ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ಕ್ಷೇತ್ರ ಸುಧಾರಣೆಗೆ ಐಐಎಂ ಪದವೀಧರರ ಕನಸು

By Rajendra
|
Google Oneindia Kannada News

ಬೆಂಗಳೂರು, ಜೂ.9: ಬೃಹತ್ ಕಟ್ಟಡಗಳು, ವರ್ಣರಂಜಿತ ವಿವರಣ ಪತ್ರಗಳು ಮತ್ತು ಅತಿರಂಜಿತ ಜಾಹೀರಾತುಗಳಿಂದ ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಲು ಅಸಾಧ್ಯ. ಬದಲಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಲಭಿಸುತ್ತಿರುವ ಗುಣಾತ್ಮಕ ಶಿಕ್ಷಣ, ವಿದ್ಯಾರ್ಥಿಗಳ ಮನೋ ವಿಕಾಸಕ್ಕಾಗಿ ಲಭ್ಯ ಪೂರಕ ವಾತಾವರಣ ಮತ್ತು ಅಲ್ಲಿನ ಸಿಬ್ಬಂದಿಗಳ ಕಾಳಜಿ-ಶ್ರದ್ಧೆ ಮತ್ತು ಅರ್ಹತೆಗಳೇ ಶಿಕ್ಷಣ ಸಂಸ್ಥೆಗಳ ಯಶಸ್ಸಿಗೆ ಏರು ಮೆಟ್ಟಿಲುಗಳು ಎನ್ನುತ್ತಾರೆ ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಣತಜ್ಞ, ಐಐಎಂ ಪದವೀಧರ ಹಾಗೂ 'ಪರ್ಯಂತ' ಮ್ಯಾನೇಜ್ ಮೆಂಟ್ ಪ್ರೈ ಲಿ. ಸಂಸ್ಥೆಯ ಗೊನುಗುಂಟ್ಲ ಸುರೇಶ್ ಬಾಬು.

ಜಾಗತೀಕರಣ ಮತ್ತು ಖಾಸಗೀಕರಣಗಳ ಫಲ ಉದ್ಯೋಗವಕಾಶಗಳು ಹೆಚ್ಚುತ್ತಿರುವಂತೆಯೇ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿ ಉತ್ತಮವಾಗುತ್ತಿದೆ. ಜೊತೆಗೆ, ಸರ್ಕಾರದ ವಿವಿಧ ಕಾರ್ಯಕ್ರಮಗಳ ದೆಸೆಯಿಂದಾಗಿ ಶಿಕ್ಷಣದ ಮಹತ್ವ ಅರಿವಾಗುತ್ತಿದೆ. [ಎಸ್ಎಸ್ಎಲ್‌ಸಿ ಫಲಿತಾಂಶದ Highlights]

ಪರಿಣಾಮ ಶಿಕ್ಷಣ ಕ್ರಾಂತಿಯೇ ಉಂಟಾಗುತ್ತಿದ್ದು ಹಳ್ಳಿ ಹಳ್ಳಿಗಳಲ್ಲಿಯೂ ಶಾಲಾ - ಕಾಲೇಜುಗಳು ತಲೆ ಎತ್ತುತ್ತಿವೆ. ಆದರೆ, ಬಹುಪಾಲು ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಅಷ್ಟೇನೂ ಉತ್ತಮವಾಗಿಲ್ಲ ಎನ್ನುವ ಅಂಶ ಇತ್ತೀಚೆಗೆ ಬಿಡುಗಡೆಯಾದ ಎಸ್‍ಎಸ್‍ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶಗಳ ಮೂಲಕ ಕಂಡುಬಂದಿದೆ.

School Empowerment Programmes
ಶಿಕ್ಷಣ ಸಂಸ್ಥೆಗಳ ಗುಣಮಟ್ಟ ವೃದ್ಧಿಸುವ ಮೂಲಕ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಬುನಾದಿ ಹಾಕಬಲ್ಲ ಉದ್ದೇಶದಿಂದಲೇ 2013 ರಲ್ಲಿ ಮೈದಳೆದ 'ಪರ್ಯಾಂತ' ಇಂದು ಶಿಕ್ಷಣ ಸಂಸ್ಥೆಗಳ ಅಚ್ಚುಮೆಚ್ಚಿನ ಶೈಕ್ಷಣಿಕ ಸಲಹಾ ಸಂಸ್ಥೆ ಎನಿಸಿದೆ.

ಜಗತ್ತಿನ ವಿವಿಧೆಡೆಗಳ ಕನಿಷ್ಠ 1000ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸೇವೆ ಕುರಿತ ಅಧ್ಯಯನವನ್ನು ಆಳವಾಗಿ ಅಭ್ಯಸಿಸಿರುವ ಗೊನುಗುಂಟ್ಲ ಸುರೇಶ್ ಬಾಬು ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಶಿಶುವಿಹಾರ, ಪ್ರಾಥಮಿಕ ಶಾಲೆಗಳಿಗೆ ಶೈಕ್ಷಣಿಕ ಸಲಹಾಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರಳ ಮತ್ತು ಪರಿಣಾಮಕಾರಿ ಕ್ರಮಗಳ ಮೂಲಕ ತನ್ನ ಗ್ರಾಹಕ ಸಂಸ್ಥೆಗಳ ಸೇವಾ ಗುಣಮಟ್ಟ ಹೆಚ್ಚಳ ಮತ್ತು ಆ ಮೂಲಕ ಆ ಸಂಸ್ಥೆಗಳ ಯಶಸ್ಸಿಗೆ ಶ್ರಮಿಸುವುದು 'ಪರ್ಯಾಂತ'ದ ಪ್ರಮುಖ ಧ್ಯೇಯವಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎಲ್ಲಾ ಶಾಲಾ ಸಂಸ್ಥೆಗಳಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪವೃತ್ತರಾಗಿರುವ ಪರ್ಯಂತ ತಂಡ, ಉಚಿತವಾಗಿ "ಸ್ಕೂಲ್ ಎಂಪವರ್ ಮೆಂಟ್ ಕಾರ್ಯಕ್ರಮವನ್ನು" ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಜಾಗತಿಕ ಮಟ್ಟದ ಶಾಲೆಗಳನ್ನು ನಿರ್ವಹಿಸಲು ಅಳವಡಿಸಿಕೊಂಡಿರುವ ವಿಧಾನಗಳ ಬಗ್ಗೆ ಪ್ರಮುಖವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲದೆ, ಹೇಗೆ ತಮ್ಮ ಶಾಲೆಯ ಕಾರ್ಯಕ್ಷಮತೆಯನ್ನು ಹೆಚ್ಚಿಕೊಳ್ಳಬಹುದು ಎನ್ನುವ ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ.

ಅಲ್ಲದೆ, ಟಾಟಾ ಕಂಪನಿಯ ತನ್ನ ಕಾರ್ಯ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಬಾಲ್ಡ್ ರಿಡ್ಜ್ ಮಾಡೆನ್ನು ಅಳವಡಿಸಿಕೊಳ್ಳುವ ಮೂಲಕ ಹೇಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೊಳಿಸಬಹುದು ಎನ್ನುವುದನ್ನು ತಿಳಿಸಿಕೊಡಲಾಗುತ್ತದೆ.

ಐಐಎಂ ಪದವೀಧರ ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿರುವ ಗೊನುಗುಂಟ್ಲ ಸುರೇಶಬಾಬು, ಅಂತರಾಷ್ಟ್ರೀಯ ಮಟ್ಟದ ಐಟಿ ಸಂಸ್ಥೆಗಳು ಹಾಗೂ ಖ್ಯಾತ ಕಂಪನಿಗಳು ಅಳವಡಿಸಿಕೊಂಡಿರುವ ನಿರ್ವಹಣಾ ವಿಧಾನಗಳನ್ನು ಶಾಲಾ ಕಾಲೇಜುಗಳ ನಿರ್ವಹಣೆಯಲ್ಲಿ ಅಳವಡಿಸಲು ಸಹಾಯ ಮಾಡಲಿದ್ದಾರೆ.

ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು ಉಚಿತವಾಗಿ ನೀಡಲಾಗುತ್ತಿದ್ದು ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ತಮ್ಮ ಶಾಲೆಯನ್ನು ಸರ್ವತೋಮುಖವಾಗಿ ಅಭಿವೃದ್ದಿಗೊಳಿಸಲು ಪರ್ಯಂತ ಸಂಸ್ಥೆಯ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ನೊಂದಣಿಗಾಗಿ ಈ ದೂರವಾಣಿ ಸಂಖ್ಯೆಯನ್ನು 8892759847 ಮತ್ತು ವೆಬ್ ಸೈಟ್ http://paryanta.com/ ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗೊನುಗುಂಟ್ಲ ಸುರೇಶ ಬಾಬು, ವ್ಯವಸ್ಥಾಪಕ ನಿರ್ದೇಶಕರು, ಮೊ: 90088 99027. (ಒನ್ಇಂಡಿಯಾ ಕನ್ನಡ)

English summary
'Paryanta' team has designed ‘School Empowerment Programmes’, special course designed exclusively for school managements, to offer world class management services to schools at free of cost. PARYANTA MANAGEMENT CONSULTANCY PVT. LTD, Bangalore by Gonuguntala Suresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X