ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ಜೊತೆ ನಾವು ಕೈಜೋಡಿಸಿದ್ರೆ ಕಾಂಗ್ರೆಸ್ ಅಷ್ಟೇ: ಎಚ್ಡಿಕೆ

|
Google Oneindia Kannada News

ಹುಬ್ಬಳ್ಳಿ ಜೂ 26: ಸಿದ್ದರಾಮಯ್ಯ ಸರಕಾರಕ್ಕೆ ರೈತರ ಪರ ಐದು ಪೈಸೆ ಕಾಳಜಿ ಅನ್ನೋದು ಏನಾದರೂ ಇದ್ದರೆ ಕಬ್ಬು ಬೆಲೆಗೆ ಸೂಕ್ತ ಬೆಂಬಲ ಬೆಲೆ ನೀಡಲಿ, ನಾಟಕವಾಡುವುದನ್ನು ನಿಲ್ಲಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

ಧಾರವಾಡದಿಂದ ಬೆಳಗಾವಿಯವರೆಗಿನ ಪಾದಯಾತ್ರೆಯ ಮೊದಲ ದಿನದಲ್ಲಿ ಸಿಕ್ಕಿದ ಅಭೂತಪೂರ್ವ ಜನಬೆಂಬಲದಿಂದ ಉಲ್ಲಸಿತರಾಗಿದ್ದ ಕುಮಾರಸ್ವಾಮಿ, ನಾವೇನಾದ್ರೂ ಯಡಿಯೂರಪ್ಪನವರ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್ ಕಥೆ ಅಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದು ಸರಕಾರದಿಂದ ಯಡಿಯೂರಪ್ಪನವರನ್ನು ವಿನಾಕಾರಣ ಟಾರ್ಗೆಟ್ ಮಾಡಲಾಗುತ್ತಿದೆ. ಸರಕಾರ ರೈತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿಯೇ ಪಾದಯಾತ್ರೆ ಆರಂಭಿಸಿದ್ದೇನೆಂದು ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. (ಬಿಎಸ್‌ವೈಗೆ ಸಿದ್ದು ತೊಂದರೆ ಕೊಡುತ್ತಿದ್ದಾರೆ)

ನನ್ನ ಪಾದಯಾತ್ರೆ ಕಬ್ಬು, ರೇಷ್ಮೆ, ದಾಳಿಂಬೆ, ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಾಗಿ. ಸರಕಾರ ತಳೆದಿರುವ ನಿರ್ಲಕ್ಷ್ಯ ಧೋರಣೆಯಿಂದಾಗಿಯೇ ನಾನು ಪಾದಯಾತ್ರೆ ನಡೆಸಲು ಮುಂದಾಗಿರುವುದು ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಲೇವಡಿಗೆ ತಿರುಗೇಟು ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ನಾವು ಮತ್ತು ಯಡಿಯೂರಪ್ಪ ಕೈಜೋಡಿಸಿದರೆ ಎನ್ನುವ ಭಯ ಕಾಂಗ್ರೆಸ್ಸಿಗರಿಗೆ, ಮುಂದೆ ಓದಿ..

ಸುಮ್ಮನೆ ಬಿಎಸ್ವೈ ವಿರುದ್ದ ಕೇಸು

ಸುಮ್ಮನೆ ಬಿಎಸ್ವೈ ವಿರುದ್ದ ಕೇಸು

ಯಡಿಯೂರಪ್ಪನವರ ವಿರುದ್ದ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈಗಾಗಲೇ ಅವರ ಮೇಲೆ ಸಾಕಷ್ಟು ಕೇಸುಗಳಿವೆ. ನಾವು ಮತ್ತು ಯಡಿಯೂರಪ್ಪ ಐದು ನಿಮಿಷ ಭೇಟಿಯಾಗಿದ್ದೇ ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ - ಕುಮಾರಸ್ವಾಮಿ.

ಸೌಹಾರ್ದಯುತ ಭೇಟಿಯಾಗಿತ್ತು

ಸೌಹಾರ್ದಯುತ ಭೇಟಿಯಾಗಿತ್ತು

ಇದು ನಮ್ಮ ಮತ್ತು ಯಡಿಯೂರಪ್ಪ ನಡುವಿನ ಸೌಹಾರ್ದಯುತ ಭೇಟಿಯಾಗಿತ್ತು. ಈ ಭೇಟಿ ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಾಂಗ್ರೆಸ್ ನಾಯಕರಿಗೆ ಇದರಿಂದ ನಿದ್ದೆಯೇ ಬರುತ್ತಿಲ್ಲ - ಕುಮಾರಸ್ವಾಮಿ.

ಕಾಂಗ್ರೆಸ್ಸಿಗರಿಗೆ ಕಾಡುತ್ತಿರುವ ಭಯ

ಕಾಂಗ್ರೆಸ್ಸಿಗರಿಗೆ ಕಾಡುತ್ತಿರುವ ಭಯ

ನಮ್ಮ ಮತ್ತು ಯಡಿಯೂರಪ್ಪನವರ ಭೇಟಿಯನ್ನು ರಾಜಕೀಯವಾಅಗಿ ವಿಶ್ಲೇಸುವಂತೆ, ನಾವಿಬ್ಬರೂ ಮುಂದಿನ ದಿನಗಳಲ್ಲಿ ಒಂದಾದರೆ ನಮಗೆ ಕಷ್ಟ ಎನ್ನುವ ಭಯ ಕಾಂಗ್ರೆಸ್ಸಿಗರನ್ನು ಕಾಡಲಾರಂಭಿಸಿದೆ. ಇದರಿಂದ ಕಾಂಗ್ರೆಸ್ಸಿಗರಿಗೆ ನಿದ್ದೆ ಬರುತ್ತಿಲ್ಲ - ಕುಮಾರಸ್ವಾಮಿ.

ಸಿಎಜಿ ವರದಿ

ಸಿಎಜಿ ವರದಿ

ಸಿಎಜಿ ವರದಿಯಲ್ಲಿ ಉಲ್ಲೇಖಗೊಂಡ ಪ್ರಕರಣಗಳಿಗೆಲ್ಲಾ ಮೊಕದ್ದಮೆ ಹೂಡುತ್ತಾ ಕೂತರೆ ಲಕ್ಷಾಂತರ ಕೇಸುಗಳನ್ನು ಸರಕಾರ ದಾಖಲಿಸಬೇಕಾಗುತ್ತದೆ. ಸಿದ್ದರಾಮಯ್ಯ ಸರಕಾರ ಅಂತಹ ಕೆಲಸವನ್ನು ಮಾಡುತ್ತದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸರಕಾರ ಏನೂ ಪ್ರಯೋಜನವಿಲ್ಲ

ಸರಕಾರ ಏನೂ ಪ್ರಯೋಜನವಿಲ್ಲ

ಎರಡು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೂ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ, ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದಾರೋ, ಆಡಳಿತ ನಡೆಸುತ್ತಿದ್ದಾರೋ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

English summary
If JDS and Yeddyurappa hands together, Congress will have tough time in state, JDS State President H D Kumaraswamy during his Dharwad to Belagavi padayatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X