ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ರಾಜಕೀಯ ಸನ್ಯಾಸಿ ಎಂದು ಎಲ್ಲಿಯೂ ಹೇಳಿಲ್ಲ: ಪರಮೇಶ್ವರ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಫೆಬ್ರವರಿ 2 : ನಾನು ರಾಜಕೀಯ ಸನ್ಯಾಸಿ ಅಂತಾ ಎಲ್ಲೂ ಹೇಳಿಲ್ಲ, ಕಾಂಗ್ರೆಸ್ ಪಕ್ಷದ ವರಿಷ್ಠರು, ಶಾಸಕರು ಪರಮೇಶ್ವರ ಮುಖ್ಯಮಂತ್ರಿ ಆಗಲಿ ಎಂದರೆ ಆಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದರು.

ಬೆಳಗಾವಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈಗ ನನ್ನ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಸಿಎಂ ಯಾರಾಗುತ್ತಾರೆ ಎನ್ನುವುದನ್ನು ಶಾಸಕಾಂಗ ಸಭೆಯಲ್ಲಿ ಹೇಳುತ್ತಾರೆ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಕೊರಟಗೆರೆಯಲ್ಲಿ ಪರಮೇಶ್ವರ ಗ್ರಾಮ ವಾಸ್ತವ್ಯ, ಪ್ರಚಾರ!ಕೊರಟಗೆರೆಯಲ್ಲಿ ಪರಮೇಶ್ವರ ಗ್ರಾಮ ವಾಸ್ತವ್ಯ, ಪ್ರಚಾರ!

ನಾವು ಯಾರನ್ನು ಬೇಕಾದರೂ ಸಿಎಂ ಆಕಾಂಕ್ಷಿ ಎಂದು ಕೊಂಡು ತಿರುಗಾಡಬಹುದು, ಪಕ್ಷ ಮತ್ತು ಪಕ್ಷದ ವರಿಷ್ಠರು ಸಿಎಂ ಯಾರು ಆಗಬೇಕೆಂದು ಹೇಳುತ್ತಾರೆ. ಪಕ್ಷಕ್ಕೆ ಯಾರಾದರೂ ಒಬ್ಬರು ಯಜಮಾನರು ಬೇಕು.ನಮ್ಮ ಯಜಮಾನರು ಹೈಕಮಾಂಡ್.ಹೈಕಮಾಂಡ ಎಲ್ಲವನ್ನೂ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

I will not retire from active politics: Parameshwar

ಪ್ರಧಾನಿ ಮೋದಿ ಆಗಮನದ ವೇಳೆ ಬೆಂಗಳೂರು ಬಂದ್ ವಿಚಾರ ಕುರಿತು ಮಾತನಾಡಿದ ಅವರು, ಬೆಂಗಳೂರು ಬಂದ್ ಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಬಿಜೆಪಿಯವಂತೆ ಚೀಫ್ ಪೊಲಿಟಿಕ್ಸ್ ಮಾಡುವ ಅಗತ್ಯವಿಲ್ಲ. ನಾವು ಐದು ವರ್ಷ ಅಭಿವೃದ್ಧಿ ಮಾಡುತ್ತೇವೆ. ರಾಹುಲ್ ಗಾಂಧಿ ಬಂದಾಗ ಬಂದ್ ಮಾಡುವುದು, ಗಲಾಟೆ ಮಾಡಿಸುವುದು ಬಿಜೆಪಿಗೆ ಬಿಟ್ಟಿದ್ದು ನಾವೇನು ಭದ್ರತೆ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದರು.

ಮೋದಿ ಬೆಂಗಳೂರಿಗೆ ಬರಬೇಕಾಗಿಲ್ಲ : ಚಂಪಾ ಕಿಡಿಮೋದಿ ಬೆಂಗಳೂರಿಗೆ ಬರಬೇಕಾಗಿಲ್ಲ : ಚಂಪಾ ಕಿಡಿ

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು, ನ್ಯಾಯಾಧೀಕರಣದ ಹೊರಗೆ ಮಹದಾಯಿ ವಿವಾದ ಇತ್ಯರ್ಥ ಮಾಡಬೇಕು. ಪ್ರಧಾನಿ ಮೋದಿ ಸ್ಪಂದಿಸುತ್ತಿಲ್ಲ ಅದು ನಮ್ಮ ದುರಂತ ಎಂದು ಹೇಳಿದರು.

English summary
KPCC president Dr. G Parameshwar clarified he never told that he will take retirement from active politics and if the party high command wants to be as chief minister he would accept the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X