ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ವಾರದಲ್ಲಿ ಹೊಸ ಸರಕಾರ ರಚನೆಯಾಗದಿದ್ದಲ್ಲಿ ಭಾರೀ ಸಾಂವಿಧಾನಿಕ ಬಿಕ್ಕಟ್ಟು: ಸ್ಪೀಕರ್

|
Google Oneindia Kannada News

Recommended Video

31 ರ ಒಳಗೆ ಸರ್ಕಾರ ರಚನೆ ಆಗದಿದ್ದರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ..? | Oneindia Kannada

ಬೆಂಗಳೂರು, ಜುಲೈ 25: ಇನ್ನೊಂದು ವಾರದಲ್ಲಿ ಹೊಸ ಸರಕಾರ ರಚನೆಯಾಗದೇ ಇದ್ದಲ್ಲಿ ಸಾಂವಿಧಾನಕವಾಗಿ ತುಂಬಾ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸ್ಪೀಕರ್, ಜುಲೈ 31ರೊಳಗೆ ಹೊಸ ಸರಕಾರ ರಚನೆಯಾಗಿ, ಹಣಕಾಸು ವಿಧೇಯಕಕ್ಕೆ ಅನುಮೋದನೆ ಪಡೆಯಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಸರಕಾರೀ ಟ್ರೆಷರ್ ನಿಂದ ನಯಾಪೈಸೆ ತೆಗೆಯಲು ಸಾಧ್ಯವಾಗುವುದಿಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ತಪ್ಪಾಗಿದ್ದರೆ ಕ್ಷಮಿಸಿ, ಇಲ್ಲವೇ ಅನುಭವಿಸಲಿ: ರಮೇಶ್ ಕುಮಾರ್ತಪ್ಪಾಗಿದ್ದರೆ ಕ್ಷಮಿಸಿ, ಇಲ್ಲವೇ ಅನುಭವಿಸಲಿ: ರಮೇಶ್ ಕುಮಾರ್

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಬಿಕ್ಕಟ್ಟು ಎದುರಾಗಿದೆ. ಬಿಲ್ ಪಾಸಾಗದಿದ್ದರೆ, ಸರಕಾರೀ ನೌಕರರಿಗೆ ಸಂಬಳ ಕೊಡಲೂ ಸಾಧ್ಯವಾಗುವುದಿಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

If Karnataka Budge Finance bill not passed civiar problem may have to face: Speaker Ramesh Kumar

ಒಂದು ವೇಳೆ ಈ ರೀತಿಯ ಪರಿಸ್ಥಿತಿ ಎದುರಾದರೆ, ರಾಷ್ಟ್ರಪತಿ ಆಡಳಿತ ಜಾರಿಯಾದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ರಮೇಶ್ ಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದರು. 2019-2020ರ ಸಾಲಿನ ರಾಜ್ಯ ಆಯವ್ಯಯವನ್ನು ಹಣಕಾಸು ಸಚಿವರೂ ಆಗಿದ್ದ ಕುಮಾರಸ್ವಾಮಿ ಫೆಬ್ರವರಿ 08, 2019ರಂದು ಮಂಡಿಸಿದ್ದರು.

ಹಣಕಾಸು ವಿಧೇಯಕ ಪಾಸ್ ಆಗದಿದ್ದಲ್ಲಿ ಇರುವ ಆಯ್ಕೆಯೇನು? ಒಂದು ವೇಳೆ ಜುಲೈ 31ರೊಳಗೆ ಹೊಸ ಸರಕಾರ ರಚನೆಯಾಗದೇ ಇದ್ದ ಪಕ್ಷದಲ್ಲಿ ಎರಡು ಆಯ್ಕೆ ರಾಜ್ಯಪಾಲರಿಗೆ ಇರುತ್ತದೆ ಎನ್ನುವುದು ಕಾನೂನು ಪಂಡಿತರ ಅಭಿಪ್ರಾಯ.

ರಾಜೀನಾಮೆ ಪತ್ರ ಜೇಬಿನಲ್ಲಿಟ್ಟುಕೊಂಡು ಕಲಾಪ ನಡೆಸಿದ ಸ್ಪೀಕರ್ ರಾಜೀನಾಮೆ ಪತ್ರ ಜೇಬಿನಲ್ಲಿಟ್ಟುಕೊಂಡು ಕಲಾಪ ನಡೆಸಿದ ಸ್ಪೀಕರ್

1. ಲೋಕಸಭೆಯಲ್ಲಿ ಮಾನ್ಸೂನ್ ಅಧಿವೇಶನ ನಡೆಯುತ್ತಿರುವುದರಿಂದ, ಹಣಕಾಸು ಸಚಿವಾಲಯದ ಮೂಲಕ, ಅಲ್ಲಿ ವಿಧೇಯಕಕ್ಕೆ ಅನುಮೋದನೆ ಪಡೆಯಬಹುದು.

2. ರಾಷ್ಟ್ರಪತಿ ಬಳಿ ವಿಧೇಯಕಕ್ಕೆ ಅಂಕಿತ ಹಾಕಿಸಿಕೊಂಡು ಬಿಲ್ ಪಾಸ್ ಮಾಡಿಸಿಕೊಳ್ಳಬಹುದು.

English summary
If Karnataka Budge Finance 2019-2020 bill not passed severe problem may have to face: Speaker Ramesh Kumar. As per rules, before 31sy July, 2019, approval has to be taken for the finance bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X