ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲು ವಾಸದ ಬಗ್ಗೆ ದೀರ್ಘ ಇತಿಹಾಸವಿದೆ, ಸೂಕ್ತ ಸಮಯದಲ್ಲಿ ಹೇಳ್ತೀನಿ: ಡಿಕೆಶಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 25: 'ಜೈಲು ವಾಸದ ಬಗ್ಗೆ ಹೇಳುವುದಕ್ಕೆ ಸಾಕಷ್ಟಿದೆ ಎಂದಿರುವ ಡಿ.ಕೆ.ಶಿವಕುಮಾರ್, ಆ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ.

ಇಂದು ಬೆಳಿಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಡಿ.ಕೆ.ಶಿವಕುಮಾರ್, 'ಜೈಲು ವಾಸದ್ದು ಸುದೀರ್ಘ ಇತಿಹಾಸವೇ ಇದೆ, ಅದರ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ' ಎಂದಿದ್ದಾರೆ.

ಡಿಕೆಶಿ ಬಿಡುಗಡೆ ಸಂಭ್ರಮಿಸಲು ಉಚಿತ ಆಟೋ ಪ್ರಯಾಣಡಿಕೆಶಿ ಬಿಡುಗಡೆ ಸಂಭ್ರಮಿಸಲು ಉಚಿತ ಆಟೋ ಪ್ರಯಾಣ

ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, 'ಸದ್ಯಕ್ಕೆ ರಾಜಕಾರಣದ ಬಗ್ಗೆ ಏನೂ ಮಾತನಾಡುವುದಿಲ್ಲ, ಅದಕ್ಕೂ ಸೂಕ್ತ ಸಮಯ ಬರಲಿ' ಎಂದಷ್ಟೆ ಹೇಳಿದರು.

I Will Tell My Jail Story Some Day: DK Shivakumar

'ನಾನು ಹಲವು ನಾಯಕರಿಗೆ ಸಹಾಯ ಮಾಡಿದ್ದೇನೆ, ಅವರು ಉಪಕಾರ ಸ್ಮರಣೆ ಮಾಡುವುದು ಸಾಮಾನ್ಯ, ಆದರೆ ನನ್ನಿಂದ ನೇರವಾಗಿ ಏನೂ ಪಡೆಯದ ಲಕ್ಷಾಂತರ ಜನ ನನಗಾಗಿ ಪ್ರಾರ್ಥನೆ ಮಾಡಿದ್ದಾರೆ, ಅವರ ಋಣ ನನ್ನ ಮೇಲಿದೆ' ಎಂದು ಭಾವನಾತ್ಮಕವಾಗಿ ಡಿ.ಕೆ.ಶಿವಕುಮಾರ್ ಹೇಳಿದರು.

 ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾದ ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾದ ಡಿಕೆ ಶಿವಕುಮಾರ್

'ನನ್ನನ್ನು ಲೂಟಿಕೋರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಯಿತು, ಆದರೆ ಜನ ಇದಾವುದನ್ನೂ ಲೆಕ್ಕಿಸದೆ, ನನಗೋಸ್ಕರ ಬಂದು ಪ್ರತಿಭಟನೆ ಮಾಡಿದರು. ಆ ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ' ಎಂದು ಹೇಳಿದರು.

ಕೆಲವು ಆರೋಗ್ಯ ಸಮಸ್ಯೆ ಇವೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ ಎಂದ ಡಿ.ಕೆ.ಶಿವಕುಮಾರ್, 'ನನಗೆ ಬೆನ್ನು ನೋವು ಕಾಡುತ್ತಿದೆ, ಈಗ ಆಸ್ಪತ್ರೆಗೆ ಹೋಗುತ್ತಿದ್ದೇನೆ' ಎಂದು ಹೇಳಿ ಹೊರಟರು. ಇಂದು ಡಿ.ಕೆ.ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು.

ಶನಿವಾರ ಡಿಕೆಶಿ ಬೆಂಗಳೂರಿಗೆ; ಕೆಪಿಸಿಸಿ ಕಚೇರಿಗೆ ಭೇಟಿ ಶನಿವಾರ ಡಿಕೆಶಿ ಬೆಂಗಳೂರಿಗೆ; ಕೆಪಿಸಿಸಿ ಕಚೇರಿಗೆ ಭೇಟಿ

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಸೆಪ್ಟೆಂಬರ್ 3 ರಂದು ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಅಕ್ಟೋಬರ್ 23 ರ ಬುಧವಾರದಂದು ದೆಹಲಿ ಹೈಕೋರ್ಟ್ ಜಾಮೀನು ನೀಡಿತು.

ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್, ನಾಳೆ (ಅಕ್ಟೋಬರ್ 26) ರಾಜ್ಯಕ್ಕೆ ವಾಪಸ್ಸಾಗಲಿದ್ದು, ಭಾರಿ ಸಂಖ್ಯೆಯ ಅಭಿಮಾನಿಗಳು ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲಿದ್ದಾರೆ.

English summary
Congress DK Shivakumar said i will tel my jail story some day. He also said this is not right time to talk about current politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X