ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿಎಂ: ರಮೇಶ್ ಜಾರಕಿಹೊಳಿ Vs ಶ್ರೀರಾಮುಲು, ಹೈಕಮಾಂಡ್ ಒಲವು ಯಾರತ್ತ?

|
Google Oneindia Kannada News

ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ, ಒಟ್ಟಿನಲ್ಲಿ ದಿನಕ್ಕೊಂದು ಸುದ್ದಿಗಳು ಈ ವಿಚಾರದಲ್ಲಿ ಹೊರಬೀಳುತ್ತಿವೆ. ಇದಕ್ಕೆಲ್ಲಾ ಉತ್ತರ ನೀಡಬೇಕಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಬಿಜೆಪಿ ವರಿಷ್ಠರಿಂದಾಗಲಿ ಯಾವುದೇ ಸ್ಪಷ್ಟನೆ ಇನ್ನೂ ಈ ಸಂಬಂಧ ಬರಬೇಕಷ್ಟೇ.

ಸಂಪುಟಕ್ಕೆ ಯಾರನ್ನು ಸೇರಿಸುತ್ತಾರೋ, ಬಿಡುತ್ತಾರೋ, ವಾಲ್ಮೀಕಿ ಸಮುದಾಯ ಮಾತ್ರ ಉಪಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದು ಕೂತಿದೆ. ಆರೋಗ್ಯ ಸಚಿವ ಶ್ರೀರಾಮುಲು, ಸೋಮವಾರ (ಜ 27) ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಸಂಪುಟ ಪುನರ್ ರಚನೆ ಬಗ್ಗೆ ಸಚಿವರ ಒಗ್ಗಟ್ಟಿನ ಹೇಳಿಕೆ ಗುಟ್ಟು!ಸಂಪುಟ ಪುನರ್ ರಚನೆ ಬಗ್ಗೆ ಸಚಿವರ ಒಗ್ಗಟ್ಟಿನ ಹೇಳಿಕೆ ಗುಟ್ಟು!

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾದ ರಮೇಶ್ ಜಾರಕಿಹೊಳಿ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಜೊತೆಗೆ, ಶ್ರೀರಾಮುಲು ಕೂಡಾ ಲಾಬಿ ನಡೆಸುತ್ತಿದ್ದಾರೆ.

ಜನರಿಗಾಗಿ ಆರೋಗ್ಯ ಸಚಿವ ಶ್ರೀರಾಮುಲು ಇಟ್ಟ ಬೇಡಿಕೆ ಏನು?ಜನರಿಗಾಗಿ ಆರೋಗ್ಯ ಸಚಿವ ಶ್ರೀರಾಮುಲು ಇಟ್ಟ ಬೇಡಿಕೆ ಏನು?

ಜನವರಿ 29 ರಂದು ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದೆ ಎಂಬ ಸುದ್ದಿಯ ನಡುವೆ, ವಾಲ್ಮೀಕಿ ಪೀಠದ ಶ್ರೀಗಳು, ಶ್ರೀರಾಮುಲು ಅವರನ್ನು ಭೇಟಿಯಾಗಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಡಿಸಿಎಂ ಹುದ್ದೆ ನನಗೇ ಕೊಡಬೇಕೆಂದು ನಾನೇನೂ ಬೇಡಿಕೆಯನ್ನು ಇಟ್ಟಿಲ್ಲ

ಡಿಸಿಎಂ ಹುದ್ದೆ ನನಗೇ ಕೊಡಬೇಕೆಂದು ನಾನೇನೂ ಬೇಡಿಕೆಯನ್ನು ಇಟ್ಟಿಲ್ಲ

"ಉಪಮುಖ್ಯಮಂತ್ರಿ ಹುದ್ದೆ ನನಗೇ ಕೊಡಬೇಕೆಂದು ನಾನೇನೂ ವೈಯಕ್ತಿಕವಾಗಿ ಬೇಡಿಕೆಯನ್ನು ಇಟ್ಟಿಲ್ಲ. ಆದರೆ, ನಾನು ಪ್ರತಿನಿಧಿಸುವ ಸಮುದಾಯ ಈ ಸ್ಥಾನವನ್ನು ಅಪೇಕ್ಷಿಸುತ್ತಿದೆ" ಎಂದು ಶ್ರೀರಾಮುಲು ಹೇಳಿದ್ದಾರೆ. "ಯಾರಿಗೆ ಯಾವ ಸ್ಥಾನ ನೀಡಬೇಕು ಎನ್ನುವುದು ಪಕ್ಷಕ್ಕೆ ಗೊತ್ತಿದೆ" ಎಂದು ಶ್ರೀರಾಮುಲು ಹೇಳಿದ್ದಾರೆ.

ಬಿಜೆಪಿ ಹೈಕಮಾಂಡಿನ ಮೊದಲ ಆಯ್ಕೆ ರಾಮುಲು?

ಬಿಜೆಪಿ ಹೈಕಮಾಂಡಿನ ಮೊದಲ ಆಯ್ಕೆ ರಾಮುಲು?

ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು, ಈ ಇಬ್ಬರಲ್ಲಿ ಯಾರಿಗೆ ಡಿಸಿಎಂ ಹುದ್ದೆ ಯಾರಿಗೆ ನೀಡಬೇಕು ಎಂದಾಗ ಬಿಜೆಪಿ ಹೈಕಮಾಂಡಿನ ಮೊದಲ ಆಯ್ಕೆ ರಾಮುಲು ಎಂದು ಹೇಳಲಾಗುತ್ತಿದೆ. ವರಿಷ್ಠರ ಒಲವು ನನ್ನ ಮೇಲೆಯೇ ಎನ್ನುವ ಮಾತನ್ನು ಶ್ರೀರಾಮುಲು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ.

ರಮೇಶ್ ಜಾರಕಿಹೊಳಿ Vs ಶ್ರೀರಾಮುಲು

ರಮೇಶ್ ಜಾರಕಿಹೊಳಿ Vs ಶ್ರೀರಾಮುಲು

ಸಂಪುಟ ರಚನೆಯ ಕಸರತ್ತು ಅಂತಿಮ ಹಂತ ತಲುಪುತ್ತಿರುವ ಹೊತ್ತಿನಲ್ಲಿ ವಾಲ್ಮೀಕಿ ಪೀಠದ ಪ್ರಸನ್ನಾಂದಪುರಿ ಶ್ರೀಗಳು, ಶ್ರೀರಾಮುಲು ಅವರನ್ನು ಭೇಟಿಯಾಗಿದ್ದಾರೆ. ಡಿಸಿಎಂ ವಿಚಾರದಲ್ಲಿ ಸಮುದಾಯದಲ್ಲೇ ಪೈಪೋಟಿ ಬೇಡ. ಇಬ್ಬರೂ (ಜಾರಕಿಹೊಳಿ, ಶ್ರೀರಾಮುಲು) ಹಠಕ್ಕೆ ಬಿದ್ದರೆ, ಯಾರಿಗೂ ಸಿಗದಂತಾಗಬಹುದು ಎನ್ನುವ ಎಚ್ಚರಿಕೆಯನ್ನು ಇಬ್ಬರಿಗೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಾಲ್ಮೀಕಿ ಪೀಠದ ಶ್ರೀಗಳು

ವಾಲ್ಮೀಕಿ ಪೀಠದ ಶ್ರೀಗಳು

"ನಮ್ಮ ಸಮುದಾಯಕ್ಕೆ ಜಾರಕಿಹೊಳಿ ಮತ್ತು ಶ್ರೀರಾಮುಲು ಎರಡು ಕಣ್ಣಿದ್ದಂತೆ. ಇಬ್ಬರಲ್ಲಿ ಯಾರಿಗಾದರೂ ಡಿಸಿಎಂ ಹುದ್ದೆ ನೀಡಿದರೆ ನಮಗೆ ಅಭ್ಯಂತರವಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೂ ಮನವಿಯನ್ನು ಮಾಡಲಾಗಿದೆ" ಎಂದು ವಾಲ್ಮೀಕಿ ಪೀಠದ ಶ್ರೀಗಳು ಹೇಳಿದ್ದಾರೆ. "ಸಿಎಂ ಮತ್ತು ಹೈಕಮಾಂಡ್ ಗೆ ನನ್ನ ಮೇಲೆ ಒಲವು ಇದೆ ಎನ್ನುವ ಮಾತನ್ನು ಅಲ್ಲಗಳೆಯುವುದಿಲ್ಲ" ಎಂದು ಶ್ರೀರಾಮುಲು ಹೇಳಿದ್ದಾರೆ.

English summary
If DCM Position Given To Valmiki Community First Choice Of High Command Whom? Ramesh Jarkiholi Or Sriramulu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X