ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ದಿನದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಗದೇ ಇದ್ದಲ್ಲಿ 'ಬಿಯರ್ ನಾಶದ' ಆತಂಕ!

|
Google Oneindia Kannada News

ಮಾರ್ಚ್ 23ರಿಂದ ಲಾಕ್ ಡೌನ್ ಘೋಷಣೆಯಾದ ನಂತರ, ಒಂದು ಇಲಾಖಾ ವ್ಯಾಪ್ತಿಯ ವಿಚಾರ ಅತಿಹೆಚ್ಚು ಚರ್ಚೆಯಾಗಿದ್ದೆಂದರೆ ಅದು ಅಬಕಾರಿ ಇಲಾಖೆಯೇ ಇರಬೇಕು.

ರಾಜಸ್ವ ತಂದುಕೊಡುವಲ್ಲಿ ಎರಡನೇ ಸ್ಥಾನದಲ್ಲಿರುವ ಅಬಕಾರಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳು ಓಪನ್ ಮಾಡಲು ಸರಕಾರ ಅನುಮತಿ ನೀಡುತ್ತೋ, ಇಲ್ಲವೋ ಎನ್ನುವುದನ್ನು ಮದ್ಯಪ್ರಿಯರು ಕಣ್ಣಿಗೆ ಎಣ್ಣೆಬಿಟ್ಟುಕೊಂಡ ಹಾಗೇ ಕಾಯುತ್ತಿದ್ದಾರೆ.

ಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

ಎಣ್ಣೆ ಅಂಗಡಿ ಓಪನ್ ಮಾಡುವ ವಿಚಾರದಲ್ಲಿ ಪ್ರಧಾನಿ ಮೋದಿಯಿಂದ ಹಿಡಿದು, ಸಿಎಂ ಯಡಿಯೂರಪ್ಪನವರಿಗೆ ಒತ್ತಡದ ಮೇಲೆ ಒತ್ತಡ ಬರುತ್ತಲೇ ಇದೆ. ಆದರೂ, ಕಳೆದ ಸುಮಾರು ನಲವತ್ತು ದಿನಗಳಿಂದ ಇದಕ್ಕೆ ಅವಕಾಶವನ್ನು ಸರಕಾರ ನೀಡಲಿಲ್ಲ.

ಕೊರೊನಾ ಅಂತ್ಯವಾಗುವವರೆಗು ಮದ್ಯ ನಿಷೇಧ ಮಾಡೋದು ಒಳ್ಳೆಯದುಕೊರೊನಾ ಅಂತ್ಯವಾಗುವವರೆಗು ಮದ್ಯ ನಿಷೇಧ ಮಾಡೋದು ಒಳ್ಳೆಯದು

ಕೊರೊನಾ ವೈರಾಣುವಿನಿಂದ ಎಷ್ಟು ಜನ ಮೃತಪಟ್ಟರೋ, ಅದಕ್ಕಿಂತ ಹೆಚ್ಚು ಮದ್ಯ ಸಿಗದೇ ಇದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ರಾಜ್ಯದಲ್ಲಿ ಜಾಸ್ತಿ ಎನ್ನುವುದು ವಾಸ್ತವತೆ. ಈಗ ಮೇ ಮೂರಕ್ಕೂ ಮದ್ಯದಂಗಡಿ ಓಪನ್ ಮಾಡದೇ ಇದ್ದಲ್ಲಿ ಬಿಯರ್ ನಾಶ ಪಡಿಸುವ ಸ್ಥಿತಿ ಎದುರಾಗಬಹುದು ಎನ್ನುವ ಭೀತಿ ಕಾಡುತ್ತಿದೆ.

ಮೋದಿಜೀ.. ಮದ್ಯದಂಗಡಿ ಓಪನ್ ಮಾಡಿ, ಎಲ್ಲರೂ ಟೀ ಕುಡಿಯೋಲ್ಲಾ

ಮೋದಿಜೀ.. ಮದ್ಯದಂಗಡಿ ಓಪನ್ ಮಾಡಿ, ಎಲ್ಲರೂ ಟೀ ಕುಡಿಯೋಲ್ಲಾ

ಮದ್ಯದಂಗಡಿ ಓಪನ್ ಮಾಡುವ ವಿಚಾರದಲ್ಲಿ ಜೋಕ್ಸ್, ಮೀಮ್ಸ್ ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿತ್ತದ್ದು ಒಂದಲ್ಲಾ, ಎರಡಲ್ಲಾ. "ಮನೆಮನೆಗೆ ಬಂದು ಪಲ್ಸ್ ಪೊಲಿಯೋ ಒಂದು ಡ್ರಾಪ್ ಹಾಕುತ್ತೀರಾ, ನಾಲ್ಕೇ ನಾಲ್ಕು ಎಣ್ಣೆ ಡ್ರಾಪ್ಸ್ ಹಾಕಿ". "ಮೋದಿಜೀ.. ಮದ್ಯದಂಗಡಿ ಓಪನ್ ಮಾಡಿ, ಎಲ್ಲರೂ ಟೀ ಕುಡಿಯೋಲ್ಲಾ".. ಹೀಗೆ ಹಲವು ಜೋಕ್ಸ್ ಹರಿದಾಡುತ್ತಿದ್ದವು.

ಸ್ಟಾಕ್ ನಲ್ಲಿರುವ ಬಿಯರ್ ಗಳನ್ನುನಾಶ ಮಾಡಬೇಕಾದ ಆತಂಕ

ಸ್ಟಾಕ್ ನಲ್ಲಿರುವ ಬಿಯರ್ ಗಳನ್ನುನಾಶ ಮಾಡಬೇಕಾದ ಆತಂಕ

"ರಾಜ್ಯದಲ್ಲಿ ಮೇ 3ರ ನಂತರವೂ ಮದ್ಯ ಮಾರಾಟಕ್ಕೆ ಅವಕಾಶ ಸಿಗದೇ ಇದ್ದ ಪಕ್ಷದಲ್ಲಿ, ಸ್ಟಾಕ್ ನಲ್ಲಿರುವ ಬಿಯರ್ ಗಳನ್ನು ನಾಶ ಮಾಡಬೇಕಾದ ಆತಂಕ ಎದುರಾಗಿದೆ. ಯಾಕೆಂದರೆ ಬಿಯರ್ ಗಳ ವಾಯ್ದೆ ಮೂರರಿಂದ ಆರು ತಿಂಗಳು. ಬಹುತೇಕ, ರಾಜ್ಯದ ಮದ್ಯದಂಗಡಿಗಳಲ್ಲಿ ಈಗ ಇರುವುದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ಪ್ರೊಡಕ್ಷನ್ ಆಗಿರುವ ಬಿಯರ್ ಗಳು " ಎನ್ನುವುದು ಮದ್ಯ ಮಾರಾಟ ಸಂಘದ ಅಧಿಕಾರಿಗಳ ನೋವಿನ ಮಾತು.

ಬೇಸಿಗೆ, ಬಿಯರ್ ಹೆಚ್ಚು ಸ್ಟಾಕ್

ಬೇಸಿಗೆ, ಬಿಯರ್ ಹೆಚ್ಚು ಸ್ಟಾಕ್

"ಬೇಸಿಗೆ ಎದುರಾಗುತ್ತಿರುವುದರಿಂದ, ಬಿಯರ್ ಅನ್ನು ಹೆಚ್ಚು ಸ್ಟಾಕ್ ಎಲ್ಲಾ ಮದ್ಯದಂಗಡಿಯಲ್ಲಿ ಇಟ್ಟುಕೊಂಡಿರುತ್ತಾರೆ. ಶೆಲ್ಫ್ ಬಿಯರ್ ವಾಯ್ದೆ ಮೂರು ತಿಂಗಳು ಮಾತ್ರ. ಮೇ ಮೂರಕ್ಕೂ ಅಂಗಡಿ ಓಪನ್ ಮಾಡಲು ಅನುಮತಿ ಸಿಗದೇ ಇದ್ದರೆ, ಅಂದಾಜು ಸುಮಾರು ಒಂದು ಲಕ್ಷ ಬಿಯರ್ ಕೇಸ್ ಅನ್ನು ನಾಶ ಮಾಡಬೇಕಾಗುತ್ತದೆ" ಎನ್ನುವುದು ವೈನ್ ಸ್ಟೋರ್ ಮಾಲೀಕರ ಅಳಲು.

ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದೇವೆ

ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದೇವೆ

ದಿನದಲ್ಲಿ ಕೆಲವೇ ಕೆಲವು ಗಂಟೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದರೆ ಸಾಕು. ಸರಕಾರದ ಮಾರ್ಗಸೂಚಿಯನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ. ನಮಗೆ, ನಮ್ಮದೇ ಆದ ಸಾವಿರ ತೊಂದರೆಗಳಿವೆ. ಈಗಾಗಲೇ, ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ನಮ್ಮ ಎಲ್ಲಾ ತೊಂದರೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದೇವೆ" ಎನ್ನುತ್ತಾರೆ ಬಾರ್ ಎಂಡ್ ರೆಸ್ಟೋರೆಂಟ್ ಓನರ್ ಗಳು.

English summary
If Government Not Allowed To Open Liquor Shop, Lakhs Of Litres Of Beer Going To Be Waisted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X