ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯುಸಿ: ವಿದ್ಯಾರ್ಥಿಗಳ ವಿಶ್ವಾಸ ಹೆಚ್ಚಿಸಿದ ಪ್ರಶ್ನೆ ಪತ್ರಿಕೆಗಳು

|
Google Oneindia Kannada News

ಬೆಂಗಳೂರು, ಮಾ. 12: ದ್ವಿತೀಯ ಪಿಯು ವಿದ್ಯಾರ್ಥಿಗಳು ತಮ್ಮ ಮೊದಲ ಪರೀಕ್ಷೆಯನ್ನು ಬರೆದಿದ್ದಾರೆ. ಕೆಮೆಸ್ಟ್ರಿ ಮತ್ತು ಬಿಸಿನೆಸ್ ಸ್ಟಡೀಸ್ ಪರೀಕ್ಷೆಗಳು ಸರಳವಾಗಿದ್ದ ಪರಿಣಾಮ ವಿದ್ಯಾರ್ಥಿಗಳಲ್ಲಿ ಯಾವ ಭಯ ಮೂಡಲಿಲ್ಲ.

ಕೆಮೆಸ್ಟ್ರಿ ಪೇಪರ್ ನಲ್ಲಿ ಸಾಮಾನ್ಯ ವಿದ್ಯಾರ್ಥಿಯೂ ಸುಲಭವಾಗಿ 40-45 ಅಂಕ ಗಳಿಸಬಹುದು. ಪ್ರಶ್ನೆ ಪತ್ರಿಕೆ ಮಾದರಿಯೂ ಕಳೆದ ವರ್ಷದಂತೆ ಇದ್ದರೂ ಕ್ಲಿಷ್ಟತೆ ಕೊಂಚ ಹೆಚ್ಚಾಗಿತ್ತು. ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟ ಪ್ರಶ್ನೆಗಳಲ್ಲಿ ಕೆಲ ಗೊಂದಲಕಾರಿ ಅಂಶಗಳಿದ್ದವು. ಆದರೆ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸಮಗ್ರವಾಗಿ ಅಭ್ಯಾಸ ಮಾಡಿದವರಿಗೆ ಯಾವ ತೊಂದರೆಯಾಗಿಲ್ಲ ಎಂದು ದಿಕ್ಷಾ ನೆಟ್ ವರ್ಕ್ ನ ಉಪಾಧ್ಯಕ್ಷ ಡಾ. ಮಿಲಿಂದ್ ತಿಳಿಸಿದ್ದಾರೆ. (ಪಿಯು ಪರೀಕ್ಷೆ ವೇಳಾಪಟ್ಟಿ)

puc

ನಮಗೆ ಸಂಭ್ರಮಿಸಿಲು ಅವಕಾಶ ದೊರೆತಿದೆ. ಕೆಮೆಸ್ಟ್ರಿ ಪತ್ರಿಕೆ ಸರಳವಾಗಿತ್ತು. ಎಲ್ಲ ಪ್ರಶ್ನೆಗಳು ಉತ್ತರಿಸುವಂತಿದ್ದು 70 ಅಧಿಕ ಅಂಕ ಬರಲಿದೆ ಎಂದು ದೀಕ್ಷಾ ನೆಟ್ ವರ್ಕ್ ಮದನ್ ತಿಳಿಸಿದ್ದಾರೆ. ಕಳೆದ ವರ್ಷದ ಪತ್ರಿಕೆಗೆ ಹೋಲಿಸಿದರೆ ಅಂಥ ವ್ಯತ್ಯಾಸಗಳಿರಲಿಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಸಿನೆಸ್ ಸ್ಟಡೀಸ್ ಪತ್ರಿಕೆ ಸಹ ಸರಳವಾಗಿದ್ದು ಸಾಮಾನ್ಯ ವಿದ್ಯಾರ್ಥಿ ಸುಲಭವಾಗಿ 50 ಅಂಕ ಗಳಿಸಬಹುದು. ಶೇ. 80 ಕ್ಕೂ ಅಧಿಕ ಪ್ರಶ್ನೆಗಳು ಕ್ವಶ್ಚನ್ ಬ್ಯಾಂಕ್ ಆಧಾರದಲ್ಲಿಯೇ ಕೇಳಿದ್ದು ವಿಶೇಷ.[ಏಪ್ರಿಲ್ 29ರಿಂದ ಸಿಇಟಿ ಪರೀಕ್ಷೆ]

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿದ್ದು ನಮಗೆ ಲಾಭವಾಯಿತು. ಎಲ್ಲ ಪ್ರಶ್ನೆಗಳು ನೇರವಾಗಿ ಇದ್ದುದರಿಂದ ಉತ್ತರಿಸಲು ಹರಸಾಹಸ ಪಡಬೇಕಾಗಿ ಬರಲಿಲ್ಲ ಎಂದು ದೀಕ್ಷಾ ನೆಟ್ ವರ್ಕ್ ನ ವಿದ್ಯಾರ್ಥಿ ಸುಕೃತ್ ಹೇಳುತ್ತಾರೆ. ಮಾರ್ಚ್ 13 ರಂದು ಕನ್ನಡ, ತಮಿಳು ಮತ್ತು ಮಲೆಯಾಳಂ ಪರೀಕ್ಷೆಗಳು ನಡೆಯಲಿವೆ.

English summary
II PU students breathe an easy start. While Chemistry paper was moderate and easy to score marks, Business studies turned out to be a complete easy paper. In the chemistry paper, an average student can score up to 40-45 marks and students who were performing consistently in their college exams can easily score a centum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X