ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ತೂರು ಸಹವಾಸ ಬೇಡವೆಂದ ಕೋಲಾರ ಮುಸ್ಲಿಮರು

By Srinath
|
Google Oneindia Kannada News

ಕೋಲಾರ, ಏ.9- ಚುನಾವಣೆ ಕಾಲದಲ್ಲಿ ಸಣ್ಣಮಟ್ಟದಲ್ಲಿ 'ಆಪರೇಶನ್ ಹಸ್ತ' ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋಲಾರದಲ್ಲಿ ಒಂದಷ್ಟು ಹಿನ್ನಡೆಯಾಗಿದೆ. ಕೋಲಾರ ಅಹಿಂದದ ಅಧಿಪತಿ, ಶಾಸಕ ವರ್ತೂರು ಪ್ರಕಾಶ್ ಅವರನ್ನು ತಮ್ಮಡೆಗೆ ಸೆಳೆದುಕೊಳ್ಳುವಲ್ಲಿ ಸಿಎಂ ಸಿದ್ದು ಯಶಸ್ವಿಯಾಗಿದ್ದಾರೆ, ಆದರೆ ...

ಶಾಸಕ ವರ್ತೂರು ಪ್ರಕಾಶ್ ಕೋಲಾರದ ಪುರಾತನ ಅಭ್ಯರ್ಥಿ ಕೆಎಚ್ ಮುನಿಯಪ್ಪ ಅವರಿಗೆ ಬೆಂಬಲ ಘೋಷಿಸಿರುವುದು ಬ್ಯಾಕ್ ಫೈರ್ ಆಗುವ ಲಕ್ಷಣಗಳು ಗೋಚರವಾಗಿವೆ. ಕೋಲಾರದ ಸಮಸ್ತ ಮುಸ್ಲಿಮರು ಒಂದಂಶದ ನಿರ್ಣಯ ತೆಗೆದುಕೊಂಡಿದ್ದು, ಸ್ವತಂತ್ರ ಶಾಸಕ ವರ್ತೂರು ಪ್ರಕಾಶ್ ಅವರನ್ನು ಕಾಂಗ್ರೆಸ್ ಅಪ್ಪಿಕೊಂಡಿದ್ದೇ ಆದಲ್ಲಿ ತಾವು ಕಾಂಗ್ರೆಸ್ಸಿನಿಂದ ದೂರವಾಗುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.

ಏನಿದರ ಅಸಲೀಯತ್ತು!? (13 ಕ್ಷೇತ್ರಗಳತ್ತ ಮಾತ್ರವೇ ಜೆಡಿಎಸ್ ಗೌಡರ ಚಿತ್ತ)

if-varthur-prakash-support-sought-muslims-wont-support-kh-muniyappa
ಅತ್ತ ವರ್ತೂರು ಪ್ರಕಾಶ್ ಅವರು ಕೆಎಚ್ ಮುನಿಯಪ್ಪ ಅವರತ್ತ ಬೆಂಬಲದ ಹಸ್ತ ಚಾಚುತ್ತಿದ್ದಂತೆ ಮುಸ್ಲಿಮರು ಸಭೆ ಸೇರಿದ್ದಾರೆ. ವರ್ತೂರಿಗೆ ಮಣೆ ಹಾಕಿದ್ದೇ ಆದರೆ ತಾವು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸದಿರಲು ನಿರ್ಧರಿಸಿದ್ದಾರೆ.

ಇಷ್ಟಕ್ಕೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಏನಾಗಿತ್ತೆಂದರೆ ಮೇಲ್ಮನೆ ಸದಸ್ಯ, ಕಾಂಗ್ರೆಸ್ಸಿನ ನಜೀರ್ ಅಹಮದ್ ಅವರನ್ನು ಸೋಲಿಸಿ, ವರ್ತೂರು ಶಾಸಕರಾಗಿದ್ದರು. ಇದಕ್ಕೆ ನೇರವಾಗಿ ಸಂಸದ ಕೆಎಚ್ ಮುನಿಯಪ್ಪ ನೆರವಾಗಿದ್ದರು. ಇದರಿಂದ ಕುಪಿತರಾಗಿರುವ ಕೋಲಾರ ಮುಸ್ಲಿಂ ಮತದಾರರು ನಜೀರ್ ಸೋಲಿಗೆ ಕಾರಣವಾದ ವರ್ತೂರು ಜತೆ ಮುನಿಯಪ್ಪ ಅವರು ಮತ್ತೆ ಕೈಜೋಡಿಸುವುದು ಬೇಡ ಎಂಬ ನಿರ್ಣಯ ಕೈಗೊಂಡಿದ್ದಾರೆ.

English summary
Lok Sabha Election 2014 - if Varthur Prakash support sought Muslims wont support K.H. Muniyappa. It may be recalled that MLC Nazir Ahmed was defeated at the hands of Varthur Prakash in the last assembly elections. It was said that Mr Muniyappa himself had supported Varthur Prakash in the last assembly elections to defeat Congressman Nazir Ahmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X