ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿವೈ ರಾಘವೇಂದ್ರಗೆ ಹಿನ್ನಡೆ, ಅಕ್ರಮ ಆಸ್ತಿ ಗಳಿಕೆ ಕೇಸ್ ವಿಚಾರಣೆಗೆ

|
Google Oneindia Kannada News

ಬೆಂಗಳೂರು, ಸೆ. 17: ಮುಖ್ಯಮಂತ್ರಿ, ಶಿಕಾರಿಪುರದ ಶಾಸಕ ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ದಾಖಲಿಸಿದ ಪುತ್ರ ಬಿ.ವೈ ರಾಘವೇಂದ್ರಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಮತ್ತೆ ಕಾಡುತ್ತಿದೆ. ಪ್ರಕರಣದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಉದಯ ಕುಮಾರ್ ಅವರು ಕೂಡಾ ಆರೋಪಿಗಳಾಗಿದ್ದಾರೆ.

ಸುಪ್ರೀಂಕೋರ್ಟಿನಲ್ಲಿ ಇಂದು ಈ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಿಚಾರಣೆಗೆ ಮುನ್ನ ಏನಿದು ಅಕ್ರಮ ಆಸ್ತಿ ಗಳಿಕೆ ಪ್ರಕರಣ? ರಾಘವೇಂದ್ರ ವಿರುದ್ಧ ದೂರು ದಾಖಲಿಸಿದವರು ಯಾರು? ಮುಂತಾದ ಮಾಹಿತಿ ಇಲ್ಲಿದೆ...

ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!

ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗದ ಸಂಸದರಾಗಿ ಆಯ್ಕೆಯಾದ ಬಳಿಕ ಅವರ ಆಸ್ತಿಯಲ್ಲಿ ಹೆಚ್ಚಳವಾಗಿದೆ. ಅಕ್ರಮವಾಗಿ ಈ ಆಸ್ತಿಯನ್ನು ಅವರು ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ವಕೀಲ ಬಿ.ವಿನೋದ್ ಎಂಬವರು ಸಿಬಿಐ ವಿಶೇಷ ಕೋರ್ಟ್‍ನಲ್ಲಿ 2013ರ ನವೆಂಬರ್‌ನಲ್ಲಿ ದೂರು ದಾಖಲಿಸಿದ್ದರು.

Illegal assets case: SC hearing against MP B Y Raghavendra

ಬಿವೈ ರಾಘವೇಂದ್ರ ವಿರುದ್ಧ ಒಟ್ಟು 5 ವಂಚನೆ, 4 ಫೋರ್ಜರಿ ಕೇಸ್ ಗಳು ಇವೆ. ಎಂದು ಕಳೆದ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್ ನಿಂದ ತಿಳಿದು ಬರುತ್ತದೆ. ಆದರೆ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದು, ಲೋಕಾಯುಕ್ತ ಕೋರ್ಟಿನಲ್ಲಿ ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಆರೋಪವೇನು : ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗದ ಸಂಸದರಾಗಿ ಆಯ್ಕೆಯಾದ ಬಳಿಕ ಅವರ ಆಸ್ತಿಯಲ್ಲಿ ಹೆಚ್ಚಳವಾಗಿದೆ. ಅಕ್ರಮವಾಗಿ ಈ ಆಸ್ತಿಯನ್ನು ಅವರು ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ವಕೀಲ ಬಿ.ವಿನೋದ್ ಎಂಬವರು ಸಿಬಿಐ ವಿಶೇಷ ಕೋರ್ಟ್‍ನಲ್ಲಿ 2013ರ ನವೆಂಬರ್‌ನಲ್ಲಿ ದೂರು ದಾಖಲಿಸಿದ್ದರು.

ಶಿಕಾರಿಪುರದಲ್ಲಿ ಭೂ ಹಗರಣ: ಬಿಎಸ್ವೈ ಹಾಗೂ ಪುತ್ರರ ವಿರುದ್ಧ ದೂರುಶಿಕಾರಿಪುರದಲ್ಲಿ ಭೂ ಹಗರಣ: ಬಿಎಸ್ವೈ ಹಾಗೂ ಪುತ್ರರ ವಿರುದ್ಧ ದೂರು

ದೂರಿನಲ್ಲಿ ಬಿ.ವೈ.ರಾಘವೇಂದ್ರ ಅವರು ಪ್ರಮುಖ ಆರೋಪಿಯಾಗಿದ್ದು, ಅವರ ಸಹೋದರ ಬಿ.ವೈ.ವಿಜಯೇಂದ್ರ ಮತ್ತು ಯಡಿಯೂರಪ್ಪ ಅಳಿಯರಾದ, ಸೋಹನ್ ಕುಮಾರ್, ಉದಯ ಕುಮಾರ್ ಅವರ ಹೆಸರಗಳನ್ನು ಸೇರಿಸಲಾಗಿದೆ. ಅಂದಹಾಗೆ 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು. ನಂತರ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಶಿಕಾರಿಪುರ ಕ್ಷೇತ್ರದಲ್ಲಿ ರಾಘವೇಂದ್ರ ಅವರು ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2018ರಲ್ಲಿ ಯಡಿಯೂರಪ್ಪ ಅವರು ಶಾಸಕರಾದ ನಂತರ ಶಿವಮೊಗ್ಗ ಲೋಕಸಭೆಯಲ್ಲಿ ಕೈ-ತೆನೆ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ರಾಘವೇಂದ್ರ ಜಯ ದಾಖಲಿಸಿ, ಸಂಸದರಾಗಿದ್ದಾರೆ.

English summary
Advocate B Vinod had filed a illegal assets case against MP B Y Raghavendra who had purchased land to the tune of crores, allegedly under the name of others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X