಿ ಸೆಕ್ಷನ್ 379, 420, ಎಂಎಂಡಿಆರ್ ಕಾಯ್ದೆಯ 125 ನಿಯಮ, ಕರ್ನಾಟಕ ಅರಣ್ಯ ಕಾಯ್ದೆ ನಿಯಮ 144ರ ಅಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.

ಅಲೋಕ್ ಕುಮಾರ್‌ರನ್ನು ಕಾಶ್ಮೀರಕ್ಕೆ ಕಳುಹಿಸಿ : ಜನಾರ್ದನ ರೆಡ್ಡಿಅಲೋಕ್ ಕುಮಾರ್‌ರನ್ನು ಕಾಶ್ಮೀರಕ್ಕೆ ಕಳುಹಿಸಿ : ಜನಾರ್ದನ ರೆಡ್ಡಿ

ಸುಮಾರು 1069 ಮೆಟ್ರಿಕ್ ಟನ್ ಅದಿರು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ 23,89,650 ರೂ. ನಷ್ಟ ಮಾಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

English summary
The special investigation team (SIT) probing Illegal mining filed the charge sheet against Former minister Janardhana Reddy and his close aide Ali Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X