• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿ ಅಧಿವೇಶನ: ನಾಲ್ವರು ಶಾಸಕರ ಕಥೆಯೇನು?

By Srinath
|

ಬೆಂಗಳೂರು, ನ.12: ಜೈಲು ಕಂಬಿ ಎಣಿಸುತ್ತಿರುವ ನಾಲ್ವರು ಶಾಸಕರಿಗೆ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಭಾಗ್ಯ ಪ್ರಾಪ್ತಿಯಾಗುತ್ತದಾ? ಹಾಗಾದರೂ ಒಂದು ನಾಲ್ಕು ದಿನದ ಮಟ್ಟಿಗೆ ಅವರು ಸ್ವಲ್ಪಮಟ್ಟಿಗಾದರೂ ಸ್ವತಂತ್ರಹಕ್ಕಿಗಳಾಗಿರಲು ಸಾಧ್ಯವಾಗುತ್ತದಾ?

ಅಕ್ರಮ ಗಣಿ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಜೈಲು ಪಾಲಾಗಿರುವ ಸತೀಶ್‌ ಸೈಲ್, ಬಿ ನಾಗೇಂದ್ರ, ಆನಂದ್‌ ಸಿಂಗ್ ಮತ್ತು ಸುರೇಶ್‌ ಬಾಬು ಅವರುಗಳು ಬೆಳಗಾವಿಯಲ್ಲಿ ನವೆಂಬರ್ 5ರಿಂದ (ಡಿಸೆಂಬರ್ 6ರವರೆಗೆ ಒಟ್ಟು 10 ದಿನ) ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆಯೇ ? ಕಾನೂನು ಪಂಡಿತರ ಪ್ರಕಾರ ವಿಚಾರಣಾಧೀನ ಕೈದಿಗಳಾಗಿರುವ ಶಾಸಕರಿಗೆ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶ ಸಿಗುವುದು ತುಂಬಾ ಕಡಿಮೆ.

ಒಂದು ವೇಳೆ ನ್ಯಾಯಾಲಯ ಅನುಮತಿ ಕೊಟ್ಟರೂ ಅವರು ವಿಚಾರಣಾದೀನ ಕೈದಿ ಗಳಾಗಿರುವುದರಿಂದ ಪೊಲೀಸರ ಎಸ್ಕಾರ್ಟ್‌ನೊಂದಿಗೆ ಅಧಿವೇಶನದಲ್ಲಿ ಪಾಳ್ಗೊಳ್ಳಬೇಕಾಗುತ್ತದೆ. ಅದರಿಂದ ಅವರಿಗೇ ತೀರಾ ಮುಜುಗರದ ಸನ್ನಿವೇಶ ಸೃಷ್ಟಿಯಾಗಲಿದೆ. ಒಂದು ವೇಳೆ ಇವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರೂ ಅದನ್ನು ನ್ಯಾಯಾಲಯ ಪುರಸ್ಕಾರ ಮಾಡುವುದಕ್ಕಿಂತ ತಿರಸ್ಕಾರ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ನ್ಯಾಯಾಧೀಶರು ಸಭಾಧ್ಯಕ್ಷರ ಅಭಿಪ್ರಾಯವನ್ನು ಕೇಳಿ ತೀರ್ಮಾನ ತೆಗೆದುಕೊಳ್ಳಬಹುದು. ವಿಧಾನಸಭೆಯಲ್ಲಿ ಅಥವಾ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಅಳಿವು- ಉಳಿವು ನಿರ್ಧಾರವಾಗುವಂತಹ ವಿಶ್ವಾಸ ಮತಯಾಚನೆ ಅಥವಾ ತೀರ ಮಹತ್ವದ ಮಸೂದೆ ಚರ್ಚೆ ಇದ್ದರೆ ಹಾಗೂ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಯಂತಹ ಸನ್ನಿವೇಶಗಳು ಇದ್ದರೆ ಮಾತ್ರ ಅವಕಾಶಸಿಗುತ್ತದೆ. ಆದರೆ, ಬೆಳಗಾವಿ ಅಧಿವೇಶನ ಕೇವಲ 10 ದಿನಕ್ಕೆ ಸೀಮಿತವಾಗಿರುವುದರಿಂದ, ಮಹತ್ತರವಾದ ವಿಧೇಯಕ ವಿಷಯ ಅಲ್ಲಿ ಚರ್ಚೆಗೆ ಬಾರದೇ ಇರುವ ಹಿನ್ನೆಲೆಯಲ್ಲಿ ಈ ಶಾಸಕರಿಗೆ ಕಲಾಪದಲ್ಲಿ ಭಾಗವಹಿಸುವುದು ಅನಿವಾರ್ಯ ಎಂಬಂತಹ ಪರಿಸ್ಥಿತಿಯೇನೂ ಇಲ್ಲವಾಗಿದೆ.

ಕೇಸುಗಳು ಪಕ್ಕಾ ಆಗಿವೆ:

ಗಮನಾರ್ಹವೆಂದರೆ, ಈಗಾಗಲೇ ನಾಲ್ವರು ಶಾಸಕರು ಜಾಮೀನಿಗೆ ಮನವಿ ಮಾಡಿಕೊಂಡಿದ್ದರೂ ಸಿಬಿಐ ನ್ಯಾಯಾಲಯದಲ್ಲಿ ಜಾಮೀನು ದೊರೆತಿಲ್ಲ. ಹೈಕೋರ್ಟಿನಲ್ಲೂ ಕೂಡ ಈವರೆಗೆ ಜಾಮೀನು ಮನವಿಗೆ ಪುರಸ್ಕಾರ ಸಿಕ್ಕಿಲ್ಲ. ಅಷ್ಟರಮಟ್ಟಿಗೆ ಇವರುಗಳ ವಿರುದ್ಧದ ಕೇಸುಗಳು ಪಕ್ಕಾ ಆಗಿವೆ.

ಪಕ್ಷೇತರ ಶಾಸಕರಾದ ಕೂಡ್ಲಗಿಯ ನಾಗೇಂದ್ರ, ಕಾರವಾರದ ಸತೀಶ್ ಶೈಲ್ ಮತ್ತು ಆನಂದ್‌ ಸಿಂಗ್ ಬಿಜೆಪಿಯ ಮಾಜಿ ಸಚಿವ. ಇನ್ನು, ಬಿಎಸ್‌ ಆರ್ ಕಾಂಗ್ರೆಸ್ ಪಕ್ಷದ ಕಂಪ್ಲಿ ಶಾಸಕ ಟಿಎಚ್ ಸುರೇಶ್‌ ಬಾಬು. ಈ ಶಾಸಕರುಗಳು ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕೂ ಸ್ಪೀಕರ್ ಅವರಿಗೂ ಏನೇನೂ ಸಂಬಂಧವಿಲ್ಲ. ಇದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ವಿಧಾನಸಭೆಯ ಕಾರ್ಯದರ್ಶಿ ಓಂಪ್ರಕಾಶ್ ಅಭಿಪ್ರಾಯಪಡುತ್ತಾರೆ.

ಶಾಸಕ ಸ್ಥಾನವನ್ನೇ ಕಳೆದುಕೊಳ್ಳಬೇಕಾಗುತ್ತದೆ!:

ಇದೇ ರೀತಿ ಸತತವಾಗಿ ಮೂರು ಅಧಿವೇಶನಗಳಿಗೆ ಈ ಶಾಸಕರು ಬಾರದೇ ಹೋದರೆ, ಬರಲು ಸಾಧ್ಯವಾಗದಿದ್ದರೆ ಅವರುಗಳು ಶಾಸಕ ಸ್ಥಾನವನ್ನೇ ಕಳೆದುಕೊಳ್ಳಬೇಕಾಗುತ್ತದೆ! ಸತತ ಮೂರು ಅಧಿವೇಶನಗಳಿಗೆ ಗೈರು ಹಾಜರಾದ ಆಧಾರದ ಮೇಲೆ ಸಭಾಧ್ಯಕ್ಷರು ಅವರುಗಳ ಶಾಸಕರ ಸ್ಥಾನವನ್ನು ರದ್ದು ಪಡಿಸುವ ಪರಮಾಧಿಕಾರವನ್ನು ಹೊಂದಿರುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Illegal mining accused four MLAs (Kudligi Independent MLA Nagendra, Karawara Independent MLA Satish Sail, Hospet BJP MLA Anand Singh and Kampli BSR Congress MLA TH Suresh Babu) are legally bound to miss Belgaum Assembly Session whitch begins on Nov 25. If the foursiome continue to miss Assembly Sessions for 3 times then they are bound to lose the membership of the lower house also!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more