ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ಬೆಂಗಳೂರಿಗೆ ವರ್ಗಾವಣೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 22 : ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡಿದ ಕಾರಣಕ್ಕೆ ಮೊಹ್ಮದ್ ಮೊಯ್ಸಿನ್ ಅವರನ್ನು ಅಮಾನತು ಮಾಡಲಾಗಿತ್ತು.

ಮೊಹ್ಮದ್ ಮೊಯ್ಸಿನ್ ಅವರು ಬೆಂಗಳೂರಿಗೆ ತೆರಳಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ರಿಪೋರ್ಟ್ ಮಾಡಿಕೊಳ್ಳಬೇಕು. ಇನ್ನು ಮುಂದೆ ಬೆಂಗಳೂರು ಮೊಹ್ಮದ್ ಮೊಯ್ಸಿನ್ ಅವರು ಕೇಂದ್ರ ಸ್ಥಾನವಾಗಿರುತ್ತದೆ ಎಂದು ಆದೇಶ ನೀಡಿದೆ.

ಮೋದಿ ಹೆಲಿಕಾಪ್ಟರ್ ನಲ್ಲಿದ್ದ ಆ 'ಕಪ್ಪು ಟ್ರಂಕ್' ಬಗ್ಗೆ ಕಾಂಗ್ರೆಸ್ ದೂರುಮೋದಿ ಹೆಲಿಕಾಪ್ಟರ್ ನಲ್ಲಿದ್ದ ಆ 'ಕಪ್ಪು ಟ್ರಂಕ್' ಬಗ್ಗೆ ಕಾಂಗ್ರೆಸ್ ದೂರು

ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ಅವರನ್ನು ಒಡಿಶಾ ರಾಜ್ಯದ ಸಂಬಲ್ ಪುರ್ದಕ್ಕೆ ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿತ್ತು. ಮೊಹ್ಮದ್ ಮೊಯ್ಸಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದರು.

ಪ್ರಧಾನಿ ಹೆಲಿಕಾಪ್ಟರ್ ಕಪ್ಪುಪೆಟ್ಟಿಗೆಯಲ್ಲಿ ಏನಿತ್ತು?: ನಿವೃತ್ತ ಅಧಿಕಾರಿ ಹೇಳಿದ್ದೇನು?ಪ್ರಧಾನಿ ಹೆಲಿಕಾಪ್ಟರ್ ಕಪ್ಪುಪೆಟ್ಟಿಗೆಯಲ್ಲಿ ಏನಿತ್ತು?: ನಿವೃತ್ತ ಅಧಿಕಾರಿ ಹೇಳಿದ್ದೇನು?

IAS officer Mohammed Mohsin now in Bengaluru

ಚುನಾವಣಾ ಆಯೋಗದ ನಿಯಮದಂತೆ ಎಸ್‌ಪಿಜಿ ಭದ್ರತೆ ಇರುವ ವ್ಯಕ್ತಿಗಳ ಹೆಲಿಕಾಪ್ಟರ್ ತಪಾಸಣೆ ಮಾಡುವಾಗ ಕೆಲವು ನಿಯಮ ಅನುಸರಿಸಬೇಕು. ಆದರೆ, ಯಾವ ನಿಯಮವನ್ನು ಮೊಹ್ಮದ್ ಮೊಯ್ಸಿನ್ ಪಾಲನೆ ಮಾಡಿರಲಿಲ್ಲ. ಆದ್ದರಿಂದ, ಅವರನ್ನು ಅಮಾನತು ಮಾಡಲಾಗಿತ್ತು.

ಮೋದಿ ಹೆಲಿಕಾಪ್ಟರ್ ನಿಂದ ಇಳಿಸಿದ(?) ಆ ನಿಗೂಢ ಬಾಕ್ಸ್ ನ ರಹಸ್ಯವೇನು?ಮೋದಿ ಹೆಲಿಕಾಪ್ಟರ್ ನಿಂದ ಇಳಿಸಿದ(?) ಆ ನಿಗೂಢ ಬಾಕ್ಸ್ ನ ರಹಸ್ಯವೇನು?

ಒಡಿಶಾದ ಮುಖ್ಯ ಚುನಾವಣಾಧಿಕಾರಿ ಸುರೇಂದ್ರ ಕುಮಾರ್ ಸಲ್ಲಿಸಿದ ವರದಿ ಅನ್ವಯ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಮೊಹ್ಮದ್ ಮೊಯ್ಸಿನ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

English summary
Mohammed Mohsin Karnataka cadre IAS officer asked to report office of the Chief Electoral Officer, Karnataka. Mohammed Mohsin suspended after he ordered checking of the Prime Minister's helicopter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X