ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಗೆಲ್ಲಲು ಹೋಮ, ಹವನ, ಪೂಜೆ, ಪ್ರಾರ್ಥನೆ

|
Google Oneindia Kannada News

ಬೆಂಗಳೂರು, ಮಾ. 25: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಇಡೀ ಪ್ರಪಂಚವೇ ಎದುರುನೋಡುತ್ತಿದೆ. ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಭಾರತ ಗೆಲ್ಲಲಿ ಎಂದು ಹಾರೈಸಿ ಪೂಜೆ, ಹೋಮ-ಹವನ, ಪ್ರಾರ್ಥನೆಗಳು ನಡೆಯುತ್ತಿವೆ.

ಉಡುಪಿ ಶ್ರೀ ಕೃಷ್ಣನಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ವಿದ್ಯಾವಲ್ಲಭ ತೀರ್ಥರು ಭಾರತ ಜಯಶಾಲಿಯಾಗಲೆಂದು ಆಶಿಸಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಈ ಸಾರಿ ಭಾರತ ವಿಶ್ವಕಪ್ ಗೆಲ್ಲಲಿದೆ. ಉತ್ತಮ ಪ್ರದರ್ಶನ ನೀಡುತ್ತಿರುವ ತಂಡ 2015 ರ ವಿಶ್ವಕಪ್ ನ್ನು ಗೆದ್ದು ದೇಶಕ್ಕೆ ಹಿಂದಿರುಗಲಿದೆ ಎಂದು ಹೇಳಿದರು.[ಎಂಎಸ್ ಧೋನಿ ರಣ ತಂತ್ರ ಇಂದಿಗೂ ಎಂದೆಂದಿಗೂ]

ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಬೆಂಗಳೂರು, ಶಿವಮೊಗ್ಗ, ಧಾರವಾಡ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದೆಲ್ಲೆಡೆ ಹೋಮ ಹವನಗಳನ್ನು ನಡೆಸಲಾಗುತ್ತಿದೆ. ನಗರದ ಪ್ರಮುಖ ಭಾಗಗಳಲ್ಲಿ, ಮಾಲ್ ಗಳಲ್ಲಿ ಪಂದ್ಯ ವೀಕ್ಷಿಸಲು ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ.

ಎಲ್ಲೆಲ್ಲಿಯೂ ಕ್ರಿಕೆಟ್ ಕ್ರೇಜ್ ಮನೆ ಮಾಡಿದ್ದು, ಮುಖದ ಮೇಲೆ, ಮೈ ಮೇಲೆ ಭಾರತದ ತ್ರಿವರ್ಣ ಧ್ವಜದ ಬಣ್ಣ ಹಾಕಿಸಿಕೊಳ್ಳುತ್ತಿರುವವರಿಗೂ ಕಡಿಮೆಯಿಲ್ಲ. ಜಯ್ ಹೋ, ಗೆದ್ದು ಬಾ ಇಂಡಿಯಾ, ಟೀಮ್ ಇಂಡಿಯಾ... ಎನ್ನುವ ಘೊಷಣೆಗಳು ಈಗಾಗಲೇ ಕೇಳಿ ಬರುತ್ತಿವೆ.(ಪಿಟಿಐ ಚಿತ್ರಗಳು)

ಮುಖಕ್ಕೆ ತ್ರಿವರ್ಣ ರಂಗು

ಮುಖಕ್ಕೆ ತ್ರಿವರ್ಣ ರಂಗು

ಭಾರತ ಆಸ್ಟ್ರೇಲಿಯಾವನ್ನು ಬಗ್ಗುಬಡಿದೇ ಬಡಿಯುತ್ತೇ ಎಂಬ ಖಾತ್ರಿಯಲ್ಲಿ ವಿಜಯದ ಸಿಂಬಲ್ ತೋರಿಸುತ್ತಿರುವ ಫರಿದಾಬಾದ್ ಯುವತಿಯರು. ಯುವಜನತೆಗೆ ಕ್ರಿಕೆಟ್ ಜ್ವರ ಹಿಡಿದಿದ್ದು ರಾಷ್ಟ್ರದೆಲ್ಲೆಡೆ ಇಂಥದ್ದೇ ವಾತಾವರಣ ಕಂಡುಬರುತ್ತಿದೆ.

ಹೋಮ ಹವನಕ್ಕೆ ಕೊನೆಯಿಲ್ಲ

ಹೋಮ ಹವನಕ್ಕೆ ಕೊನೆಯಿಲ್ಲ

ತ್ರಿವರ್ಣ ಧ್ವಜದ ಎದುರು ಪ್ರಾರ್ಥನೆ ಸಲ್ಲಿಸಿ ಭಾರತದ ಗೆಲುವಿಗೆ ವಾರಣಾಸಿಯಲ್ಲಿ ಯಾಗ. ವಿದ್ಯಾರ್ಥಿಗಳು, ಶಿಕ್ಷಕರು ಯಾಗದಲ್ಲಿ ಪಾಲ್ಗೊಂಡಿದ್ದು ಎಲ್ಲರದ್ದು ಒಂದೇ ಪ್ರಾರ್ಥನೆ ಜೈ ಹೋ ಇಂಡಿಯಾ.

ನಾವು ಕೊಡಕ್ಕಿಲ್ಲ

ನಾವು ಕೊಡಕ್ಕಿಲ್ಲ

ದೇಶದೆಲ್ಲಡೇ ಕೇಳಿ ಬರುತ್ತಿರುವ ಕೂಗು ಒಂದೇ 'ನಾವು ಕೊಡಕ್ಕಿಲ್ಲ'. ಹೌದು ಕಳೆದ ಸಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ನಮಗೆ ಈ ಬಾರಿ ಪಟ್ಟ ಬಿಟ್ಟುಕೊಡಲು ಮನಸ್ಸಿಲ್ಲ ಎಂಬುದನ್ನು ಸಾರಿ ಹೇಳಿದ ಅಭಿಮಾನಿಗಳು.

ಪ್ರಾರ್ಥನೆ ಫಲಿಸದೆ ಇದ್ದಿತೇ

ಪ್ರಾರ್ಥನೆ ಫಲಿಸದೆ ಇದ್ದಿತೇ

ಕ್ರಿಕೆಟ್ ಮಹಾಯುದ್ಧದಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಹಾರೈಸಿ ವಾರಣಾಸಿಯಲ್ಲಿ ಮುಸ್ಲಿಮರಿಂದ ಪ್ರಾರ್ಥನೆ.

English summary
Bengaluru: Defending champions India will hope the law of averages does not catch up with them when they clash with hosts Australia in a widely-anticipated World Cup semi-final in Sydney on Thursday. To wish India will definitely win the World Cup, all over the nation and people doing special worship in temples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X