ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜದಲ್ಲಿ ಧಾರ್ಮಿಕ ಸಂಘರ್ಷ ಉಂಟಾದರೆ ಅದಕ್ಕೆ ಮಾಧ್ಯಮಗಳೇ ಉತ್ತರದಾಯಿಗಳು: ಎಚ್‌ಡಿಕೆ

|
Google Oneindia Kannada News

ಬೆಂಗಳೂರು: ಸಮಾಜಕ್ಕೆ ಧಕ್ಕೆ ಉಂಟು ಮಾಡುವ ಸೂಕ್ಷ್ಮ ವಿಷಯವನ್ನು ಮಾಧ್ಯಮಗಳು ವೈಭವೀಕರಣ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಇಂದು ಚುನಾವಣೆ ಸುಧಾರಣೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು ಅವರು.

ಮಾಧ್ಯಮಗಳಲ್ಲಿ ಹಿಜಾಬ್ ಆಯಿತು, ಜಾತ್ರೆಗಳಲ್ಲಿ ವ್ಯಾಪಾರ ಬಂದ್ ಆಯಿತು, ಈಗ ಯುಗಾದಿಗೆ ಹಲಾಲ್ ಚರ್ಚೆ ನಡೆಯುತ್ತಿದೆ. ಮೂಲತಃ ನಾವು ಮಾಂಸಾಹಾರಿಗಳು. ನಾವು ಹಲಾಲ್, ಹರಾಂ ಮಾಂಸ ಅಂತೆಲ್ಲ ನೋಡಲ್ಲ. ಹಾಗಂತ ನಾವು ಮಾಂಸವನ್ನು ತಂದು ಪೂಜೆಗೂ ಇಡಲ್ಲ. ಹಬ್ಬದ ಮರುದಿನ ಮಾಡುವ ವರ್ಸತೊಡಕು ಗುಡ್ಡೆ ಮಾಂಸ ಮಾಡುತ್ತಾರೆ. ಈಗ ಇಂತಹ ಅಶಾಂತಿಯ ವಾತಾವರಣ ಯಾಕೆ ಸೃಷ್ಟಿಸಬೇಕು? ಮಾಧ್ಯಮಗಳು ಇಂಥ ಸುದ್ದಿಗಳನ್ನು ತೋರಿಸಲೇಬಾರದು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.

If there is a religious conflict in the society, the media is the answer: HDK

ಶಾಂತಿಯನ್ನು ಹಾಳು ಮಾಡುವಂಥ ವಿಷಯಗಳಿಗೆ ಮಾಧ್ಯಮಗಳು ಹೆಚ್ಚು ಮಹತ್ವ ಕೊಟ್ಟರೆ, ಅದರಿಂದ ರಾಜ್ಯ ಹಾಳಾದರೆ ಮಾಧ್ಯಮಗಳೇ ಉತ್ತರದಾಯಿಗಳಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ವಾಟ್ಸಪ್ ನಲ್ಲಿ ಇಂತಹ ಸಾಕಷ್ಟು ಪ್ರಚೋದನೆಯ ಪೋಸ್ಟ್ ಗಳು ಬರುತ್ತಿವೆ. ಇಂಥ ಪ್ರಚೋದನಾತ್ಮಕ ಓದಿದಾಗ ನನಗೆ ಬಹಳ ನೋವಾಯಿತು ಎಂದ ಅವರು, ವಾಟ್ಸಾಪ್ ಮತ್ತಿತೆರೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿರುವ ಪೋಸ್ಟ್ ಗಳನ್ನು ಸದನದಲ್ಲಿ ಓದಿದರು.

If there is a religious conflict in the society, the media is the answer: HDK

ವ್ಯಾಪಾರ ಮಾಡಲಿಕ್ಕೆ ಹಿಂದೂಗಳ ಅಂಗಡಿಗಳನ್ನೇ ಹಿಂದೂಗಳು ಆಯ್ಕೆ ಮಾಡಿಕೊಳ್ಳಿ ಎಂಬ ಸಂದೇಶಗಳು ವ್ಯಾಪಕವಾಗಿ ರವಾನೆ ಆಗುತ್ತಿವೆ ಎಂದು ಕುಮಾರಸ್ವಾಮಿ ಅವರು, ಮುಸ್ಲಿಂ ಸಮುದಾಯದವರ ಅಂಗಡಿಗಳಿಗೆ ಹೋಗಬೇಡಿ ಎಂದು ಹರಿದಾಡುತ್ತಿರುವ ಸಂದೇಶವನ್ನು ಅವರು ಕಲಾಪದಲ್ಲಿ ಓದಿದರು.

English summary
Former chief minister HD Kumaraswamy lamented that the media is glorifying sensitive subjects that is threatening society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X