ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಕ್ಷಣವಿದ್ದರೂ, RTPCR ನೆಗೆಟಿವ್: ಕಾರಣಗಳು 3, ಮಾಡಬೇಕಾಗಿರುವುದು 5

|
Google Oneindia Kannada News

ಖುದ್ದು ವೈದ್ಯಕೀಯ ಲೋಕದ ಹಿಡಿತಕ್ಕೂ ಸಿಗದಂತೆ ಕೊರೊನಾ ಎರಡನೇ ಅಲೆ ಜನರ ನೆಮ್ಮದಿಯನ್ನು ಆಪೋಸನೆಗೆ ತೆಗೆದುಕೊಳ್ಳುತ್ತಾ ಸಾಗುತ್ತಿದೆ. ಭಯ ಹುಟ್ಟಿಸುವಷ್ಟು ವೇಗವಾಗಿ ಹರಡುತ್ತಿರುವುದು ಒಂದು ಕಡೆಯಾದರೆ, ಸಾವಿನ ಪ್ರಮಾಣವೂ ಜಾಸ್ತಿಯಾಗುತ್ತಿದೆ.

ಬೆಡ್ ಸಮಸ್ಯೆ ಒಂದು ಕಡೆ ಸೋಂಕಿತರ ಕುಟುಂಬಕ್ಕೆ ತಲೆನೋವಾಗುತ್ತಿದ್ದರೆ, 50% ಬೆಡ್ ಮೀಸಲಿಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸರಕಾರದ ಎಚ್ಚರಿಕೆಗೆ ಖಾಸಗಿ ಆಸ್ಪತೆಗಳು ಅಷ್ಟಾಗಿ ಸೊಪ್ಪು ಹಾಕದೇ ಇರುವುದು.

RTPCR ಟೆಸ್ಟ್: ಬಿಬಿಎಂಪಿ RTPCR ಟೆಸ್ಟ್: ಬಿಬಿಎಂಪಿ "ಬಿಯು" ನಂಬರ್ "ಕಪಟ ನಾಟಕ" ಬಯಲು

ಸಾಮಾನ್ಯವಾಗಿ ಜನರಿಂದ ಬರುತ್ತಿರುವ ಹೆಚ್ಚಿನ ದೂರು ಏನಂದರೆ ಆರ್‌ಟಿಪಿಸಿಆರ್ ಟೆಸ್ಟ್‌ನಲ್ಲಿ ನೆಗೆಟೀವ್ ಬಂದಿರುತ್ತದೆ, ಆದರೆ ಕೊರೊನಾದ ಎಲ್ಲಾ ಲಕ್ಷಣಗಳು ಇರುತ್ತವೆ. ಸರಕಾರದ ಕಡೆಯಿಂದ ಬೆಡ್ ಸಿಗಬೇಕಾದರೆ, ಈ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದರೆ ಮಾತ್ರ ಬಿಬಿಎಂಪಿಯ 'ಬಿಯು' ಕೋಡ್ ಜನರೇಟ್ ಆಗಿ, ಖಾಸಗಿ ಆಸ್ಪತ್ರೆಗಳಿಗೆ ಬೆಡ್ ಕೊಡಲು ಸಾಧ್ಯವಾಗುವುದು.

 ಕಾಲನು ಬಂದು ಬಾ ಎಂದಾಗ ಎಲ್ಲವೂ ಶೂನ್ಯ ಚಿತೆಗೇರುವಾಗ: ಬದುಕೆಷ್ಟು ನಶ್ವರ ಕಾಲನು ಬಂದು ಬಾ ಎಂದಾಗ ಎಲ್ಲವೂ ಶೂನ್ಯ ಚಿತೆಗೇರುವಾಗ: ಬದುಕೆಷ್ಟು ನಶ್ವರ

ಬಿಯು ಕೋಡ್ ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಯವರು ಬೆಡ್ ನೀಡುವುದಿಲ್ಲ. ಹಾಗಾದರೆ, ಸಿಂಪ್ಟಂಸ್ ಇದ್ದರೂ ನೆಗೆಟೀವ್ ಬರಲು ಕಾರಣವೇನು, ಇದಕ್ಕೆ ಜನರು ಏನು ಮಾಡಬೇಕು ಎನ್ನುವುದರ ಬಗ್ಗೆ ಖ್ಯಾತ ವೈದ್ಯೆ ಸೋನಲ್ ಮೆಹರೂತ್ರಾ ಕಪೂರ್ ವಿವರಿಸಿದ್ದಾರೆ. (ಮಾಹಿತಿ ಕೃಪೆ: ಎನ್ಡಿಟಿವಿ)

 ಖ್ಯಾತ ವೈದ್ಯೆ ಸೋನಲ್ ಮೆಹರೂತ್ರಾ ಕಪೂರ್

ಖ್ಯಾತ ವೈದ್ಯೆ ಸೋನಲ್ ಮೆಹರೂತ್ರಾ ಕಪೂರ್

ದೇಶದಲ್ಲಿ ಸದ್ಯ ಪ್ರಮುಖವಾಗಿ ಫಾಲೋ ಮಾಡುತ್ತಿರುವುದು RTPCR ಟೆಸ್ಟ್. ಕೊರೊನಾ ಲಕ್ಷಣಗಳಾದ ಶೀತ,ಜ್ವರ, ರುಚಿ ಗೊತ್ತಾಗದೇ ಇರುವುದು ಇಂತಹ ಲಕ್ಷಣಗಳಿದ್ದರೂ, ಈ ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ಬರುತ್ತಿರುವ ಬಗ್ಗೆ ತುಂಬಾ ದೂರುಗಳು ಬರುತ್ತಿವೆ. ಐವರಲ್ಲಿ ಕನಿಷ್ಠ ಒಬ್ಬರಿಗೆ ಇಂಥ ಸಮಸ್ಯೆಗಳು ಎದುರಾಗುತ್ತಿವೆ. ಅದಕ್ಕೆ ಕೆಲವು ಕಾರಣಗಳು ಇರುತ್ತವೆ.

 ಕೊರೊನಾ ಲಕ್ಷಣವಿದ್ದರೂ, RTPCR ನೆಗೆಟಿವ್: ಕಾರಣಗಳು 3

ಕೊರೊನಾ ಲಕ್ಷಣವಿದ್ದರೂ, RTPCR ನೆಗೆಟಿವ್: ಕಾರಣಗಳು 3

1. ಈಗ ದೇಶದಲ್ಲಿರುವ ಟೆಸ್ಟಿಂಗ್ ಕಿಟ್ ಹಳೆಯ ಅಂದರೆ ರೂಪಾಂತರಿ ವೈರಸ್ ಬರುವ ಮುನ್ನ ಖರೀದಿ ಆಗಿರುವಂತದ್ದು. ಹಾಗಾಗಿ, ರೂಪಾಂತರಿ ವೈರಸ್ ಅನ್ನು ಈ ಕಿಟ್‌ಗಳಿಗೆ ಪತ್ತೆಹಚ್ಚಲು ಸಾಧ್ಯವಾಗದೇ ಇರುವುದು.

2. ರೋಗ ನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗಿದ್ದು, ವೈರಸ್ ಪ್ರಭಾವ ಕಮ್ಮಿಯಿದ್ದರೂ RTPCR ಟೆಸ್ಟ್‌ನಲ್ಲಿ ನೆಗೆಟೀವ್ ಬರುವ ಸಾಧ್ಯತೆಯಿದೆ.

3. ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಯುತ್ತಿರುವುದರಿಂದ, ಈ ಟೆಸ್ಟಿನ ಕ್ವಾಲಿಟಿ ಕಮ್ಮಿಯಾಗಿರುವ ಸಾಧ್ಯತೆಯೂ ಇದೆ.

 RTPCR ನೆಗೆಟಿವ್: ಏನು ಮಾಡಬೇಕು - 1

RTPCR ನೆಗೆಟಿವ್: ಏನು ಮಾಡಬೇಕು - 1

ಈ ರೀತಿ ಆದಾಗ ಜನರು ಏನು ಮಾಡಬೇಕು ಎನ್ನುವುದನ್ನು ಡಾ. ಕಪೂರ್ ವಿವರಿಸಿದ್ದು ಹೀಗೆ:

1. ಮೊದಲು ನಿಮ್ಮ ವೈದ್ಯರ ಬಳಿಗೆ ಹೋಗಿ, ನಿಮಗೆ ದೇಹದಲ್ಲಿ ಶೀತ, ಜ್ವರ ಸೇರಿದಂತೆ ಆಗುತ್ತಿರುವ ತೊಂದರೆಗಳನ್ನು ಸವಿವರವಾಗಿ ವೈದ್ಯರ ಬಳಿ ಹಂಚಿಕೊಳ್ಳಿ.

2. ಆಕ್ಸಿ ಮೀಟರ್ ಖರೀದಿಸುವುದು ಸೂಕ್ತ. ದಿನಕ್ಕೆ ಕನಿಷ್ಠ ಎರಡು ಬಾರಿ ಆಕ್ಸಿಜನ್ ಲೆವೆಲ್ ಪರೀಕ್ಷಿಸಿಕೊಳ್ಳಿ. 94 ಅಥವಾ ಅದಕ್ಕಿಂತ ಕಮ್ಮಿಯಿದ್ದರೆ, ತುರ್ತಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

3. RTPCR ಟೆಸ್ಟ್ ಮಾಡಿಸಿ, ನೆಗೆಟಿವ್ ವರದಿ ಬಂದರೆ, ಅಂತವರು ಐಸೋಲೇಟ್ ಆಗುವುದು ಉತ್ತಮ. ಆಕ್ಸಿಜನ್ ಲೆವೆಲ್ ಅನ್ನು ದಿನಕ್ಕೆ ಎರಡು ಬಾರಿ ಪರೀಕ್ಷಿಸಿ, ಮೂರು ದಿನಗಳ ನಂತರ ಮತ್ತೆ ಈ ಟೆಸ್ಟಿಗೆ ಹೋಗಿ.

Recommended Video

ಯಥಾಸ್ಥಿತಿಗೆ ಮರಳಿದ ಸಕ್ಕರೆ ನಾಡು ಮಂಡ್ಯ, ಕೊರೊನಾ ನಿಯಮ ಉಲ್ಲಂಘನೆ! | Oneindia Kannada
 RTPCR ನೆಗೆಟಿವ್: ಏನು ಮಾಡಬೇಕು - 2

RTPCR ನೆಗೆಟಿವ್: ಏನು ಮಾಡಬೇಕು - 2

4. ಇದಾದ ಮೇಲೂ, ಪಾಸಿಟೀವ್ ಬರದಿದ್ದರೆ ಸಿಟಿ ಸ್ಕ್ಯಾನ್ ಮಾಡುವುದು ಸೂಕ್ತ. ವೈದ್ಯರು ಶಿಫಾರಸು ಮಾಡಿದರೆ ಮಾತ್ರ ಈ ಸ್ಕ್ಯಾನ್ ಅನ್ನು ಮಾಡಿಸಿಕೊಳ್ಳಿ.

5. ಸಿಟಿ ಸ್ಕ್ಯಾನ್ ನಂತರವೂ ನೆಗೆಟಿವ್ ಬಂದರೆ, ಕೊನೆಯದಾಗಿ ಮಾಡಬಹುದಾಗಿರುವುದು ರಕ್ತ ಪರೀಕ್ಷೆ. ಸಿ ರಿಯಾಕ್ಟೀವ್ ಪ್ರೊಟೀನ್ ಮತ್ತು ಡಿಡೈಮರ್ ಟೆಸ್ಟ್ ಅನ್ನು ಮಾಡಿಸಿಕೊಳ್ಳಿ. ಇದರಲ್ಲೂ ನೆಗೆಟೀವ್ ಬಂದದ್ದೇ ಆದಲ್ಲಿ, ಜನರು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ.

English summary
If You Have Corona Symptoms But Negative Report, Three Reasons And To Do Five.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X