ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಪಕ್ಷದಲ್ಲಿ ಯಾರ ಮನೆ ಗೇಟನ್ನು ಕಾಯಬೇಕಿಲ್ಲ; ಭವಾನಿ ರೇವಣ್ಣ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ: ಅಶ್ವಥ್ ನಾರಾಯಣ್

ನಮ್ಮ ಪಕ್ಷದಲ್ಲಿ ಯಾರ ಮನೆ ಗೇಟನ್ನು ಕಾಯಬೇಕಿಲ್ಲ. ಜೆಡಿಎಸ್​ ನ ಭವಾನಿ ರೇವಣ್ಣ ಅವರು ಬಿಜೆಪಿಗೆ ಬಂದರೆ ಹೃದಯಪೂರ್ವಕ ಸ್ವಾಗತ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.

|
Google Oneindia Kannada News

ಮೈಸೂರು,ಜನವರಿ28: ಹಾಸನ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸುವುದಾಗಿ ಆಸೆ ವ್ಯಕ್ತ ಪಡಿಸಿದ್ದ ಭಾವನಿ ರೇವಣ್ಣ ನವರ ಆಸೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ತಣ್ಣೀರು ಎರಚಿದ್ದು, ಬಿಜೆಪಿ ನಾಯಕರಿಂದ ಭಾವನಿ ರೇವಣ್ಣ ನವರಿಗೆ ಆಹ್ವಾನಗಳು ಹೆಚ್ಚಾಗುತ್ತಿದ್ದು, ಸಿಟಿ ರವಿ ಬಳಿಕ ಸಚಿವ ಅಶ್ವಥ್ ನಾರಾಯಣ್ ಸಹ ಪಕ್ಷಕ್ಕೆ ಭವಾನಿ ರೇವಣ್ಣರಿಗೆ ಆಹ್ವಾನ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ, ನಮ್ಮ ಪಕ್ಷದಲ್ಲಿ ಯಾರ ಮನೆಯನ್ನೂ ಕಾಯಬೇಕಿಲ್ಲ, ಯಾರ ಗೇಟನ್ನು ಕಾಯಬೇಕಿಲ್ಲ, ಬಿಜೆಪಿಯಲ್ಲಿ ಮುಕ್ತವಾಗಿ ಬೆಳೆಯುವ ಅವಕಾಶವಿದೆ. ಹೀಗಾಗಿ ಜೆಡಿಎಸ್​ ನ ಭವಾನಿ ರೇವಣ್ಣ ಅವರು ಬಿಜೆಪಿಗೆ ಬಂದರೆ ಹೃದಯಪೂರ್ವಕ ಸ್ವಾಗತ ಎಂದು ಹೇಳಿದ್ದಾರೆ.

Bhavani Revanna : ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್Bhavani Revanna : ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್

ಭವಾನಿ ಅಕ್ಕ ಹೊಳೆನರಸೀಪುರದಿಂದ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಲಿ: ಸಿ ಟಿ ರವಿ

ಜೆಡಿಎಸ್‌ನಲ್ಲಿ ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಅವರನ್ನು ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

 If Bhavani Revanna Comes To Our Party, Welcome Said Minister Ashwath Narayan

ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಮನೆಯಲ್ಲಿ ಗಲಾಟೆಯನ್ನು ಹಚ್ಚಿಸಲು ಬಯಸುವುದಿಲ್ಲ. ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಬೇಕು ಎನ್ನುವುದು ಎನ್ನುವ ಅಚ್ಚರಿ ಹೇಳಿಕೆ ನೀಡಿದ್ದಾರೆ. ಭವಾನಿ ಹೊಳೆನರಸೀಪುರದಿಂದ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಲಿ ಭವಾನಿ ಅವರಿಗಿಂದ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ. ಹಾಸನ‌ ಜಿಲ್ಲೆ‌ಯ ರಾಜಕಾರಣವನ್ನು ಹತ್ತಿರದಿಂದ ಗಮನಿಸಿದ್ದೇನೆ. ಆದರೆ ರೇವಣ್ಣ ಮತ್ತು ಭವಾನಿ ಅವರ ನಡುವೆ ಜಗಳ ಹಚ್ಚುವ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದರು.

ಹಾಸನ ಟಿಕೆಟ್ ವಿಚಾರವಾಗಿ ತಲೆ ಹಾಕಬೇಡಿ; ತಾಯಿಯ ಪರ ನಿಂತ ಸೂರಜ್ ರೇವಣ್ಣ

ಹಾಸನದಿಂದ ಆರು ರಿಂದ ಏಳು ಶಾಸಕರನ್ನು ರೇವಣ್ಣ ಅವರು ಆಯ್ಕೆ ಮಾಡಿ ಕಳುಹಿಸಿದ್ದಾರೆ, ಹಾಸನವನ್ನು ರೇವಣ್ಣ ಅವರು ತಿಳಿದಿರುವಷ್ಟು ಬೇರೆ ಯಾರಿಗೂ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

 If Bhavani Revanna Comes To Our Party, Welcome Said Minister Ashwath Narayan

ಸೂರಜ್ ರೇವಣ್ಣ ತಾಯಿ ಭಾವನಿ ರೇವಣ್ಣ ನವರ ಪರವಾಗಿ ಬ್ಯಾಟೀಂಗ್ ಬೀಸಿದ್ದಾರೆ. ಹಾಸನದಲ್ಲಿ ಬೇರೆಯವರನ್ನ ಅಭ್ಯರ್ಥಿ ಮಾಡುವುದನ್ನ ಬಿಡಿ. ಭವಾನಿ ರೇವಣ್ಣ ಅಭ್ಯರ್ಥಿಯಾದ್ರೆ ಗೆಲುವು ಖಚಿತ . ಬರೆದು ಕೊಡುತ್ತೇನೆ ಎಂದು ಕುಮಾರಸ್ವಾಮಿ ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಹಾಸನ ವಿಚಾರದಲ್ಲಿ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಕಳೆದ15 ವರ್ಷದಿಂದ ರೇವಣ್ಣ ಹಾಸನ ನಿಭಾಯಿಸುತ್ತಿದ್ದಾರೆ. 2018ರಲ್ಲಿ ಹಾಸನ ಕ್ಷೇತ್ರವನ್ನ ಜೆಡಿಎಸ್ ಕಳೆದುಕೊಂಡಿದೆ. 2023ರಲ್ಲಿ ಹಾಸನದಲ್ಲಿ ಜೆಡಿಎಸ್ ಮರುಜನ್ಮ ಪಡೆಯಬೇಕು. ಹಾಸನದಲ್ಲಿ 15 ವರ್ಷದಿಂದ ಸತತವಾಗಿ ಗೆಲ್ಲಿಸಿದ್ದು ರೇವಣ್ಣ. ರೇವಣ್ಣರವರ ಸ್ವಂತ ಪ್ರಯತ್ನದಿಂದ ಹಾಸನದಲ್ಲಿ 7 ಸೀಟ್ ಗೆದ್ದಿದ್ದೇವೆ. ಹೀಗಾಗಿ ಹಾಸನ ರಾಜಕಾರಣವನ್ನ ಹೆಚ್.ಡಿ ರೇವಣ್ಣ ಅವರು ನೋಡಿಕೊಳ್ಳುತ್ತಾರೆ. ಹಾಸನವನ್ನ ರೇವಣ್ಣ ಅವರು ಅರಿತಷ್ಟು ಯಾರು ಅರಿತಿಲ್ಲ. ಆರರಿಂದ ಏಳು ಶಾಸಕರನ್ನ ಆಯ್ಕೆ ಮಾಡಿ ಕಳಿಸಿದ್ದಾರೆ. ರೇವಣ್ಣ ಬಿಟ್ಟರೇ ನಿರ್ಧರಿಸುವ ಅಧಿಕಾರ ಇನ್ಯಾರಿಗೂ ಇಲ್ಲ ಎಂದಿದ್ದಾರೆ.

English summary
karnataka Assembly Elections 2023; If Bhavani Revanna comes to our party, welcome said Minister Ashwath Narayan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X