ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗೆ ಬೆನ್ನುನೋವು: ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

By Srinath
|
Google Oneindia Kannada News

illegal-mining-accused-janardhan-reddy-treated-nimhans-for-back-pain
ಬೆಂಗಳೂರು, ಸೆ.13: ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲು ಪಾಲಾಗಿರುವ ಅಕ್ರಮ ಗಣಿಗಾರಿಕೆ ಆರೋಪಿ, ಮಾಜಿ ಬಿಜೆಪಿ ಸಚಿವ ಜನಾರ್ದನ ರೆಡ್ಡಿ ಈಗ ಎಲ್ಲಿದ್ದಾರೆ ಮತ್ತು ಹೇಗಿದ್ದಾರೆ?

2 ವರ್ಷದಿಂದ ಚಂಚಲಗೂಡ ಜೈಲು ವಾಸಿಯಾಗಿರುವ ರೆಡ್ಡಿಗೆ ವಿಪರೀತ ಬೆನ್ನುನೋವಂತೆ. ಹಾಗಾಗಿ, ಅವರು ಬೆಂಗಳೂರಿಗೆ ದೌಡಾಯಿಸಿದ್ದಾರೆ. ಬೆನ್ನು ನೋವು ನಿವಾರಿಸಿಕೊಳ್ಳಲು ಹೆಚ್ಚು ಸುದ್ದಿ ಸದ್ದು ಮಾಡದೆ ನಿಮ್ಹಾನ್ಸ್ ಆಸ್ಪತ್ರೆಗೂ ದಾಖಲಾಗಿದ್ದಾರೆ.

ಗುರುವಾರ ಬೆಳಗ್ಗೆ 10 ಗಂಟೆಗೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾದ ಜನಾರ್ದನ ರೆಡ್ಡಿಗೆ ನಿಮ್ಹಾನ್ಸ್ ವೈದ್ಯರು ತಕ್ಷಣ ತಪಾಸಣೆ ನಡೆಸಿ, ಚಿಕಿತ್ಸೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಅರುಣಾ ಲಕ್ಷ್ಮಿ, ಪುತ್ರಿ ಬ್ರಹ್ಣಿಣಿ, ಸಹೋದರ ಸೋಮಶೇಖರ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ಜತೆಗಿದ್ದರು.

ಚಿಕಿತ್ಸೆಯ ಬಳಿಕ ಜನಾರ್ದನ ರೆಡ್ಡಿ ಅವರನ್ನು ತಕ್ಷಣ ಬಿಗಿ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

English summary
Illegal Mining accused Janardhan Reddy treated at NIMHANS for back pain. He was treated at the Hospital on Sept 12 and immediately after the treatment he was frisked away too Parappana Agrahara jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X