ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಲ್ಲಾ, ನಾಳೆ ಸಂಪುಟ ಪುನರ್ ರಚನೆಯಾದಾರೆ, ಈ ನಾಲ್ವರಿಗೆ ಕೊಕ್?

|
Google Oneindia Kannada News

ಯಡಿಯೂರಪ್ಪನವರು ದೆಹಲಿ ಪ್ರವಾಸದಲ್ಲಿ ಇರುವುದರಿಂದ, ಸಹಜವಾಗಿಯೇ ಸಚಿವ ಸ್ಥಾನದ ಡಜನ್ ಗಟ್ಟಲೇ ಆಕಾಂಕ್ಷಿಗಳು, ರಾಜಧಾನಿಯಿಂದ ಬಿಎಸ್ವೈ ಹೊತ್ತುತರುವ ಸಂದೇಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಆದರೆ, ಜೆ.ಪಿ.ನಡ್ಡಾ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಆಗಿದ್ದರೂ, ಅಮಿತ್ ಶಾ ಅವರ ಬಳಿ ಸಮಾಲೋಚಿಸಿದೇ, ನಡ್ಡಾ ಯಾವುದೇ ಪ್ರಮುಖ ಕೆಲಸವನ್ನು ಮಾಡಲಾರರು ಎನ್ನುವುದು ಬಿಜೆಪಿಯಲ್ಲಿ ಗೊತ್ತಿರುವ ವಿಚಾರ.

ಹಾಗಾಗಿ, ಯಡಿಯೂರಪ್ಪನವರು ಯಾವ ಪ್ರಮುಖ ಉದ್ದೇಶಕ್ಕಾಗಿ ದೆಹಲಿಗೆ ಹೋಗಿದ್ದಾರೋ, ಅದು ಸದ್ಯಕ್ಕೆ ಕೈಗೂಡುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ. ಆದರೂ, ಬಿಎಸ್ವೈ, ರಾಜನಾಥ್ ಸಿಂಗ್ ಮತ್ತು ಬಿ.ಎಲ್.ಸಂತೋಷ್ ಬಳಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ: ಬಂದ ದಾರಿಗೆ ಸುಂಕವಿಲ್ಲ? ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ: ಬಂದ ದಾರಿಗೆ ಸುಂಕವಿಲ್ಲ?

ಯಡಿಯೂರಪ್ಪನವರ ಮೊದಲ ಆದ್ಯತೆ ಎಂದರೆ ಸಂಪುಟ್ ಪುನರ್ ರಚನೆ ಮಾಡುವುದು. ಅದಕ್ಕೆ, ಗ್ರೀನ್ ಸಿಗ್ನಲ್, ವರಿಷ್ಠರ ಕಡೆಯಿಂದ ಸಿಗದಿದ್ದರೆ, ಸಂಪುಟ ವಿಸ್ತರಣೆ ಮಾಡಬಹುದು. ಒಂದು ವೇಳೆ, ಪುನರ್ ರಚನೆಗೆ ವರಿಷ್ಠರು ಒಪ್ಪಿದರೆ, ಈ ನಾಲ್ವರಿಗೆ ಸಂಪುಟದಿಂದ ಕೊಕ್ ಆಗಬಹುದು.

ವಿಧಾನಮಂಡಲದ ಅಧಿವೇಶನ ಆರಂಭ

ವಿಧಾನಮಂಡಲದ ಅಧಿವೇಶನ ಆರಂಭ

ಸೋಮವಾರದಿಂದ (ಸೆ 21) ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದೆ. ಜೊತೆಗೆ, ವಿರೋಧ ಪಕ್ಷಗಳಿಗೆ, ಆಡಳಿತ ಪಕ್ಷವನ್ನು ಕಟ್ಟಿಹಾಕಲು ಸಾಕಷ್ಟು ಅಸ್ತ್ರಗಳನ್ನು ಬಿಜೆಪಿಯವರೇ ಕೊಟ್ಟಿರುವುದರಿಂದ, ಸಂಪುಟ್ ಪುನರ್ ರಚನೆ ಅಥವಾ ವಿಸ್ತರಣೆಗೆ, ಬಿಜೆಪಿ ಹೈಕಮಾಂಡ್ ಅನುಮತಿ ನೀಡುವ ಸಾಧ್ಯತೆ ಕಮ್ಮಿಯೆಂದು ಹೇಳಲಾಗುತ್ತಿದೆ.

ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ನಿರ್ಧಾರವನ್ನು ಯಡಿಯೂರಪ್ಪ ಹೊಂದಿದ್ದಾರೆ

ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ನಿರ್ಧಾರವನ್ನು ಯಡಿಯೂರಪ್ಪ ಹೊಂದಿದ್ದಾರೆ

ಸದ್ಯ ಸಂಪುಟದಲ್ಲಿರುವ ನಾಲ್ವರನ್ನು ಕೈಬಿಟ್ಟು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ನಿರ್ಧಾರವನ್ನು ಯಡಿಯೂರಪ್ಪ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಒಂದು ವೇಳೆ ಇದಕ್ಕೆ ವರಿಷ್ಠರು ಒಪ್ಪಿದರೆ, ಒಟ್ಟು ಎಂಟು ಮುಖಂಡರಿಗೆ ಸಂಪುಟದಲ್ಲಿ ಅವಕಾಶ ನೀಡಲು ಬಿಎಸ್ವೈ ನಿರ್ಧರಿಸಿದ್ದಾರೆ. ಇದರಲ್ಲಿ ತಮ್ಮ ಸರಕಾರ ಬರಲು ಕಾರಣರಾದವರೂ ಸೇರಿದ್ದಾರೆ.

ವಿಜಯೇಂದ್ರ ಸೂಪರ್ ಸಿಎಂ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು!ವಿಜಯೇಂದ್ರ ಸೂಪರ್ ಸಿಎಂ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು!

ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ

ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ

ಆ ನಾಲ್ವರಲ್ಲಿ ಒಬ್ಬರು ಹಾಲೀ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿರುವ, ಜೊತೆಗೆ ಸಾರಿಗೆ ಖಾತೆಯನ್ನೂ ನಿಭಾಯಿಸುತ್ತಿರುವ ಲಕ್ಷ್ಮಣ ಸವದಿ. ಆದರೆ, ಸವದಿ ನೇರವಾಗಿ ಹೈಕಮಾಂಡ್ ಕಡೆಯಿಂದ ಆ ಹುದ್ದೆಗೆ ಆಯ್ಕೆಯಾಗಿರುವುದರಿಂದ ವರಿಷ್ಠರು ಒಪ್ಪುತ್ತಾರೋ ಎಂದು ಕಾದು ನೋಡಬೇಕಿದೆ. ಇನ್ನೊಬರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ.

Recommended Video

Sandalwood Drug mafia ವಿಚಾರವಾಗಿ Akul , santosh ,yuvarajಗೆ CCB ಬುಲಾವ್ | Oneindia Kannada
ಮುಜರಾಯಿ, ಮೀನುಗಾರಿಕಾ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ

ಮುಜರಾಯಿ, ಮೀನುಗಾರಿಕಾ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ

ಮೂಲಗಳ ಪ್ರಕಾರ, ಇನ್ನಿಬ್ಬರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೋಟದಿಂದ ಸಂಪುಟಕ್ಕೆ ಆಯ್ಕೆಯಾಗಿರುವ ಏಕೈಕ ಶಾಸಕರಾಗಿರುವ ಮುಜರಾಯಿ, ಒಳನಾಡು, ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ. ಇನ್ನೊಬ್ಬರು ಅರಣ್ಯ ಸಚಿವ ಸಿ.ಸಿ.ಪಾಟೀಲ್ ಕೂಡಾ, ಕೊಕ್ ಗೊಳ್ಳಲಿರುವ ಹಾಲೀ ಸಚಿವರು ಎಂದು ಹೇಳಲಾಗುತ್ತಿದೆ.

English summary
If BJP High Command Agreed For Cabinet Expansion, Yediyurappa May Axe Four Ministers,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X