ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಕುಮಾರಸ್ವಾಮಿಯನ್ನು ಹೊರಗಟ್ಟುತ್ತೇನೆ: ದೇವೇಗೌಡ

By Manjunatha
|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕುಮಾರಸ್ವಾಮಿ ಈ ಬಾರಿ ಏನಾದರೂ ಬಿಜೆಪಿ ಜೊತೆಗೆ ಸೇರಿ ಸರ್ಕಾರ ರಚಿಸಿದರೆ ಆತನಿಗೆ ನಮ್ಮ ಕುಟುಂಬದಿಂದಲೇ ಬಹಿಷ್ಕಾರ ಹಾಕುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳಿದ್ದಾರೆ.

ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಈ ಮಾತು ಹೇಳಿರು ಅವರು, ಕುಮಾರಸ್ವಾಮಿ 2006 ರಲ್ಲಿ ಮಾಡಿದ್ದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂಬ ಅಚಲ ವಿಶ್ವಾಸವಿದೆ ಎಂದ ಅವರು, ಅಕಸ್ಮಾತ್ ಮತ್ತೆ ಹಾಗೆ ಮಾಡಿದಲ್ಲಿ ನಾನು ಮತ್ತು ನಮ್ಮ ಕುಟುಂಬ ಅವನೊಂದಿಗೆ ಸಂಬಂಧ ಕಡಿದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಏರ್ಪೋರ್ಟಲ್ಲಿ ಶಾ-ಕುಮಾರಸ್ವಾಮಿ ಭೇಟಿ: ಸಿದ್ದರಾಮಯ್ಯ ಹೊಸ ಬಾಂಬ್ದೆಹಲಿ ಏರ್ಪೋರ್ಟಲ್ಲಿ ಶಾ-ಕುಮಾರಸ್ವಾಮಿ ಭೇಟಿ: ಸಿದ್ದರಾಮಯ್ಯ ಹೊಸ ಬಾಂಬ್

ಕುಮಾರಸ್ವಾಮಿ ಅವರು ಈಗಾಗಲೇ ತಮ್ಮ ಹಳೆಯ ತಪ್ಪಿನ ಪಾಠ ಕಲಿತಿದ್ದು, ಮತ್ತೆ ಆ ತಪ್ಪು ಮಾಡಲಾರರು ಎಂದ ದೇವೇಗೌಡ ಅವರು, ಕಾಂಗ್ರೆಸ್‌ ಪಕ್ಷದ ಜೊತೆಗೆ ಹೋಗಲೂ ಕೂಡ ಕುಮಾರಸ್ವಾಮಿ ನನ್ನ ಒಪ್ಪಿಗೆ ಪಡೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿರು.

If Kumaraswamy join hands with BJP i disown him: Deve Gowda

ಎಲ್ಲ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಬಳಸಿ ಬಿಸಾಡುತ್ತವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಶಿವಸೇನೆ, ಚಂದ್ರಬಾಬು ನಾಯ್ಡು ಇವರೆಲ್ಲಾ ಮೈತ್ರಿಯಿಂದ ಹೊರಗೆ ಬರಲು ಇದೇ ಕಾರಣ ಎಂದರು.

ಮೋದಿ ಅವರ ಅಲೆಯ ಬಗ್ಗೆ ಮಾತನಾಡಿದ ಅವರು, ಮೋದಿ ಆಡಳಿತದಲ್ಲಿ ಮುಸ್ಲಿಂರಿಗೆ ಕ್ಷೇಮವಲ್ಲದ ವಾತಾವರಣ ನಿರ್ಮಾಣವಾಗಿದೆ. ಗೋ ರಕ್ಷಣೆ ಹೆಸರಲ್ಲಿ ಕೊಲೆಗಳೇ ಆಗಿವೆ. ಇವೆಲ್ಲಾ ಮೋದಿ ಅವರ ವರ್ಚಸ್ಸನ್ನು ಕುಗ್ಗಿಸಿವೆ ಎಂದರು.

"ಜೆಡಿಎಸ್ ಬಹುಮತ ಪಡೆಯಲಿ, ಪಡೆಯದಿರಲಿ ಸರ್ಕಾರ ರಚಿಸುವುದು ಖಚಿತ"

ವಿಧಾನಸಭೆ ಚುನಾವಣೆಗಳ ಬಗ್ಗೆ ಮಾತನಾಡಿದ ದೇವೇಗೌಡ ಅವರು, ಇದು ಎಲ್ಲ ಪಕ್ಷಗಳಿಗೂ 2019ರ ಚುನಾವಣೆಗೆ ಪರೀಕ್ಷಾ ಕಣವಾಗಿದೆ. ಇಲ್ಲಿನ ಗೆಲುವು ಮುಂದಿನ ವರ್ಷದ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದರು.

English summary
If Kumaraswamy join hands again with BJP to form government Deve Gowda will disown Kumaraswamy. He said it in interview with NDTV. He also said MOdi wave is going down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X