ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿದೆ, ಸಾಲ ಮಾಡಿ ಸಹಾಯ ಮಾಡುತ್ತೇನೆ: ಪ್ರಕಾಶ್ ರೈ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಕೋವಲಂನಲ್ಲಿರುವ 250 ಮಂದಿ ನಿರಾಶ್ರಿತ, ದಿನಗೂಲಿ ಕಾರ್ಮಿಕರಿಗೆ ಪ್ರತಿ ದಿನವೂ ಆಹಾರ ನೀಡುತ್ತಿರುವ ನಟ ಪ್ರಕಾಶ್ ರೈ, ತಮ್ಮ ಫಾರ್ಮ್ ಹೌಸ್‌ನಲ್ಲಿ ಸಂಗ್ರಹಿಸಿರುವ ಅಕ್ಕಿ ಮತ್ತು ಧಾನ್ಯಗಳನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

"ನನ್ನ ಬಳಿಯಿದ್ದ ರಿಸರ್ವ್ ಫಂಡ್ ನೋಡಿದೆ. ನನ್ನ ಫಾರ್ಮ್, ಮನೆ, ಫಿಲಂ ಪ್ರೊಡಕ್ಷನ್, ಫೌಂಡೇಶನ್ ಮತ್ತು ನನ್ನ ಖಾಸಗಿ ಸಿಬ್ಬಂದಿಗಳಿಗೆ ಮೇ ತಿಂಗಳವರೆಗಿನ ಸಂಬಳವನ್ನು ಮುಂಗಡವಾಗಿ ನೀಡಿದೆ" ಎಂದು ಪ್ರಕಾಶ್ ರೈ, ಟ್ವೀಟ್ ನಲ್ಲಿ ಹಿಂದೆ ಬರೆದುಕೊಂಡಿದ್ದರು.

ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್! ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್!

ಕೊರೊನಾ ಸಂಕಷ್ಟದ ಸಮಯದಲ್ಲಿ ಮತ್ತೆ ಟ್ವೀಟ್ ಮಾಡಿರುವ ಪ್ರಕಾಶ್ ರೈ,"ನನ್ನ ಹಣಕಾಸಿನ ಸಂಪನ್ಮೂಲಗಳು ಕ್ಷೀಣಿಸುತ್ತಿವೆ. ಆದರೂ, ಸಾಲ ಮಾಡಿಯಾದರೂ, ನೆರವನ್ನು ಮುಂದುವರಿಸುತ್ತೇನೆ" ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

My Financial Resources Depleting, But Will Take A Loan And Continue Reaching Out

"ಕಳೆದುಕೊಂಡಿದ್ದನ್ನು ಮತ್ತೆ ಪಡೆಯಲು ನಮಗೆ ಅವಕಾಶ ಇದ್ದೇ ಇರುತ್ತದೆ. ಆದರೆ, ದೇಶ ಎದುರಿಸುತ್ತಿರುವ ಇಂತಹ ಕಷ್ಟದ ಸಮಯದಲ್ಲಿ ಮನುಷ್ಯತ್ವ ಉಳಿಯಬೇಕಾಗಿರುವುದು ಬಹಳ ಮುಖ್ಯ. ಸಾಧ್ಯವಾದಷ್ಟು ಎಲ್ಲರೂ ಸಹಾಯ ಮಾಡುವ ಮೂಲಕ, ಎಲ್ಲರೂ ಒಂದಾಗೋಣ"ಎಂದು ಪ್ರಕಾಶ್ ರೈ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

"ಪಾದರಾಯನಪುರ ಗಲಾಟೆ: ಮನುಕುಲವೇ ತಲೆ ತಗ್ಗಿಸುವಂತ ಕೃತ್ಯ'

"ಲೂಟಿ ಮಾಡುವವರು ಲೂಟಿ ಮಾಡುತ್ತಲೇ ಇರುತ್ತಾರೆ, ಮನುಷ್ಯತ್ವ ಇರುವವರು ಸಹಾಯ ಮಾಡುತ್ತಲೇ ಇರುತ್ತಾರೆ". "ಸಿನಿಮಾದಲ್ಲಿ ಖಳನಾಯಕನಾಗಿರುವುದರಿಂದ ನಿಮ್ಮನ್ನು ದ್ವೇಷಿಸುತ್ತೇನೆ. ಆದರೆ, ಉತ್ತಮ ಮನುಷ್ಯತ್ವ ಉಳ್ಳವರಾಗಿ ನಿಮ್ಮನ್ನು ಪ್ರೀತಿಸುತ್ತೇನೆ" ಇದು ಪ್ರಕಾಶ್ ರೈ, ಟ್ವೀಟಿಗೆ ಬಂದ ರಿಪ್ಲೈಗಳಲ್ಲೊಂದು.

"ಕೊರೊನಾ - ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ನನ್ನ ಮೂರು ಚಿತ್ರದ ಚಿತ್ರೀಕರಣ ನಿಂತಿದೆ. ಅಲ್ಲಿನ ಪ್ರೊಡಕ್ಷನ್ ನಲ್ಲಿ ದಿನದ ವೇತನದ ಲೆಕ್ಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಹಣ ಸಹಾಯ ಮಾಡಿದ್ದೇನೆ" ಎಂದು ಪ್ರಕಾಶ್ ರೈ ಹೇಳಿದ್ದರು.

English summary
My Financial Resources Depleting, But Will Take A Loan And Continue Reaching Out
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X