ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ ನೀಡಿದ ಎಚ್.ವಿಶ್ವನಾಥ್‌

|
Google Oneindia Kannada News

Recommended Video

ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ ನೀಡಿದ ಎಚ್ ವಿಶ್ವನಾಥ್ | Oneindia Kannada

ಬೆಂಗಳೂರು, ಜೂನ್ 04: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಚ್.ವಿಶ್ವನಾಥ್ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು, ಈಗ ಅದಕ್ಕೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಅವರು, ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಕೈಗೊಂಬೆಯಾಗಬೇಕಾಯಿತು: ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಆಕ್ರೋಶ ಸಿದ್ದರಾಮಯ್ಯ ಕೈಗೊಂಬೆಯಾಗಬೇಕಾಯಿತು: ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಆಕ್ರೋಶ

ಸಚಿವ ಸ್ಥಾನದ ಭರವಸೆ ನೀಡಿದ್ದರಿಂದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಯನ್ನೂ ತಳ್ಳಿ ಹಾಕಿದ ವಿಶ್ವನಾಥ್, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆದರೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಪಕ್ಷದ ಮುಖಂಡರ ಮೇಲೆ, ಕಾಂಗ್ರೆಸ್‌ನ ವಿರುದ್ಧ ವಿಶ್ವನಾಥ್‌ ಅವರು ಅಸಮಾಧಾನ ಹೊರಹಾಕಿದ್ದರು. ಹಾಗಾಗಿ ಅವರು ಜೆಡಿಎಸ್ ತೊರೆಯುತ್ತಾರೆ ಎನ್ನಲಾಗಿತ್ತು. ಆದರೆ ಅದೆಲ್ಲಾ ಕೇವಲ ವದಂತಿಯಷ್ಟೆ ಎಂದು ವಿಶ್ವನಾಥ್ ಹೇಳಿದ್ದಾರೆ.

ಮಂತ್ರಿ ಆಗಲು ರಾಜೀನಾಮೆ ಕೊಟ್ಟಿಲ್ಲ: ವಿಶ್ವನಾಥ್

ಮಂತ್ರಿ ಆಗಲು ರಾಜೀನಾಮೆ ಕೊಟ್ಟಿಲ್ಲ: ವಿಶ್ವನಾಥ್

ನಾನು ಮಂತ್ರಿ ಆಗಬೇಕೆಂಬ ಆಸೆಯಿಂದ ರಾಜೀನಾಮೆ ಕೊಟ್ಟಿಲ್ಲ, ನನಗೆ ಸಚಿವನಾಗಬೇಕು ಎಂಬ ಆಸೆಯೂ ಇಲ್ಲ, ಸಚಿವ ಸ್ಥಾನ ಕೊಡಿ ಎಂದು ಯಾರ ಬಳಿಯೂ ಕೇಳಿಲ್ಲ ಎಂದು ವಿಶ್ವನಾಥ್ ಹೇಳಿದರು.

ಪಕ್ಷದ ಬಗ್ಗೆ ಅಸಮಾಧಾನ ಹೊರಹಾಕಿದ್ದ ವಿಶ್ವನಾಥ್‌

ಪಕ್ಷದ ಬಗ್ಗೆ ಅಸಮಾಧಾನ ಹೊರಹಾಕಿದ್ದ ವಿಶ್ವನಾಥ್‌

ಜೆಡಿಎಸ್ ವರಿಷ್ಠ ದೇವೇಗೌಡ ಅವರಿಗೆ ವಿಶ್ವನಾಥ್ ಅವರು ಬರೆದಿದ್ದ ರಾಜೀನಾಮೆ ಪತ್ರದಲ್ಲಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇತ್ತೀಚೆಗೆ ಜೆಡಿಎಸ್‌ನ ದುರಹಂಕಾರದಿಂದಲೇ ಸೋಲಾಗಿದೆ ಎಂದು ಸಹ ಹೇಳಿದ್ದರು. ಇದು ವಿಶ್ವನಾಥ್ ಅವರು ಬಿಜೆಪಿ ಸೇರುವ ಬಗ್ಗೆ ಅನುಮಾನ ಹುಟ್ಟಿಸಿತ್ತು.

ರೆಕ್ಕೆ ಕತ್ತರಿಸಿದ ಹಳ್ಳಿ ಹಕ್ಕಿಯ ನೋವಿನ ಹಾಡುರೆಕ್ಕೆ ಕತ್ತರಿಸಿದ ಹಳ್ಳಿ ಹಕ್ಕಿಯ ನೋವಿನ ಹಾಡು

ಬಿಜೆಪಿ ಸೇರುವುದಿಲ್ಲ: ವಿಶ್ವನಾಥ್

ಬಿಜೆಪಿ ಸೇರುವುದಿಲ್ಲ: ವಿಶ್ವನಾಥ್

ಆದರೆ ವಿಶ್ವನಾಥ್ ಅವರು ತಾವು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ವಿಶ್ವನಾಥ್ ಅವರು ಒಮ್ಮೆ ಪಕ್ಷಾಂತರ ಮಾಡಿದ್ದಾರೆ. ಅವರು ಕಾಂಗ್ರೆಸ್‌ನಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದರು, ನಂತರ ಅವರು ಜೆಡಿಎಸ್‌ ಸೇರ್ಪಡೆಗೊಂಡು ಈಗ ಶಾಸಕರೂ ಆಗಿದ್ದಾರೆ.

ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ

ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ

ಹಿಂದೊಮ್ಮೆ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಇರುವ ಅವರಿಗೆ ಸಚಿವ ಸ್ಥಾನ ನಿಭಾಯಿಸುವ ಅನುಭವ, ಚಾಕಚಕ್ಯತೆ ಪ್ರಭುದ್ಧತೆ ಇದೆ. ಆದರೆ ಈಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ವಿಶ್ವನಾಥ್ ಅಂತಹಾ ರಾಜಕಾರಣಿಯನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆಯೇ ಎಂಬುದು ಅನುಮಾನ.

ಮತ್ತೆ ಸಿದ್ದರಾಮಯ್ಯ ವಿರುದ್ಧ ಸೋತ ವಿಶ್ವನಾಥ್ ಮತ್ತೆ ಸಿದ್ದರಾಮಯ್ಯ ವಿರುದ್ಧ ಸೋತ ವಿಶ್ವನಾಥ್

English summary
JDS leader H Vishwanath said i will not leave JDS party. He today resigns to JDS state president post. He said i am not minister post aspirant also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X